Parliament: ಆಡಳಿತಾರೂಢ, ವಿಪಕ್ಷ ಸಂಸದರಿಗೆ ಶೋಭೆಯಲ್ಲ…ಕೋಲಾಹಲಕ್ಕೆ ಸ್ಪೀಕರ್‌ ಆಕ್ರೋಶ

ಪ್ರಜಾಪ್ರಭುತ್ವದ ದೇಗುಲದಿಂದ ಪಾಸಿಟಿವ್‌ ಸಂದೇಶ ಹೊರ ಹೋಗುವಂತಾಗಬೇಕು

Team Udayavani, Dec 10, 2024, 3:23 PM IST

Parliament: ಆಡಳಿತಾರೂಢ, ವಿಪಕ್ಷ ಸಂಸದರಿಗೆ ಶೋಭೆಯಲ್ಲ…ಕೋಲಾಹಲಕ್ಕೆ ಸ್ಪೀಕರ್‌ ಆಕ್ರೋಶ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಗೌತಮ್‌ ಅದಾನಿ ಹಾಗೂ ಸೋನಿಯಾ ಗಾಂಧಿ, ಜಾರ್ಜ್‌ ಸೊರೊಸ್‌ ವಿಷಯಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಸಂಸದರ ನಡುವೆ ಮಾತಿನ ಚಕಮಕಿ, ತೀವ್ರ ಕೋಲಾಹಲ ನಡೆದ ಪರಿಣಾಮ ಮಂಗಳವಾರ(ಡಿ.09)ವೂ ಸಂಸತ್‌ ಕಲಾಪವನ್ನು ಸ್ಪೀಕರ್‌ ಮುಂಡೂಡುವಂತಾಗಿದೆ.

ಸ್ಪೀಕರ್‌ ಅಸಮಾಧಾನ, ಆಕ್ರೋಶ:

ಸಂಸತ್‌ ಕಲಾಪಕ್ಕೆ ಅಗೌರವ ತೋರಿದ ಸಂಸದರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿರುವ ಸ್ಪೀಕರ್‌ ಓಂ ಬಿರ್ಲಾ ಅವರು, ನಮ್ಮದು ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ನಾವು ಕೋಟ್ಯಂತರ ಜನರ ನಿರೀಕ್ಷೆ ಮತ್ತು ಆಶಯಗಳನ್ನು ಪೂರ್ಣಗೊಳಿಸಬೇಕಾದ ಹೊಣೆಗಾರಿಕೆ ಹೊಂದಿದ್ದೇವೆ. ಅದಕ್ಕಾಗಿ ಲೋಕಸಭೆಯ ಗೌರವವನ್ನು ಕಾಪಾಡಬೇಕು. ಆದರೆ ಇಲ್ಲಿ ನಡೆಯುತ್ತಿರುವ ಬೆಳವಣಿಗೆ ಒಳ್ಳೆಯದಲ್ಲ ಎಂದು ಹೇಳಿದರು.

ಇಲ್ಲಿ ಆಡಳಿತಾರೂಢ ಇರಲಿ ಅಥವಾ ವಿಪಕ್ಷ ಸದಸ್ಯರಿರಲಿ ಪ್ರತಿಯೊಬ್ಬರು ಗೌರವವನ್ನು ಕಾಪಾಡಬೇಕು. ನಾವೆಲ್ಲಾ ಒಗ್ಗಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ ಈ ಪ್ರಜಾಪ್ರಭುತ್ವದ ದೇಗುಲದಿಂದ ಪಾಸಿಟಿವ್‌ ಸಂದೇಶ ಹೊರ ಹೋಗುವಂತಾಗಬೇಕು ಎಂದು ಸ್ಪೀಕರ್‌ ಬಿರ್ಲಾ ಸಂಸದರಿಗೆ ನೀತಿ ಸಂದೇಶ ರವಾನಿಸಿದ್ದರು.

