ಮೂಲೆಗೆ ಎಸೆಯುವ ಟಯರ್ ಈಗ ಪರಿಸರ ಸ್ನೇಹಿ!
Team Udayavani, Apr 10, 2021, 4:15 AM IST
ಕಾರ್ಕಳ: ನಿರುಪಯುಕ್ತ ಎಂದು ಮೂಲೆಗೆ ಎಸೆದು ಬಿಡುವ ವಸ್ತುಗಳನ್ನು ಪರಿಸರಸ್ನೇಹಿಯಾಗಿಸುವ ಯತ್ನ ಇಲ್ಲೊಂದೆಡೆ ಸದ್ದಿಲ್ಲದೆ ನಡೆಯುತ್ತಿದೆ. ಮಾಳದ ಕಡಾರಿಯ ಪ್ರಗತಿಪರ ಕೃಷಿಕ ಜಗದೀಶ ಪ್ರಭು ಅವರು ಕೊರೊನಾ ಕಾಲಘಟ್ಟದಲ್ಲಿ ನಡೆಸಿದ ಪ್ರಯೋಗಗಳು ಫಲ ನೀಡಿದ್ದು, ಹೂದೋಟದ ಅಂದವನ್ನು ಇಮ್ಮಡಿಗೊಳಿಸಿದೆ.
ವಾಹನಗಳ ಹಳೆ ಟಯರ್ ಗಳನ್ನು ಎಲ್ಲೆಂದರಲ್ಲಿ ಎಸೆಯುವುದು, ಸುಡು ವುದು ಇತ್ಯಾದಿ ಕ್ರಮಗಳು ಪರಿಸರಕ್ಕೆ ಹಾನಿಯುಂಟುಮಾಡುತ್ತವೆ. ಮಳೆಗಾಲ ದಲ್ಲಿ ಟಯರ್‌ಗಳಲ್ಲಿ ನೀರು ನಿಂತು ಆರೋಗ್ಯಕ್ಕೂ ಸಮಸ್ಯೆಯುಂಟು ಮಾಡುತ್ತವೆ. ಇದನ್ನು ಮನಗಂಡ ಕಡಾರಿಯ ಜಗದೀಶ ಪ್ರಭು ಅವರು ಅದಕ್ಕೊಂದು ಹೊಸ ರೂಪ ಕೊಡುವ ಪ್ರಯತ್ನಕ್ಕೆ ಮುಂದಾದರು.
ಯೂಟ್ಯೂಬ್‌ನಲ್ಲಿ ಹುಡುಕಾಟದ ವೇಳೆ ಟಯರ್‌ನಿಂದ ಹೂಕುಂಡ ತಯಾರಿಸುವ ಐಡಿಯಾ ಸಿಕ್ಕಿದ್ದು, ಕೊರೊನಾ ಲಾಕ್‌ಡೌನ್ ವೇಳೆ ಅದನ್ನು ಕಾರ್ಯರೂಪಕ್ಕಿಳಿಸಿದ್ದಾರೆ. ಬ್ಲೇಡ್‌ನಿಂದ ವಿವಿಧ ರೂಪದಲ್ಲಿ ಕತ್ತರಿಸಿ ಬೇಕಾದ ರೀತಿ ಕತ್ತರಿಸಿದ್ದಾರೆ. ಬಳಿಕ ಬಣ್ಣ ಬಳಿದಿದ್ದಾರೆ.
ಈವರೆಗೆ 30ಕ್ಕೂ ಹೆಚ್ಚು ಟಯರ್ ಹೂಕುಂಡಗಳನ್ನು ಮಾಡಿದ್ದಾರೆ. ಅದಕ್ಕೆ ಬೇಡಿಕೆಯೂ ಬಂದಿದೆ. ಮಾರಾಟ ಉದ್ದೇಶ ಹೊಂದಿಲ್ಲವಾದರೂ ಹವ್ಯಾಸವಾಗಿ ಆರಂಭಿಸಿದ್ದಕ್ಕೆ ಈಗ ಹೆಚ್ಚಿನ ಬೇಡಿಕೆ ಬರುತ್ತಿದೆ. ರೇಡಿಯಲ್ ಟಯರ್‌ಗಳಿಂದ ಹೂಕುಂಡ ನಿರ್ಮಾಣ ಸುಲಭವಾಗಿದ್ದು, ಆಸಕ್ತಿ ಇದ್ದವರು ಮನೆಯಲ್ಲೇ ಮಾಡಬಹುದು ಎನ್ನುತ್ತಾರೆ. ಟಯರ್‌ನಲ್ಲಿ ಗಿಡ ಬೆಳೆಯುವುದರಿಂದ ಗೊಬ್ಬರ, ನೀರು ಹಾಕಲು ಸಾಕಷ್ಟು ಸ್ಥಳಾವಕಾಶ ಕೂಡ ಸಿಗುತ್ತದೆ ಎನ್ನುತ್ತಾರೆ.
ಇವರು ಈ ಮೊದಲು ಪಿವಿಸಿ ಪೈಪ್ ಬಳಸಿ ಬಾವಿಯಿಂದ ನೀರೆಳೆವ ಹೊಸ ವಿಧಾನವೊಂದನ್ನು ಆವಿಷ್ಕರಿಸಿದ್ದರು.
ಆಸಕ್ತಿ, ಶ್ರಮ ಅಗತ್ಯ
ಟಯರ್‌ನಿಂದ ಹೂಕುಂಡ ನಿರ್ಮಾಣಕ್ಕೆ ಆಸಕ್ತಿ ಮತ್ರು ಶ್ರಮ ಅಗತ್ಯ. ಲಾಕ್‌ಡೌನ್ ವೇಳೆ ಇದರ ಬಗ್ಗೆ ಗಮನಹರಿಯಿತು. ನಿರುಪಯುಕ್ತ ವಸ್ತುಗಳನ್ನು ಪರಿಸರಕ್ಕೆ ಪೂರಕವಾಗಿ ಬಳಸಿಕೊಳ್ಳಲು ಸಾಕಷ್ಟು ಅವಕಾಶಗಳಿವೆ.
-ಜಗದೀಶ ಪ್ರಭು, ಕೃಷಿಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.