![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jul 10, 2020, 6:10 AM IST
ಬೆಂಗಳೂರು: ಕೋವಿಡ್ ಸಂಕಷ್ಟ ದಿಂದಾಗಿ ಶ್ರಮಿಕ ವರ್ಗದವರು ಮತ್ತು ರೈತರಿಗೆ ಪ್ಯಾಕೇಜ್ ಘೋಷಿಸಿರುವ ಹಿನ್ನೆಲೆಯಲ್ಲಿ ವಿಪತ್ತು ಪರಿಹಾರ ನಿಧಿಯನ್ನು 500 ಕೋಟಿ ರೂ.ವರೆಗೆ ಹೆಚ್ಚಿಸಿ ಅಧ್ಯಾದೇಶ ಹೊರಡಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ
ಕೋವಿಡ್ ಸೋಂಕುಪೀಡಿತರಿಗೆ ಚಿಕಿತ್ಸೆ ನೀಡಲು ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳ ಹಾಸಿಗೆ ಸಾಮರ್ಥ್ಯ ಹೆಚ್ಚಳ ಸಹಿತ ಇತರ ಮೂಲ ಸೌಕರ್ಯ ಕಲ್ಪಿಸಲು 207.98 ಕೋಟಿ ರೂ., ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಉಪಕರಣ ಮತ್ತು ಪೀಠೊಪಕರಣ ಖರೀದಿಗೆ 81.99 ಕೋ.ರೂ. ವೆಚ್ಚಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಈ ಹಿಂದೆ ವಿಪತ್ತು ಪರಿಹಾರ ನಿಧಿ (ಸಾದಿಲ್ವಾರು ವೆಚ್ಚ)ಯಡಿ 80 ಕೋಟಿ ರೂ.ವರೆಗೆ ವೆಚ್ಚ ಮಾಡಲು ಅವಕಾಶವಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಶ್ರಮಿಕ ವರ್ಗ, ಹಣ್ಣು, ತರಕಾರಿ, ಹೂವು ಬೆಳೆಗಾರ ರೈತರಿಗೆ ಪರಿಹಾರ ವಿತರಿಸಲು ಹಣಕಾಸು ಲಭ್ಯತೆ ಅಗತ್ಯವಾಗಿರುವುದರಿಂದ ಈ ಮೊತ್ತವನ್ನು 500 ಕೋ.ರೂ.ಗೆ ಏರಿಸಲು ಸಂಪುಟ ಒಪ್ಪಿದೆ. ತತ್‌ಕ್ಷಣಕ್ಕೆ ಅದು ಜಾರಿಯಾಗಬೇಕಾಗಿರುವುದರಿಂದ ಅಧ್ಯಾದೇಶ ಹೊರಡಿಸಲು ತೀರ್ಮಾನಿಸಲಾಯಿತು ಎಂದು ಸಂಪುಟ ಸಭೆಯ ಅನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಸಾಲ
ಬೆಸ್ಕಾಂ ಸಹಿತ ಐದು ವಿದ್ಯುತ್ ಸರಬರಾಜು ಕಂಪೆನಿ ಗಳು ವಿದ್ಯುತ್ ಖರೀದಿಗಾಗಿ ಬೇರೆ ಬೇರೆ ಕಡೆ ಗಳಿಂದ ಸಾಲ ಪಡೆದಿದ್ದವು. ಸಕಾಲದಲ್ಲಿ ಪಾವತಿ ಮಾಡ ದಿದ್ದರೆ ಅದು ಶಾಶ್ವತ ಎನ್‌ಪಿಎ ಆಗುತ್ತಿತ್ತು. ಹೀಗಾಗಿ ಐದು ಕಂಪೆನಿಗಳಿಗೆ 2,500 ಕೋಟಿ ರೂ. ಬಡ್ಡಿ ರಹಿತ ಸಾಲ ಮಂಜೂರು ಮಾಡಲು ಸಂಪುಟ ಒಪ್ಪಿದೆ. ಇದರಲ್ಲಿ ಬೆಸ್ಕಾಂಗೆ 500 ಕೋ. ರೂ., ಹೆಸ್ಕಾಂಗೆ 400 ಕೋ.ರೂ., ಚಾಮುಂಡೇಶ್ವರಿ ವಿದ್ಯುತ್ ನಿಗಮಕ್ಕೆ 600 ಕೋ.ರೂ. ಸಾಲ ಸೇರಿದೆ ಎಂದು ಮಾಧುಸ್ವಾಮಿ ತಿಳಿಸಿದರು.
