“ಸಿದ್ಧಾಂತದ ಕನ್ನಡಿ ಬಿಟ್ಟುಬಿಡಿ; ವಿಷಯ ಆಧಾರಿತವಾಗಿ ಸಿದ್ಧಾಂತ ರೂಪಿಸಿ’

ದ.ಕ. ಜಿಲ್ಲಾ 24ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ|ಎಂ. ಪ್ರಭಾಕರ ಜೋಷಿ ಸಂದರ್ಶನ

Team Udayavani, Feb 11, 2021, 5:25 AM IST

“ಸಿದ್ಧಾಂತದ ಕನ್ನಡಿ ಬಿಟ್ಟುಬಿಡಿ; ವಿಷಯ ಆಧಾರಿತವಾಗಿ ಸಿದ್ಧಾಂತ ರೂಪಿಸಿ’

ಮಹಾನಗರ: ಹಿರಿಯ ವಿದ್ವಾಂಸ, ಯಕ್ಷಗಾನದ ಅಗ್ರಮಾನ್ಯ ಅರ್ಥಧಾರಿ, ಪ್ರಭಾವೀ ಭಾಷಣಕಾರ, ವಿಮರ್ಶಕ, ಚಿಂತಕ, ಕವಿ, ಬಹುಭಾಷಾ ವಿಶಾರದ, ಅಧ್ಯಾಪಕ, ಬೆಸೆಂಟ್‌ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ, ಅಂಕಣಕಾರ, ಖ್ಯಾತ ಸಂಶೋಧಕರಾಗಿ ಜನಮನ್ನಣೆ ಪಡೆದ ಡಾ| ಎಂ. ಪ್ರಭಾಕರ ಜೋಷಿ ಅವರು ಫೆ.12ರಿಂದ 14ರ ವರೆಗೆ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ಜರಗಲಿರುವ ದ.ಕ. ಜಿಲ್ಲಾ 24ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು.

ನಾರಾಯಣ ಜೋಷಿ, ಲಕ್ಷ್ಮೀ ಬಾಯಿ ಅವರ ಪುತ್ರ ಪ್ರಭಾಕರ ಜೋಷಿ ಅವರು ಮೂಲತಃ ಕಾರ್ಕಳ ತಾಲೂಕು ಮಾಳ ನಿವಾಸಿ. ಸಂಸ್ಕೃತ, ಕನ್ನಡ, ಹಿಂದಿ, ಮರಾಠಿ, ತುಳು, ಕೊಂಕಣಿ ಭಾಷೆಗಳ ಜ್ಞಾನ ಸಂಪ ನ್ನರು. ಜಾಗರ, ಕೇದಗೆ ಯಕ್ಷಗಾನ ಪದಕೋಶ ಭಾರತೀಯ ತತ್ವಶಾಸ್ತ್ರವೇ ಮೊದಲಾದ ಹದಿನೆಂಟು ವೈಚಾರಿಕ ಕೃತಿಗಳ ಜತೆಗೆ ಕೃಷ್ಣ ಸಂಧಾನ ಪ್ರಸಂಗದ ಪಿ.ಎಚ್‌ಡಿ. ಮಹಾಪ್ರಬಂಧ ಮಂಡನೆಯಿಂದ ಬಹುಶ್ರುತ ವಿದ್ವಾಂಸರಾಗಿ ನಾಡಿನ ಅಗ್ರ ಪಂಕ್ತಿಯ ಸಾಧಕರಾಗಿ ಪ್ರಸಿದ್ಧರಾಗಿದ್ದಾರೆ.

ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ “ಉದಯವಾಣಿ-ಸುದಿನ’ದ ದಿನೇಶ್‌ ಇರಾ ಅವರ ಜತೆಗೆ ಮಾತನಾಡಿದ್ದಾರೆ.

– ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತಮ್ಮ ಅಭಿಪ್ರಾಯ?
ಒಬ್ಬ ಸಾಹಿತಿ, ಕಲಾವಿದನಿಗೆ ಸಾಹಿತ್ಯ ಪರಿಷತ್‌ ಕೊಡಬಹುದಾದ ಬಹುದೊಡ್ಡ ಗೌರವವಿದು. ನಾನು ಯಕ್ಷಗಾನ ಸಂಬಂಧಿತ ವಿಚಾರದಲ್ಲಿ ತೊಡಗಿಸಿಕೊಂಡ ಕಾರಣದಿಂದ ಇದು ಯಕ್ಷಗಾನ ಕ್ಷೇತ್ರಕ್ಕೆ ದೊರೆತ ಗೌರವ ಎಂದು ಭಾವಿಸುತ್ತೇನೆ. ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಪ್ರದೀಪ್‌ ಕುಮಾರ್‌ ಕಲ್ಕೂರ ಅವರು ಇದೀಗ ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನವನ್ನು ಯಕ್ಷಗಾನ ಕ್ಷೇತ್ರಕ್ಕೆ ಮೀಸಲಿಟ್ಟಿರುವುದು ಉಲ್ಲೇಖನೀಯ. ಇದೇ ರೀತಿ ಪತ್ರಕರ್ತರು, ಪಠ್ಯಪುಸ್ತಕ ಲೇಖಕರಿಗೂ ಈ ಅವಕಾಶ ದೊರೆಯಲಿ.

– ಬಹುಭಾಷಾ ತಜ್ಞರಾಗಿರುವ ತಾವು ಭಾಷಾ ವೈವಿಧ್ಯ ಬಗ್ಗೆ ಏನೆನ್ನುತ್ತೀರಿ?
ಬಹುಭಾಷಿಕತೆ ಈ ಪ್ರದೇಶದ ದೊಡ್ಡ ಸಂಪತ್ತು. ಹಲವು ಭಾಷೆ ಕಲಿಯುವುದರಿಂದ ಆಯಾ ಭಾಷೆಯ ಜತೆಗಿನ ಸಹಬಾಳ್ವೆ, ಸಂವರ್ಧನೆ ಹೆಚ್ಚಾಗಿ, ಇನ್ನೊಂದು ಭಾಷೆಯ ಮೇಲಿನ ವಿರೋಧ ಕಡಿಮೆಯಾಗುತ್ತದೆ. ಬಹು ಭಾಷಿಕತೆ ಮನುಷ್ಯನಿಗೆ ಸಹನೆ, ಚಿಂತನ ವಿಸ್ತಾರ ಹಾಗೂ ಸಾಮಾಜಿಕ ಜಾಗೃತಿ ಮೂಡಿಸಲು ಪ್ರಯತ್ನಕಾರಿ. ಹೀಗಾಗಿ ತುಳುನಾಡಿನಲ್ಲಿ ಭಾಷೆಯ ಗೊಂದಲವೇ ಇಲ್ಲ.

– ಕನ್ನಡ ಸಾಹಿತ್ಯ ಲೋಕಕ್ಕೆ ಯಕ್ಷಗಾನ ಬಹುದೊಡ್ಡ ಕೊಡುಗೆ ನೀಡಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು?
ಕಾವ್ಯವಾಗಿ ಯಕ್ಷಗಾನ ಶ್ರೀಮಂತ ಕಲೆ. 7 ಸಾವಿರ ಪ್ರಸಂಗ ರಚನೆಯಾಗಿರಬಹುದು. 10 ಲಕ್ಷದಷ್ಟು ಪದ್ಯನಿಧಿಯಿದೆ. ಛಂದೋವೈವಿಧ್ಯವಿದೆ. ಅರ್ಥಸಾಹಿತ್ಯವಿದೆ. ಗಂಟೆಗಟ್ಟಲೆ ಒಂದು ಇಂಗ್ಲಿಷ್‌ ಪದ ಬಳಕೆ ಮಾಡದೆ ಕನ್ನಡದಲ್ಲಿ ಮಾತನಾಡಬಲ್ಲ ಶಕ್ತಿ ಯಕ್ಷಗಾನಕ್ಕಿದೆ. ಕನ್ನಡ ಸಾಹಿತ್ಯ, ತುಳುವಿಗೂ ಬಹುದೊಡ್ಡ ಕೊಡುಗೆ ನೀಡಿದೆ. ಯಕ್ಷಗಾನವು ಸಾಹಿತ್ಯಕ್ಕೆ ಸ್ಪೂರ್ತಿ ನೀಡಬಲ್ಲುದು. ಮಾಧ್ಯಮ ಲೋಕ, ಸಾಮಾಜಿಕ ಜಾಲತಾಣ ಇರುವ ಮಧ್ಯೆಯೇ 40ರಿಂದ 45 ಮೇಳ, 100ರ ಮೇಲೆ ಸಂಘಗಳು, 5,000 ಕಲಾವಿದರು, 100 ಕೋ.ರೂ. ಗಳ ವ್ಯವಹಾರ ನಡೆಸುವ ಯಕ್ಷಗಾನದಂತಹ ಮಾಧ್ಯಮ ಎಲ್ಲೂ ಇಲ್ಲ.

