ಕನ್ನಡಿಗರನ್ನು ಕೆಣಕಿದರೆ ಮಲಗಿದ ಸಿಂಹವನ್ನು ಎಚ್ಚರಿಸಿದಂತೆ: ಡಾ|ಮನು ಬಳಿಗಾರ
Team Udayavani, Jan 30, 2021, 7:42 PM IST
ಕಾಗವಾಡ(ಮಿರ್ಜಿ ಅಣ್ಣಾರಾಯ ವೇದಿಕೆ): ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರ ಒಡಕು ಹುಟ್ಟಿಸುವ ಧ್ವನಿ ಬಗ್ಗೆ ಜನರು ನಿರ್ಲಕ್ಷ ವಹಿಸಿ ಕಸದ ಬುಟ್ಟಿಗೆ ಹಾಕಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ|ಮನು ಬಳಿಗಾರ ಹೇಳಿದರು.
ಬೆಳಗಾವಿ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಶನಿವಾರ ಮಾತನಾಡಿದ ಅವರು, ಕರ್ನಾಟಕದವರನ್ನು ಕೆಣಕಿದರೆ ಮಲಗಿದ ಸಿಂಹವನ್ನು ಎಚ್ಚರಿಸಿದಂತೆ. ಹೀಗಾಗಿ ಮಲಗಿದ ಸಿಂಹದ ಮೀಸೆ ಎಳೆದು ಕೆಣಕುವ ಕೆಲಸ ಮಹಾರಾಷ್ಟ್ರದ ನಾಯಕರು ಮಾಡಬಾರದೆಂದು ಎಚ್ಚರಿಸಿದರು.
ಗಡಿ ವಿವಾದ ಬಗ್ಗೆ ರಾಜಕಾರಣಿಗಳು ಸ್ವಾರ್ಥಕ್ಕಾಗಿ ಹೇಳಿಕೆ ನೀಡುತ್ತಿದ್ದಾರೆ. ರಾಜಕಾರಣಕ್ಕಾಗಿ ಅವಿವೇಕಿತನದ ಹೇಳಿಕೆ ಕೊಡುತ್ತಿರುವವರಿಗೆ ಜನರು ಬುದ್ಧಿ ಕಲಿಸಿದ್ದಾರೆ ಎಂದರು.
ಹಾವೇರಿಯಲ್ಲಿ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು. ಕೊರೊನಾ ನಿಯಮಾವಳಿ ಸಡಿಲಿಕೆ ಆಗಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ:ಯೋಗಿ ಆದಿತ್ಯನಾಥರಂತೆ ಸುತ್ತೂರು ಶ್ರೀಗಳನ್ನು ಸಿಎಂ ಮಾಡಿ! ರೈತ ಹಿತರಕ್ಷಣಾ ಸಮಿತಿ ಒತ್ತಾಯ
ಪರರ ವಿಚಾರಗಳ ಬಗ್ಗೆ ಮನ್ನಣೆ ನೀಡಬೇಕು ಎಂಬುದನ್ನು ಕರ್ನಾಟಕ ಸಾವಿರಾರು ವರ್ಷಗಳಿಂದ ಕಲಿಸಿ ಕೊಟ್ಟಿದೆ. ಸೌಹಾರ್ದಯುತವಾಗಿ ಬದುಕು ಕಟ್ಟಿಕೊಂಡಿರುವ ನಾಡು ನಮ್ಮದು. ಭಾಷೆಯ ಮೆರಗು ತಿಳಿದರೆ ಸೌಹಾರ್ದತೆ ಹೆಚ್ಚಾಗುತ್ತದೆ ಎಂದರು.
ಕೋವಿಡ್ ಪರಿಣಾಮ ಕುರಿತು ಸಮ್ಮೇಳನದಲ್ಲಿ ಗೋಷ್ಠಿ ಇರಲಿದೆ. ಕೊರೊನಾ ಉಂಟು ಮಾಡಿದ ಪರಿಣಾಮಗಳ ಕುರಿತು ಚರ್ಚೆಯಾಗಲಿದೆ. ನಷ್ಟ ಉಂಟಾಗಿದ್ದು, ಅದರಿಂದ ಹೊರ ಬರುವುದು ಹೇಗೆ, ಈ ಪರಿಸ್ಥಿತಿಯಲ್ಲಿ ಉದ್ಯೋಗ ಸೃಷ್ಟಿಸುವುದು ಹೇಗೆಂಬ ಸಮಾಲೋಚನೆ ನಡೆಸಲಾಗುವುದು. ಆರೋಗ್ಯ ಜಾಗೃತಿ ಮೂಡಿಸಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ
MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ
BJP; ವಿಜಯೇಂದ್ರ ವಿರುದ್ಧ ಧ್ವನಿ ಎತ್ತಿದ್ದು ಬಿ.ಪಿ. ಹರೀಶ್ ಮಾತ್ರ!
High Court: ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಲು ವಿಫಲ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
Kalaburagi: ಬಂಧನಕ್ಕೆ ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿಗೆ ಗುಂಡೇಟು