ಕವಿಕಾ ಮತ್ತು ಎಂಎಎ ಎಲೆಕ್ಟ್ರಿಕಲ್ ಕಂಪೆನಿಗಳು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವ್ಯಾಪ್ತಿಯಲ್ಲಿದ್ದು, ಅಲ್ಲಿ ತಯಾರಾದ ಶೇ.99 ಉತ್ಪನ್ನಗಳನ್ನು ಸರಕಾರವೇ ಖರೀದಿಸುತ್ತಿದೆ. ತೆರಿಗೆ ಉಳಿತಾಯ ಮತ್ತಿತರ ಆಡಳಿತಾತ್ಮಕ ವೆಚ್ಚ ಕಡಿಮೆ ಮಾಡಲು ಎರಡೂ ಕಂಪೆನಿ ಆಡಳಿತವನ್ನು ಇಂಧನ ಇಲಾಖೆಯ ವ್ಯಾಪ್ತಿಗೆ ತರಲು ಸಂಪುಟ ತೀರ್ಮಾನಿಸಿದೆ ಎಂದರು.
ಕೈಗಾರಿಕೆ ನೀತಿ ಮುಂದೂಡಿಕೆ
2020-25ರ ನೂತನ ಕೈಗಾರಿಕೆ ನೀತಿ ಕುರಿತು ಚರ್ಚಿಸಿ ಒಪ್ಪಿಗೆ ಪಡೆಯುವ ವಿಚಾರ ಸಂಪುಟದ ವಿಷಯ ಪಟ್ಟಿಯಲ್ಲಿದ್ದರೂ ಮುಂದಿನ ಸಭೆಗೆ ಮುಂದೂಡಲಾಯಿತು. ಕೆಲವು ಅಂಶಗಳ ಸೇರ್ಪಡೆ ಹಿನ್ನೆಲೆಯಲ್ಲಿ ಮುಂದೂ ಡಲು ತೀರ್ಮಾನಿಸಲಾಯಿತು ಎನ್ನಲಾಗಿದೆ
ರಾಜಧಾನಿಗೆ ಅಷ್ಟದಿಕಾಲಕರು
ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಸಂಪುಟ ಸಭೆಯಲ್ಲೂ ಆತಂಕ ವ್ಯಕ್ತವಾಯಿತು. ಕೋವಿಡ್ ನಿಯಂತ್ರಣಕ್ಕಾಗಿ ಬೆಂಗಳೂರನ್ನು 8 ವಲಯಗಳನ್ನಾಗಿ ಮಾಡಿ, ಇವುಗಳಿಗೆ ಒಬ್ಬೊಬ್ಬ ಸಚಿವರನ್ನು ಉಸ್ತುವಾರಿಗಳನ್ನಾಗಿ ಮಾಡಲು ನಿರ್ಧರಿಸಲಾಯಿತು. ಸಿಎಂ ಮತ್ತು ಕೋವಿಡ್ ನಿರ್ವಹಣೆ ಉಸ್ತುವಾರಿ ಸಚಿವರು ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು. ಸಂಪುಟ ಸಭೆಯ ಅನಂತರ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಜೆ.ಸಿ. ಮಾಧುಸ್ವಾಮಿ, ಕೋವಿಡ್ ಪ್ರಕರಣಗಳ ಹೆಚ್ಚಳ ಕುರಿತು ಚರ್ಚೆಯಾಯಿತು. ಕೋವಿಡ್ ನಿಯಂತ್ರಣಕ್ಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು ಎಂದರು.
