ವೈಟ್‌ಹೌಸ್‌ನಿಂದ ಹೊರ ನಡೆಯುವ ಸುಳಿವು ನೀಡಿದ ಟ್ರಂಪ್!
Team Udayavani, Nov 14, 2020, 10:04 PM IST
ವಾಷಿಂಗ್ಟನ್: ಜೋ ಬೈಡೆನ್‌ರ ಗೆಲುವನ್ನು ಒಪ್ಪಿಕೊಳ್ಳದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೇ ಮೊದಲ ಬಾರಿಗೆ ಶ್ವೇತಭವನದಿಂದ ನಿರ್ಗಮಿಸುವ ಸಣ್ಣ ಸುಳಿವು ನೀಡಿದ್ದಾರೆ.
ಕೊರೊನಾ ಲಸಿಕೆ ಪ್ರಗತಿ ಕುರಿತಾಗಿ ಚುಟುಕು ಭಾಷಣದಲ್ಲಿ ಅವರು, “ನಮ್ಮ ಆಡಳಿತ ಲಾಕ್‌ಡೌನ್ ಹೇರಿರಲಿಲ್ಲ. ಆದರೆ, ಭವಿಷ್ಯದಲ್ಲಿ ಯಾವ ಆಡಳಿತದಿಂದ ಏನು ಸಂಭವಿಸುತ್ತೋ ಯಾರಿಗ್ಗೊತ್ತು? ಕಾಲವೇ ಉತ್ತರಿಸುತ್ತೆ…’ ಎಂದಿದ್ದಾರೆ. ಫಲಿತಾಂಶ ಪ್ರಕಟಗೊಂಡ ವಾರದ ಬಳಿಕ ಟ್ರಂಪ್ ಈ ಸಾಲುಗಳ ಮೂಲಕ ಮೌನ ಮುರಿದಿದ್ದಾರೆ.
ರಿಪಬ್ಲಿಕನ್ ಅಭಿಯಾನ: “ಚುನಾವಣೆಯಲ್ಲಿ ಅಕ್ರಮ ನಡೆದಿದೆ’ ಎಂದು ಪುನಃ ಟ್ವೀಟ್‌ನಲ್ಲಿ ಖಂಡಿಸಿರುವ ಟ್ರಂಪ್ ತಮ್ಮ ಬೆಂಬಲಿಗರ ಮೂಲಕ ಬೃಹತ್ ರ್ಯಾಲಿಗೆ ಯೋಜನೆ ರೂಪಿಸಿದ್ದಾರೆ. “ಮತಕಳವು ನಿಲ್ಲಿಸಿ’, “ಮೇಕ್ ಅಮೆರಿಕ ಗ್ರೇಟ್ ಅಗೇನ್’ ಮುಂತಾದ ಸ್ಲೋಗನ್‌ನ ಬ್ಯಾನರನ್ನು ಹಲವು ಗುಂಪುಗಳ ಮೂಲಕ ದೇಶಾದ್ಯಂತ ರಾರಾಜಿಸುವಂತೆ ಮಾಡಲು ರಿಪಬ್ಲಿಕನ್ ನಿರ್ಧರಿಸಿದೆ.
ಇದನ್ನೂ ಓದಿ:ಜ್ಯೋತಿಷಿ ಮಾತು ಕೇಳಿ ಪತ್ನಿಗೆ ನಿಂದಿಸಿದ ಪತಿ! ಮನನೊಂದು ಆತ್ಮಹತ್ಯೆ ಶರಣಾದ ಗೃಹಿಣಿ
ಟ್ರಂಪ್ ಆಡಳಿತಕ್ಕೆ ಎಚ್ಚರಿಸಿದ ಜೋ
ಚುನಾವಣಾ ಫಲಿತಾಂಶ ಮುಗಿಯುತ್ತಿದ್ದಂತೆ, ಅಮೆರಿಕದಲ್ಲಿ ಕೊರೊನಾ ಆರ್ಭಟಿಸುತ್ತಿದೆ. “ನಾನು ನಿಯೋಜಿತ ಅಧ್ಯಕ್ಷನಷ್ಟೇ. ಮುಂದಿನ ವರ್ಷದ ಆರಂಭದವರೆಗೂ ನಾನು ಅಧ್ಯಕ್ಷನಾಗಲು ಸಾಧ್ಯವಿಲ್ಲ. ಆದರೆ, ಕೊರೊನಾ ಕ್ಯಾಲೆಂಡರನ್ನು ನೋಡುವುದಿಲ್ಲ. ಅದು ಮಿತಿಮೀರುತ್ತಲೇ ಇದೆ. ಈಗಿರುವ ಅಮೆರಿಕ ಸರ್ಕಾರ ಪರಿಸ್ಥಿತಿಯ ಗಂಭೀರತೆ ಅರಿತು, ಸೂಕ್ತ ಚಿಕಿತ್ಸೆ ನೀಡಬೇಕು’ ಎಂದು ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡೆನ್ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.