Election Update: ಕೋಪ ಬೇಡ, ಪ್ರೀತಿಯಿಂದ ಗೆಲ್ಲೋಣ: ಸುರ್ಜೆವಾಲಾ
Team Udayavani, Apr 21, 2023, 7:52 AM IST
ಸಿಂಧನೂರು: ಚುನಾವಣೆ ಸಂದರ್ಭ ಟಿಕೆಟ್ ತಪ್ಪಿದಾಗ ಕೋಪ ಸಹಜ. ಆದರೆ ರಾಹುಲ್ ಗಾಂ ಧಿ ಹೇಳುತ್ತಾರೆ. ಸಿಟ್ಟಿನ ಬದಲು ಪ್ರೀತಿಯಿಂದ ಗೆಲ್ಲಲು ಪ್ರಯತ್ನಿಸಬೇಕು ಎಂದು ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುಜೇìವಾಲಾ ಹೇಳಿದರು.
ಸಿಂಧನೂರು ಕ್ಷೇತ್ರದ ಟಿಕೆಟ್ ವಂಚಿತ ಬಸನಗೌಡ ಬಾದರ್ಲಿ ಅವರ ಮನವೊಲಿಕೆ ವೇಳೆ ಮಾತನಾಡಿದ ಅವರು, ಪಕ್ಷ ತಾಯಿ ಇದ್ದಂತೆ. ಒಮ್ಮೆ ವ್ಯತ್ಯಾಸ ಆಗಬಹುದು. ಆದರೆ ತಾಯಿ ವಿರುದ್ಧವೇ ಕೋಪ ಬರಬಹುದು. ಯಾವುದೇ ಕಾರಣಕ್ಕೂ ಮಾತೃ ಪಕ್ಷ ತೊರೆಯಬಾರದು. ಆಲ್ ಇಂಡಿಯಾ ಯೂತ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾಗ ನನಗೂ ಟಿಕೆಟ್ ತಪ್ಪಿತ್ತು. ಆಗ ನಿಮ್ಮ ಹಾಗೆ ನನ್ನ ಬೆಂಬಲಿಗರು ಕೋಪದಲ್ಲಿದ್ದರು. ಭವಿಷ್ಯದ ಬಗ್ಗೆ ಯೋಚನೆ ಮಾಡಿದ್ದೆ. ಕಾಂಗ್ರೆಸ್ ಪಕ್ಷ ಇರಲಿಲ್ಲ ಎಂದರೆ ನಾನು ಆಲ್ ಇಂಡಿಯಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಆಗುತ್ತಿರಲಿಲ್ಲ. ಹಾಗೆ ಬಸನಗೌಡ ಬಾದರ್ಲಿ ಕೂಡ ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಆಗುತ್ತಿರಲಿಲ್ಲ. ನಮಗೆ ಪಕ್ಷ ಮುಖ್ಯ. ಈ ಹಿನ್ನೆಲೆಯಲ್ಲಿ ಅವರಿಗೆ ಭವಿಷ್ಯದಲ್ಲಿ ದೊಡ್ಡ ಜವಾಬ್ದಾರಿ ವಹಿಸಲಾಗುವುದು. ಅಲ್ಲಿಯ ತನಕ ಕಾಯಬೇಕು ಎಂದರು.
ಕಣ್ಣೀರಿಟ್ಟ ಬಸನಗೌಡ
ಹೈಕಮಾಂಡ್ ಪರವಾಗಿ ಸುರ್ಜೆವಾಲಾ ಭಾಷಣ, ನಲಪಾಡ್ ಮಾತು ಕೇಳಿಸಿಕೊಳ್ಳದೆ ಕಾರ್ಯಕರ್ತರು ಕೂಗಾಟ, ತಳ್ಳಾಟ ನಡೆಸಿದರು. ನಿಯಂತ್ರಣಕ್ಕೆ ಬಾರದೇ ಇದ್ದಾಗ ಬಸನಗೌಡ ಬಾದರ್ಲಿ ಕಣ್ಣೀರಿಟ್ಟರು. ಕೊನೆಯಲ್ಲಿ ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.