ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗೆ ಚುನಾವಣೆ : ವಿದೇಶದಿಂದ ಬಂದ ಮತದಾರರು
Team Udayavani, Feb 27, 2021, 8:17 PM IST
ಕಲಬುರಗಿ: ಈ ಭಾಗದ ಪ್ರತಿಷ್ಠಿತ ಹೈದರಾಬಾದ್ ಕರ್ನಾಟಕ ಶಿಕ್ಷಣ (HKE) ಸಂಸ್ಥೆಯ ಆಡಳಿತ ಮಂಡಳಿಗೆ ಶನಿವಾರ ಬಿರುಸಿನ ಮತದಾನ ನಡೆಯಿತು.
ಸಂಸ್ಥೆಯ ಪಿಡಿಎ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ನಡೆದ ಮತದಾನದಲ್ಲಿ ಅಂತೀಮವಾಗಿ ಶೇ 93 ರಷ್ಟು ಮತದಾನವಾಗಿದೆ.
ವಯೋವೃದ್ದರು ವ್ಹಿಲ್ ಚೇರ ಮೇಲೆ ಬಂದರೆ ಇನ್ನೂ ಕೆಲವು ಹಿರಿಯರು ಹಾಸಿಗೆ ಹಿಡಿದಿದ್ದರಿಂದ ಅವರನ್ನು ವೈದ್ಯಕೀಯ ಉಪಕರಣಗಳ ಸಾಧನದಿಂದ ಬಂದು ಸಹಾಯಕರ ಮುಖಾಂತರ ಮತ ಚಲಾಯಿಸಿರುವುದು ಪ್ರಮುಖವಾಗಿ ಕಂಡು ಬಂತು. ಬೆಳಿಗ್ಗೆ ಮಂದಗತಿಯಿಂದ ಆರಂಭವಾದ ಚುನಾವಣೆಯು ಮಧ್ಯಾಹ್ನ ನಂತರ ಬಿರುಸುಗೊಂಡಿತು.
ಸಂಸ್ಥೆಯ ಮತಾಧಿಕಾರ ಹೊಂದಿ ವಿದೇಶದಲ್ಲಿದ್ದವರು ಚುನಾವಣೆಗೆ ಆಗಮಿಸಿ ತಮ್ಮಹಕ್ಕು ಚಲಾಯಿಸಿರುವುದು ಸಹ ಕಂಡು ಬಂತು.
ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ, ವಿಧಾನ ಪರಿಷತ ಸದಸ್ಯರು ಹಾಗೂ ಮಾಜಿ ಅಧ್ಯಕ್ಣರಾದ ಶಶೀಲ್ ನಮೋಶಿ ಮತ್ತು ನಾಲ್ಕು ಸಲ ಅಧ್ಯಕ್ಷ ರಾಗಿರುವ ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ ಫೆನಾಲ್ ದೊಂದಿಗೆ ಸ್ಪರ್ಧಿಸಿದ್ದು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಇದನ್ನೂ ಓದಿ:ಹೊನ್ನಾವರದ ಪರೇಶ್ ಮೇಸ್ತ ಸಾವಿನ ಹಿಂದೆ ಬಿಜೆಪಿಯವರೇ ಭಾಗಿ : ಡಿಕೆಶಿ ಅನುಮಾನ
ಆರು ಗಂಟೆವರೆಗೂ ನಡೆದ ಮತದಾನ: ಮತದಾನ ವೇಳೆ ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ನಿಗದಿಯಾಗಿದ್ದರೂ ಸಂಜೆ ಐದು ಗಂಟೆಯೊಳಗೆ ಮತಕೇಂದ್ರದೊಳಗೆ ನೂರಾರು ಮತದಾರರು ಇರುವುದರಿಂದ ಸಂಜೆ ಆರು ಗಂಟೆವರೆಗೂ ಚುನಾವಣೆ ನಡೆಯಿತು.
ಭಾನುವಾರ ಮತ ಏಣಿಕೆ; ಫೆ. 28ರ ಬೆಳಿಗ್ಗೆ 8 ಗಂಟೆಯಿಂದ ಮತ ಏಣಿಕೆ ಕಾರ್ಯ ಪಿಡಿಎ ಇಂಜಿನಿಯರಿಂಗ್ ಕಾಲೇಜ್ ನ ಗ್ರಂಥಾಲಯದಲ್ಲಿ ನಡೆಯಲಿದೆ. ಸಂಜೆ ಇಲ್ಲವೇ ರಾತ್ರಿ ಹತ್ತರ ಹೊತ್ತಿಗೆ ಸ್ಪಷ್ಟ ಫಲಿತಾಂಶ ಹೊರ ಬೀಳುವ ಸಾಧ್ಯತೆಗಳಿವೆ. ಚುನಾವಣಾಧಿಕಾರಿಯಾಗಿ ಸಿ.ಸಿ.ಪಾಟೀಲ್, ಜಂಟಿ ಕೃಷಿ ನಿರ್ದೇಶಕ ರತೀಂದ್ರನಾಥ ಸೂಗುರ ಚುನಾವಣಾ ವೀಕ್ಷಕರಾಗಿ ಕಾರ್ಯನಿರ್ವಹಿಸಿದರು. ಚುನಾವಣೆಗೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್
Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ
Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್.ಷಡಾಕ್ಷರಿ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jasprit Bumrah ಬೌಲಿಂಗ್ ಶೈಲಿಯನ್ನೇ ಶಂಕಿಸಿದ ಆಸೀಸ್ ಮಾಧ್ಯಮಗಳು!
Mangaluru: ಎರಡು ಸೈಬರ್ ವಂಚನೆ ಪ್ರಕರಣ: ಸೆನ್ ಪೊಲೀಸರಿಂದ ಇಬ್ಬರ ಬಂಧನ
High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್
Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ
Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್.ಷಡಾಕ್ಷರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.