ಎರಡಂಕಿ ಬೆಳವಣಿಗೆ: ಆರ್ಥಿಕ ಸಮೀಕ್ಷೆ ಧನಾತ್ಮಕ ಮುನ್ಸೂಚನೆ

Team Udayavani, Jan 30, 2021, 6:30 AM IST

ಎರಡಂಕಿ ಬೆಳವಣಿಗೆ: ಆರ್ಥಿಕ ಸಮೀಕ್ಷೆ ಧನಾತ್ಮಕ ಮುನ್ಸೂಚನೆ

ಹೊಸದಿಲ್ಲಿ: ಲಾಕ್‌ಡೌನ್‌ ಬಳಿಕ ದೇಶದ ಆರ್ಥಿಕತೆ ಚೇತರಿಕೆ ಕಂಡಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ಜಿಡಿಪಿ ಶೇ. 11ಕ್ಕೇರುವ ಸಾಧ್ಯತೆ ಇದೆ.

-ಇದು ಶುಕ್ರವಾರ ಆರಂಭವಾದ ಸಂಸ ತ್ತಿನ ಬಜೆಟ್‌ ಅಧಿವೇಶನದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿ ಆರ್ಥಿಕ ಸಮೀಕ್ಷೆಯ ಪ್ರಧಾನ ಅಂಶ.

ಕೊರೊನಾದಿಂದ ಸಂಕಷ್ಟಕ್ಕೆ ಒಳಗಾಗಿರುವ ಅರ್ಥವ್ಯವಸ್ಥೆಗೆ ಮುಂದಿನ ವಿತ್ತೀಯ ವರ್ಷ ಚೇತೋಹಾರಿಯಾಗಿರಲಿದೆ ಎಂದು ಆರ್ಥಿಕ ಸಮೀಕ್ಷೆ ಪ್ರತಿ ಪಾದಿಸಿದೆ. ಮಾ. 31ಕ್ಕೆ ಮುಕ್ತಾಯವಾಗಲಿರುವ 2020-21ನೇ ಆರ್ಥಿಕ ವರ್ಷದಲ್ಲಿ ಅದು ಶೇ. 7ರಷ್ಟು ಕುಸಿಯುವ ಬಗ್ಗೆ ಈಗಾಗಲೇ ಮುನ್ಸೂಚನೆ ನೀಡಿದೆ. ಕೃಷಿ ಕ್ಷೇತ್ರದಲ್ಲಿ ಮಾತ್ರ ಆಶಾದಾಯಕ ಬೆಳವಣಿಗೆ ನಿರೀಕ್ಷಿಸಲಾಗಿದ್ದು, ಶೇ. 3.4ರಷ್ಟು ಪ್ರಗತಿಯ ನಿರೀಕ್ಷೆ ಮಾಡಲಾಗಿದೆ. ಸೇವಾ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆಯ ನಿರೀಕ್ಷೆ ಇಲ್ಲ. ದೇಶದಲ್ಲಿ “V’ ಮಾದರಿಯ ಅಭಿವೃದ್ಧಿ ಈಗ ಕಾಣುತ್ತಿದೆ. ಖರೀದಿ, ಬೇಡಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸುಧಾರಣ ಕ್ರಮಗಳು, ಉತ್ಪಾದನೆ – ಮೂಲ ಸೌಕರ್ಯ ಕ್ಷೇತ್ರ ಗಳಲ್ಲಿ ಬಂಡವಾಳ ಹೂಡಿಕೆಗೆ ಪ್ರೋತ್ಸಾಹಗಳು ಚೇತರಿಕೆ, ಬೆಳವಣಿಗೆಗೆ ಕಾರಣವಾಗಲಿವೆ.

ಜೀವ ಕಾಪಾಡಿದೆ ಲಾಕ್‌ಡೌನ್‌
1. ಮುಂದಿನ 2 ವರ್ಷಗಳಲ್ಲಿ ಭಾರತ ಅತ್ಯಂತ ವೇಗವಾಗಿ ಬೆಳವಣಿಗೆ ಸಾಧಿಸುವ ಅರ್ಥ ವ್ಯವಸ್ಥೆ ಆಗಲಿದೆ.
2. ಶೇ. 11.5ರಷ್ಟು ಜಿಡಿಪಿ ಬೆಳವಣಿಗೆ ಮೂಲಕ ಕೊರೊನಾ ಅವಧಿಯಲ್ಲಿ ಎರಡಂಕಿ ಪ್ರಗತಿ ದಾಖಲಿಸಿದ ಏಕೈಕ ರಾಷ್ಟ್ರ ಭಾರತ.
3. ಕಠಿನ ನಿಯಂತ್ರಣಗಳಿಂದ ಜನರ ಜೀವಗಳನ್ನು ಮತ್ತು ಜೀವನೋಪಾಯ ವ್ಯವಸ್ಥೆ ಕಾಪಾಡಿಕೊಳ್ಳಲಾಗಿದೆ.
4. ಲಾಕ್‌ಡೌನ್‌ ಜಾರಿಯಿಂದ ಧನಾತ್ಮಕ ಪರಿಣಾಮವೇ ಆಗಿದೆ. ಅರ್ಥ ವ್ಯವಸ್ಥೆಗೆ ಪ್ರತಿಕೂಲವಾಗಿದ್ದರೂ ಈಗ ಚೇತರಿಕೆ ಹಾದಿಯಲ್ಲಿದೆ.
5. ಸುದೃಢ ಕರೆನ್ಸಿ, ಉತ್ತಮ ಸ್ಥಿತಿಯಲ್ಲಿ ಚಾಲ್ತಿ ಖಾತೆ, ನಿರೀಕ್ಷೆಗೆ ಮಿಕ್ಕಿ ವಿದೇಶಿ ವಿನಿಮಯ ಮೀಸಲು, ಉತ್ಪಾದನೆ ಚಟುವಟಿಕೆ ಹೆಚ್ಚಳ.

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-a-google-MPa

Google;ಗೂಗಲ್‌ ಮ್ಯಾಪ್‌ ಜತೆ ಮಾತಾಡುತ್ತಾ ಡ್ರೈವ್‌ ಮಾಡಬಹುದು

Google

Russian Court; ಗೂಗಲ್‌ಗೆ 20 ಡೆಸಿಲಿಯನ್‌ ದಂಡ

sens-2

Deepavali; ಮುಹೂರ್ತ ಟ್ರೇಡಿಂಗ್‌ನಲ್ಲಿ 448 ಅಂಕ ಏರಿದ ಸೆನ್ಸೆಕ್ಸ್‌

ದೀಪಾವಳಿ: ಬೆಂಗಳೂರು- ಮಡಗಾಂವ್‌‌ ನಡುವೆ ವಿಶೇಷ ರೈಲು ಸಂಚಾರ

ದೀಪಾವಳಿ: ಬೆಂಗಳೂರು- ಮಡಗಾಂವ್‌‌ ನಡುವೆ ವಿಶೇಷ ರೈಲು ಸಂಚಾರ

30% increase in export of manufactured iPhones in the country

iPhone: ದೇಶದಲ್ಲಿ ಸಿದ್ಧಗೊಂಡ ಐಫೋನ್‌ ರಫ್ತು ಶೇ.30ರಷ್ಟು ಹೆಚ್ಚಳ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.