Education Dept: ತಮ್ಮನ ವರ್ಗಾವಣೆ ಆದೇಶಕ್ಕೆ ರುಜು ಹಾಕಿದ ಅಣ್ಣ
ಅಣ್ಣನ ರುಜುವಿನಡಿ ವರ್ಗಾವಣೆ ಆದೇಶ ಸಿಕ್ಕಿರುವುದಕ್ಕೆ ತಮ್ಮನ ಸಂತಸ
Team Udayavani, Jul 13, 2023, 10:30 PM IST
ಗಂಗಾವತಿ: ಸಹೋದರನ ವರ್ಗಾವಣೆ ಆದೇಶಕ್ಕೆ ಒಡಹುಟ್ಟಿದ ಅಣ್ಣ ರುಜು ಹಾಕಿದ ಸೌಭಾಗ್ಯ ನೆನೆದು ಸ್ನೇಹಿತರು ಮತ್ತು ಕುಟುಂಬದವರ ಜತೆ ತಮ್ಮ ವರ್ಗಾವಣೆ ಆದೇಶ ಪತ್ರ ಹಾಗೂ ಸಹೋದರ ಭಾವಚಿತ್ರವನ್ನು ಹಂಚಿಕೊಂಡು ಭಾವುಕರಾದ ಪ್ರಸಂಗ ಗಂಗಾವತಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಡೆದಿದೆ.
ಗಂಗಾವತಿ ಬಿಇಒ ಆಗಿ ವರ್ಗಾವಣೆಗೊಂಡಿರುವ ವೆಂಕಟೇಶ ಅವರ ದೊಡ್ಡ ಅಣ್ಣ ಮಲ್ಲಿಕಾರ್ಜುನ ಶಿಕ್ಷಣ ಇಲಾಖೆಯ ಶಾಲಾ ಮತ್ತು ಸಾರಕ್ಷರತಾ ಇಲಾಖೆಯ ಸರಕಾರದ ಆಧೀನ ಕಾರ್ಯದರ್ಶಿಯಾಗಿದ್ದು ಸರಕಾರದ ಆದೇಶದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಕುಡುಗೋಡು ತಾಲೂಕು ಬಿಇಒ ಆಗಿದ್ದ ಸಹೋದರ ವೆಂಕಟೇಶ ಅವರನ್ನು ಗಂಗಾವತಿ ಬಿಇಒ ಆಗಿ ವರ್ಗಾವಣೆ ಆದೇಶಕ್ಕೆ ರುಜು ಮಾಡಿದ್ದಾರೆ. ಆದೇಶ ಪತ್ರದಲ್ಲಿ ಬಿಇಒ ವೆಂಕಟೇಶ ಹಾಗೂ ಸರ್ಕಾರದ ಆಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ಹೆಸರುಗಳ ಮುಂದೆ ರಾಮಚಂದ್ರಪ್ಪ ಎಂಬ ಹೆಸರಿದ್ದು ಇದನ್ನು ಇದು ದೇವರು ನಮಗೆ ನೀಡಿದ ಸೌಭಾಗ್ಯವಾಗಿದ್ದು ಸಹೋದರನ ರುಜುವಿನಡಿ ವರ್ಗಾವಣೆ ಆದೇಶ ಸಿಕ್ಕಿರುವುದು ಖುಷಿಯ ವಿಷಯವಾಗಿದೆ ಎಂದು ಬಿಇಒ ವೆಂಕಟೇಶ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮರಳು ಮಾಫಿಯಾದಿಂದ ಜೀವ ಬೆದರಿಕೆ: ರಕ್ಷಣೆ ಬೇಕು ಎಂದ ಜೆಡಿಎಸ್ ಶಾಸಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
Ballari; ಮೃ*ತ ಬಾಣಂತಿಯರ ಮನೆಗೆ ಸಚಿವ ದಿನೇಶ್ ಗುಂಡೂರಾವ್ ಭೇಟಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.