ವಿದೇಶಿ ಬಂಡವಾಳ ಆಕರ್ಷಣೆ
ರಾಜ್ಯಕ್ಕೆ ವಿದೇಶಿ ಬಂಡವಾಳ ಆಕರ್ಷಿಸಲು ಬೋಸ್ಟನ್ ಕನ್ಸಲ್ಟಿಂಗ್ ವಿದ್ಯಾ ಪ್ರೈ. ಲಿ. ಅವರನ್ನು ಸಮಾ ಲೋಚಕ ರಾಗಿ ನೇಮಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಇದರಿಂದ ರಾಜ್ಯದ ಕೈಗಾರಿಕೆ ಮತ್ತಿತರ ವಲಯ ಗಳಲ್ಲಿ ವಿದೇಶಿ ಬಂಡವಾಳ ಹೆಚ್ಚಿನ ಪ್ರಮಾಣ ದಲ್ಲಿ ಹರಿದು ಬರುವ ನಿರೀಕ್ಷೆ ಇದೆ. ಇ-ಆಡಳಿತಕ್ಕೆ ಅನುಕೂಲ ವಾಗುವಂತೆ ಇ-ಸರ್ವಿಸಸ್ ಒದಗಿಸುವ ಸಂಬಂಧ ಮೆ| ಇಎಟಿ ಸರ್ವಿಸಸ್ ಇಂಡಿಯಾ ಲಿ. ಜತೆಗೂಡಿ 2.0 ಲೇಟೆಸ್ಟ್ ಸಾಫ್ಟ್ವೇರ್ ಅಭಿವೃದ್ಧಿ ಸಂಬಂಧ ಮುಂದಿನ 7 ವರ್ಷಗಳಿಗೆ 184.37ಕೋ.ರೂ. ವೆಚ್ಚ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ. ಹಣಕಾಸು ಇಲಾಖೆ ಶಿಫಾರಸು ಮೇರೆಗೆ ಇದಕ್ಕೆ ಅನುಮೋದನೆ ನೀಡಲಾಗಿದೆ. ವಿಜಯಪುರದಲ್ಲಿ ವಿಮಾನ ನಿಲ್ದಾಣ ಯೋಜನೆಯಡಿ 220 ಕೋಟಿ ರೂ. ಮೊತ್ತಕ್ಕೆ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ಸೆಸ್ ಇಳಿಕೆ
ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ಅನಂತರ ಯಾರು ಎಲ್ಲಿ ಬೇಕಾದರೂ ಖರೀದಿ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದರಿಂದ ಎಪಿಎಂಸಿ ಮಾರುಕಟ್ಟೆ ಶುಲ್ಕ ಕಡಿಮೆ ಮಾಡಬೇಕು ಎಂಬ ವರ್ತಕರ ಬೇಡಿಕೆ ಹಿನ್ನೆಲೆಯಲ್ಲಿ ಎಪಿಎಂಸಿ ಸೆಸ್ ಶೇ.1.5ರಿಂದ ಶೇ.1ಕ್ಕೆ ಇಳಿಸಲು ಸಂಪುಟ ತೀರ್ಮಾನಿಸಿದೆ.
ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ
ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 9ಕ್ಕೆ ತಿದ್ದುಪಡಿ ತರಲು ಸಂಪುಟ ತೀರ್ಮಾನಿ ಸಿದ್ದು, ಯಾವುದೇ ಪ್ರಕರಣ ದಾಖಲಾದ ಅನಂತರ ಪ್ರಾಥಮಿಕ ತನಿಖೆ 90 ದಿನಗಳಲ್ಲಿ ಪೂರ್ಣ ಗೊಳ್ಳಬೇಕು. ದೋಷಾರೋಪ ಪಟ್ಟಿ 6 ತಿಂಗಳೊಳಗೆ ಸಲ್ಲಿಕೆಯಾಗಬೇಕು ಎಂಬ ಮಾನದಂಡ ಸೇರಿಸಲು ನಿರ್ಧರಿಸಲಾಗಿದೆ.
ಗುತ್ತಿಗೆ ವೈದ್ಯರಿಗೆ ಅನುಕೂಲ
ಗುತ್ತಿಗೆ ವೈದ್ಯರ ಖಾಯಮಾತಿ ವಿಷಯ ವನ್ನೂ ಸಂಪುಟದಲ್ಲಿ ಚರ್ಚಿಸ ಲಾಗಿದ್ದು, 6 ತಿಂಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಿರುವವರಿಗೆ ಕನಿಷ್ಠ 2.5ರಿಂದ 30ರ ವರೆಗೆ ಸೇವಾವಧಿ ಆಧಾರದ ಮೇಲೆ ಕೃಪಾಂಕ ನೀಡಲು ಒಪ್ಪಿಗೆ ನೀಡಲಾಗಿದೆ. ವಯೋ ಮಿತಿ ಯನ್ನು 21ರಿಂದ 26 ವರ್ಷಗಳ ವರೆಗೆ ವಿಸ್ತರಿಸಲಾಗಿದೆ. ಇದು ಆಯುಷ್ ವೈದ್ಯರಿಗೂ ಅನ್ವಯ ವಾಗಲಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.