– ತಾವು ಗಮನಿಸಿದಂತೆ ಸಾಹಿತ್ಯ ಕ್ಷೇತ್ರ ಸದ್ಯ ಯಾವ ಸಮಸ್ಯೆ, ಸವಾಲು ಎದುರಿಸುತ್ತಿದೆ?
ಇಲ್ಲಿ ಬರಹ ತುಂಬಾ ಇದೆ; ಪುಸ್ತಕಗಳು ತುಂಬ ಬರುತ್ತಿವೆ. ಆದರೆ ಓದುವವರು ಕಡಿಮೆಯಾಗಿದ್ದಾರೆ. ಕನ್ನಡದಲ್ಲಿ ಪಂಥೀಯತೆ ಆಧಾರವಾಗಿ ಹೋಗುತ್ತಿದ್ದಾರೆ. ಕೆಲವು ಶಬ್ಧ ಉರುಳಿಸಿ ಬಿಡುವ ಸಂಗತಿ ನಡೆಯುತ್ತಿದೆ. ಒಂದು ವಿಷಯವನ್ನು ನೋಡಿ ಸಿದ್ಧಾಂತ ರೂಪಿಸಬೇಕೇ ಹೊರತು, ಸಿದ್ಧಾಂತದ ಕನ್ನಡಿಯಿಂದ ವಿಷಯವನ್ನು ನೋಡಿದರೆ ಎಲ್ಲ ಸಿದ್ಧಾಂತವೇ ಕಾಣುತ್ತದೆ. ಅತಿರೇಕಗಳಿಗೆ ಹೋಗದೆ ಬರೆಯಬೇಕು. ಅನುಭವ ಕಥನವು ಸಾಹಿತ್ಯದ ಕೆಲಸ. ಒಂದು ಪಂಥದ ಪರವಾಗಿ ವಾಲುವುದು ಮಾತ್ರ ಸಾಹಿತ್ಯವಲ್ಲ. ಶಬ್ಧಗ ಳು, ಸಂವೇದನೆಯನ್ನೇ ಕೊಲ್ಲುವ ಪಂಥಗಳನ್ನು ಇಟ್ಟುಕೊಂಡರೆ ಸಾಹಿತ್ಯ ಉಳಿಯುವುದಿಲ್ಲ.

– ಈ ಬಾರಿಯ ಸಮ್ಮೇಳನ ಆತ್ಮನಿರ್ಭರ ಭಾರತ; ಪರಂಪರೆ ಹಾಗೂ ಆಧುನಿಕತೆಯ ಆಶಯ ಹೊಂದಿದೆ. ಇದರ ಬಗ್ಗೆ ತಮ್ಮ ಅಭಿಪ್ರಾಯ.
ಸ್ವಾವಲಂಬಿಯಾಗಬೇಕು ಎಂಬುದೇ ಇದರ ಅರ್ಥ. ಆರ್ಥಿಕವಾಗಿ ಭಾರತ ಆತ್ಮನಿರ್ಭರವಾಗಲು ಇದು ಪ್ರಸಕ್ತ ಕಾಲ. ದೇಶೀಯ ವಸ್ತುಗಳ ಬಳಕೆಗೆ ಒತ್ತು ನೀಡಲು ಆದ್ಯತೆ ನೀಡಬೇಕು. ತನ್ನ ಪರಿಸರದ ಸಮಸ್ಯೆ ಸ್ಪಂದಿಸುವ ಕಾಳಜಿ ಸಾಹಿತಿ ಸಹಿ ತ ಎಲ್ಲರಲ್ಲಿಯೂ ಬೇಕು. ನಾನು ಅದನ್ನು ಪಾಲಿಸಿಕೊಂಡು ಬಂದಿದ್ದೇನೆ.

– ಕಲಿಕಾ ಮಾಧ್ಯಮದ ವಿಚಾರದಲ್ಲಿ ತಮ್ಮ ನಿಲುವೇನು?
ಆರಂಭಿಕ ಶಿಕ್ಷಣ 5ನೇ ತರಗತಿವರೆಗೆ ಕನ್ನಡ ಕಡ್ಡಾಯ ಮಾಡಬೇಕು. ಹಾಗೂ ಇಂಗ್ಲಿಷ್‌ ಅನ್ನು ವಿಷಯವಾಗಿ ಬೋಧಿಸಬೇಕು. ಅನುದಾನಿತ ಹಾಗೂ ಸರಕಾರಿ ಪ್ರಾಥಮಿಕ ಶಾಲೆಗಳನ್ನು ಗಟ್ಟಿ ಮಾಡಲೇಬೇಕು.