ಒಂದು ವಿಚಾರವನ್ನು ಒಪ್ಪುವುದು, ಬಿಡುವುದು ಪ್ರಜಾಪ್ರಭುತ್ವದ ಆರೋಗ್ಯಕರ ಲಕ್ಷಣದ ಒಂದು ಭಾಗವಾಗಿದೆ. ಆಡಳಿತಾರೂಢ ಹಾಗೂ ವಿಪಕ್ಷ ಸಂಸದರು ಒಟ್ಟಾಗಿ ಕುಳಿತು ಭಿನ್ನಾಭಿಪ್ರಾಯಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಬಿರ್ಲಾ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ವಿಪಕ್ಷ ಸಂಸದರು, ಸೊರೊಸ್‌ ಮತ್ತು ಸೋನಿಯಾ ಗಾಂಧಿ ವಿರುದ್ಧದ ಬಿಜೆಪಿ ಆರೋಪದ ಬಗ್ಗೆ ಚರ್ಚೆ ನಡೆಸಲು ಅನುಮತಿ ನೀಡುವಂತೆ ಒತ್ತಾಯಿಸಿದರು. ಆದರೆ ಸ್ಪೀಕರ್‌ ಬಿರ್ಲಾ ಅವರು ಪ್ರಶ್ನೋತ್ತರ ವೇಳೆ ಆರಂಭಿಸಲು ನಿರಾಕರಿಸಿದರು. ದಯವಿಟ್ಟು ಸುಗಮ ಕಲಾಪ ನಡೆಸಲು ಅವಕಾಶ ನೀಡಿ ಎಂದು ಸ್ಪೀಕರ್‌ ಮತ್ತೊಮ್ಮೆ ಮನವಿ ಮಾಡಿಕೊಂಡರು.

ರಾಜ್ಯಸಭೆಯಲ್ಲೂ ವಿಪಕ್ಷ ಸದಸ್ಯರು ಸೊರೊಸ್‌, ಸೋನಿಯಾ ಗಾಂಧಿ, ಅದಾನಿ ವಿಷಯ ಕುರಿತು ಚರ್ಚೆ ನಡೆಸಲು ಅವಕಾಶ ನೀಡುವಂತೆ ಪಟ್ಟು ಹಿಡಿದರು. ಆದರೆ ತೀವ್ರ ಕೋಲಾಹಲದಿಂದಾಗಿ ರಾಜ್ಯಸಭೆ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು. ಅದೇ ರೀತಿ ಲೋಕಸಭೆಯ ಕಲಾಪವನ್ನು ಸ್ಪೀಕರ್‌ ಓಂ ಬಿರ್ಲಾ ಬುಧವಾರಕ್ಕೆ ಮುಂದೂಡಿದರು.

ಟಾಪ್ ನ್ಯೂಸ್

After Kohli-Rohit, Jadeja’s place is also up for grabs: BCCI to take tough decision

ಕೊಹ್ಲಿ-ರೋಹಿತ್‌ ಬಳಿಕ ಜಡೇಜಾ ಸ್ಥಾನಕ್ಕೂ ಕುತ್ತು: ಕಠಿಣ ನಿರ್ಧಾರ ಕೈಗೊಂಡ ಬಿಸಿಸಿಐ

ಚಾಹಲ್‌ ಬಳಿಕ ಇದೀಗ ಮನೀಶ್‌ ಪಾಂಡೆ ವಿಚ್ಛೇದನ? ಏನಿದು ವರದಿ

Divorce: ಚಾಹಲ್‌ ಬಳಿಕ ಇದೀಗ ಮನೀಶ್‌ ಪಾಂಡೆ ವಿಚ್ಛೇದನ? ಏನಿದು ವರದಿ

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗೆ ಬಾಂಬ್ ಬೆದರಿಕೆ ಹಾಕಿದ 12ನೇ ತರಗತಿ ವಿದ್ಯಾರ್ಥಿ

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗೆ ಬಾಂಬ್ ಬೆದರಿಕೆ ಹಾಕಿದ 12ನೇ ತರಗತಿ ವಿದ್ಯಾರ್ಥಿ

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

Helmet: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

After Kohli-Rohit, Jadeja’s place is also up for grabs: BCCI to take tough decision

ಕೊಹ್ಲಿ-ರೋಹಿತ್‌ ಬಳಿಕ ಜಡೇಜಾ ಸ್ಥಾನಕ್ಕೂ ಕುತ್ತು: ಕಠಿಣ ನಿರ್ಧಾರ ಕೈಗೊಂಡ ಬಿಸಿಸಿಐ

11-alnavar

Alnavar: ಬೈಕ್- ಓಮಿನಿ ಅಪಘಾತ; ಬೈಕ್ ಸವಾರ ಸಾವು

6

Mangaluru: ಕರಾವಳಿ ಖಗೋಳ ಉತ್ಸವ; ಉಲ್ಕಾ ತುಣುಕು, ನಕ್ಷತ್ರ ವೀಕ್ಷಣೆ ಅವಕಾಶ

5

Bajpe: ಇನ್ಮುಂದೆ ದೀಪಗಳಿಂದ ಬೆಳಗ‌ಲಿದೆ ವಿಮಾನ ನಿಲ್ದಾಣ ರಸ್ತೆ

ulock

Sandalwood: ಅನ್‌ಲಾಕ್‌ ರಾಘವದಿಂದ ಲಾಕ್‌ ಸಾಂಗ್‌ ಬಂತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.