ಹಕ್ಕಿ ಜ್ವರದ ಹಿನ್ನೆಲೆ: ಅರ್ಧ ಬೇಯಿಸಿದ ಮೊಟ್ಟೆ ತಿನ್ನಬೇಡಿ ಎಂದ ಆಹಾರ ಪ್ರಾಧಿಕಾರ
Team Udayavani, Jan 21, 2021, 9:19 PM IST
ನವದೆಹಲಿ: “ಹಾಫ್ ಬಾಯ್ಲ್ಡ್ (ಅರ್ಧ ಬೇಯಿಸಿದ) ಮೊಟ್ಟೆ, ಸರಿಯಾಗಿ ಬೇಯಿಸದ ಕೋಳಿ ಮಾಂಸ ಸೇವನೆ ಬೇಡ’ ಹೀಗೆಂದು ಭಾರತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್‌ಎಸ್‌ಎಐ) ಗುರುವಾರ ಸುತ್ತೋಲೆ ಹೊರಡಿಸಿದೆ. ದೇಶದ ಹತ್ತು ರಾಜ್ಯಗಳಲ್ಲಿ ಹಕ್ಕಿ ಜ್ವರ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಪ್ರಾಧಿಕಾರ ಆಹಾರ ಸೇವನೆಯ ಮುನ್ನೆಚ್ಚರಿಕಾ ಕ್ರಮಗಳನ್ನು ಪ್ರಕಟಿಸಿದೆ. ಸರಿಯಾದ ರೀತಿಯಲ್ಲಿ ಬೇಯಿಸಿದ ಮೊಟ್ಟೆ, ಮಾಂಸವನ್ನು ಸೇವಿಸುವುದರಲ್ಲಿ ಯಾವುದೇ ಆತಂಕ ಇಲ್ಲ ಎಂದಿದೆ ಪ್ರಾಧಿಕಾರ. ಹೀಗಾಗಿ ಗೊಂದಲ ಮತ್ತು ಭೀತಿಗೆ ಒಳಗಾಗುವ ಅಗತ್ಯವಿಲ್ಲ ಎಂದು ಸಲಹೆ ನೀಡಿದೆ. ಹಕ್ಕಿ ಜ್ವರಕ್ಕೆ ತುತ್ತಾಗಿರುವ ಪಕ್ಷಿಗಳು ಮೊಟ್ಟೆ ಇಡುವುದಿಲ್ಲ. ಹಕ್ಕಿ ಜ್ವರದ ಆರಂಭಿಕ ಹಂತದಲ್ಲಿ ಮೊಟ್ಟೆಗಳನ್ನಿರಿಸಿದ್ದರೆ, ಅವುಗಳಲ್ಲಿ ವೈರಸ್ ಇರುವ ಸಾಧ್ಯತೆ ಇದೆ.
ಇದರ ಜತೆಗೆ ಮಾಂಸ ಮಾರಾಟದ ಸ್ಥಳದಲ್ಲಿಯೂ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಮುಕ್ತವಾಗಿ ಮಾಂಸ ಮಾರಾಟಕ್ಕೆ ಇಡುವುದೂ ಸೂಕ್ತವಲ್ಲ ಎಂದಿದೆ. ಮಳಿಗೆಗಳಿಗೆ ಹಕ್ಕಿ ಜ್ವರ ಪೀಡಿತ ಪ್ರದೇಶದಿಂದ ಜೀವಂತ ಅಥವಾ ಸತ್ತು ಹೋಗಿರುವ ಪಕ್ಷಿಗಳನ್ನು ತರಬಾರದು ಎಂದಿದೆ ಪ್ರಾಧಿಕಾರ.
ಇದನ್ನೂ ಓದಿ:ಗ್ರಾಹಕರ ಬರ್ಗರನ್ನೇ ಸ್ವಾಹಾ ಮಾಡಿದ ಡೆಲಿವರಿ ಬಾಯ್!
ಮಾಂಸ ಮಾರಾಟ ಮಾಡುವವರು ಕೈಗಳಿಗೆ ಗ್ಲೌಸ್, ಮಾಸ್ಕ್ ಧರಿಸಿರಬೇಕು ಮತ್ತು ಆಗಾಗ ಕೈಗಳನ್ನು ತೊಳೆದು ಸ್ವತ್ಛಗೊಳಿಸಬೇಕು ಎಂದು ಸೂಚನೆಯಲ್ಲಿ ಉಲ್ಲೇಖೀಸಲಾಗಿದೆ. ಒಂದು ಬಾರಿ ಮಾಂಸ ಕತ್ತರಿಸಲು ಉಪಯೋಗಿಸಿದ ಸಾಧನಗಳನ್ನು ಶುಚಿಗೊಳಿಸಿ ಬಳಕೆ ಮಾಡಬೇಕೆಂದೂ ಅದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.