ಯಕ್ಷಗಾನ ಯಕ್ಷಗಾನೇತರವಾಗುತ್ತಿದೆ !
ಯಕ್ಷಗಾನೇತರವಾಗಿ ಬೆಳೆಯುತ್ತಿರುವ ಯಕ್ಷಗಾನವನ್ನು ಯಕ್ಷಗಾನೀಕರಣ ಮಾಡಬೇಕು. ಆದರೆ ಈಗ ಅದು ಏನೇನೋ ಆಗುತ್ತಿದೆ. ಮದುವೆ ಮಂಟಪ, ಸಿನೆಮಾ, ನಾಟಕ ಸಹಿತ ಬೇರೆ ಬೇರೆ ಸ್ತರಗಳಿಂದ ಸಂಗತಿಗಳನ್ನು ತಂದು ಯಕ್ಷಗಾನವನ್ನು “ಟ್ರೆಂಡಿ ಆರ್ಟ್‌’ ಮಾಡಲಾಗುತ್ತಿದೆ. ಹೀಗಾಗಿ ಯಕ್ಷಗಾನದ ಶೈಲಿ ಹಾಗೂ ಗುಣಮಟ್ಟದ ಸಂರಕ್ಷಣೆ ಆಗಬೇಕು. ಯಕ್ಷಗಾನದ ಯಜಮಾನರು ಹಾಗೂ ಮುಜರಾಯಿ ಇಲಾಖೆ ಇದರ ಜವಾಬ್ದಾರಿ ತೆಗೆದುಕೊಳ್ಳಬೇಕು. ಒಬ್ಬರನ್ನೊಬ್ಬರು, ದೂರುವ ಅಥವಾ ಸಮಸ್ಯೆಯನ್ನು ವರ್ಗಾಯಿಸುವ ಬದಲು ಬದಲಾವಣೆಗೆ ಸಿದ್ಧವಾಗಬೇಕು. ಜಗತ್ತಿನಲ್ಲಿಯೇ ಹೆಮ್ಮೆ ಪಡುವ ದೊಡ್ಡ ಸಂಪತ್ತು ಯಕ್ಷಗಾನ. ಅದರ ಶೈಲಿ, ನಾಟ್ಯ, ಸಂಗೀತವೇ ಶ್ರೇಷ್ಠ. ಜಗತ್ತಿನ ರಂಗಭೂಮಿಗೆ ಯಕ್ಷಗಾನ ಕೊಡುಗೆ ನೀಡಬಹುದು. ಆದರೆ ಈಗ ನಾವು ಸಿನೆಮಾ, ನಾಟಕ.. ಹೀಗೆ ಬೇರೆಯವರಿಂದ ತೆಗೆದುಕೊಳ್ಳುತ್ತಿದ್ದೇವೆ. ಕಲಾ ಭಾಷೆಯನ್ನು ವಿನಯದಿಂದ ಅರ್ಥೈಸಿ ಪರಿಷ್ಕರಣೆ ಆಗಬೇಕು. ಆದರೆ, ಎಚ್ಚರಿಕೆ ಅಷ್ಟೇ ಮುಖ್ಯ. ಸಬ್ಸಿಡಿ ಕೂಡ ಇದಕ್ಕೆ ದೊರೆಯಬೇಕು. ಈ ಬಗ್ಗೆ ಉಲ್ಲೇಖೀಸಲಿದ್ದೇನೆ.

ಟಾಪ್ ನ್ಯೂಸ್

Riots against mosque survey: Police fire tear gas at Sambhal

Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

Dawwod-Arrest

Mangaluru: ಕುಖ್ಯಾತ ರೌಡಿಶೀಟರ್‌ ದಾವೂದ್‌ ಬಂಧಿಸಿದ ಸಿಸಿಬಿ ಪೊಲೀಸರು

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

17-ckm

Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

15-uv-fusion

Pendulum Wall Clock: ನಮ್ಮ ಮನೆಯಲ್ಲಿ ಒಂದು ಅದ್ಭುತ ಇದೆ ಗೊತ್ತಾ?

Vijay Raghavendra is in Rudrabhishekam Movie

Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್‌ ರಾಘವೇಂದ್ರ

14-uv-fusion

UV Fusion: ಕೈ ಜಾರದಿರಲಿ ಗೆಳೆತನವೆಂಬ ಆಪ್ತ ನಿಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.