ದುಲೀಪ್ ಟ್ರೋಫಿ ಕ್ರಿಕೆಟ್: ನಿಶಾಂತ್, ಹರ್ಷಿತ್ ಶತಕ
Team Udayavani, Jun 30, 2023, 6:29 AM IST
ಬೆಂಗಳೂರು: ಇದೇ ಮೊದಲ ಸಲ ದುಲೀಪ್ ಟ್ರೋಫಿ ಪಂದ್ಯವನ್ನು ಆಡಲಿಳಿದ ಈಶಾನ್ಯ ವಲಯದ ಮೇಲೆ ಉತ್ತರ ವಲಯ ತ್ರಿವಳಿ ಶತಕದೊಂದಿಗೆ ಸವಾರಿ ಮಾಡಿದೆ. 8 ವಿಕೆಟಿಗೆ 540 ರನ್ ಪೇರಿಸಿ ಡಿಕ್ಲೇರ್ ಮಾಡಿದೆ. ದ್ವಿತೀಯ ದಿನದಾಟದ ಅಂತ್ಯಕ್ಕೆ ಈಶಾನ್ಯ ವಲಯ 3 ವಿಕೆಟ್ ಕಳೆದುಕೊಂಡು 65 ರನ್ ಗಳಿಸಿದೆ.
ಮೊದಲ ದಿನ ಆರಂಭಕಾರ ಧ್ರುವ ಶೋರಿ 135 ರನ್ ಬಾರಿಸಿದರೆ, ಗುರುವಾರದ ಆಟದಲ್ಲಿ ನಿಶಾಂತ್ ಸಿಂಧು ಮತ್ತು ಹರ್ಷಿತ್ ರಾಣಾ ಶತಕ ದೊಂದಿಗೆ ಮಿಂಚಿದರು. ನಿಶಾಂತ್ 245 ಎಸೆತ ಎದುರಿಸಿ ಭರ್ತಿ 150 ರನ್ ಹೊಡೆದರು. ಸಿಡಿಸಿದ್ದು 18 ಬೌಂಡರಿ ಹಾಗೂ 3 ಸಿಕ್ಸರ್. ಅತ್ಯಂತ ಆಕ್ರಮಣಕಾರಿಯಾಗಿ ಆಡಿದ ಹರ್ಷಿತ್ ರಾಣಾ 122 ರನ್ ಮಾಡಿ ಅಜೇಯರಾಗಿ ಉಳಿದರು. ಇದರಲ್ಲಿ 12 ಫೋರ್, 9 ಸಿಕ್ಸರ್ ಒಳಗೊಂಡಿತ್ತು. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ರಾಣಾ ಹೊಡೆದ ಮೊದಲ ಶತಕ. ಈಶಾನ್ಯ ವಲಯದ ಅನನುಭವಿ ಬೌಲರ್‌ಗಳೆಲ್ಲ ದುಬಾರಿಯಾಗಿ ಪರಿಣಮಿಸಿದರು.
ಮಧ್ಯ ವಲಯ ಮೇಲುಗೈ
ಆಲೂರು: ಅತ್ತ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಶತಕದ ಸುರಿಮಳೆ ಆಗುತ್ತಿದ್ದರೆ, ಇತ್ತ ಆಲೂರು ಕ್ರೀಡಾಂಗಣದಲ್ಲಿ ಬೌಲರ್ ಮೇಲುಗೈ ಸಾಧಿಸಿದ್ದಾರೆ.
ಮಧ್ಯ ವಲಯದ 182 ರನ್ನುಗಳ ಸಾಮಾನ್ಯ ಮೊತ್ತತೆR ಜವಾಬು ನೀಡಿದ ಪೂರ್ವ ವಲಯ 122ಕ್ಕೆ ಕುಸಿಯಿತು. 60 ರನ್ನುಗಳ ಮುನ್ನಡೆಯೊಂದಿಗೆ ದ್ವಿತೀಯ ಸರದಿಯನ್ನು ಆರಂಭಿಸಿರುವ ಮಧ್ಯ ವಲಯ ವಿಕೆಟ್ ನಷ್ಟವಿಲ್ಲದೆ 64 ರನ್ ಮಾಡಿದ್ದು, 124 ರನ್ನುಗಳ ಲೀಡ್ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.
2 ವಿಕೆಟಿಗೆ 32 ರನ್ ಮಾಡಿದ್ದ ಪೂರ್ವ ವಲಯ ದ್ವಿತೀಯ ದಿನದಾಟದಲ್ಲೂ ಕುಸಿಯುತ್ತ ಹೋಯಿತು. ಆವೇಶ್ ಖಾನ್ ಮತ್ತು ಸೌರಭ್ ಕುಮಾರ್ ತಲಾ 3 ವಿಕೆಟ್; ನಾಯಕ ಶಿವಂ ಮಾವಿ 2 ವಿಕೆಟ್ ಉರುಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.