ನಾನು ಪಕ್ಷೇತರನಾಗಿ ಆಯ್ಕೆಯಾಗಿದ್ದೇ ಒಂದು ಪವಾಡ: ಗೋವಾ ಶಾಸಕ ಅಲೆಕ್ಸ್
ಕಾಂಗ್ರೆಸ್ ಬಿಟ್ಟು ಟಿಎಂಸಿಗೆ, ಟಿಎಂಸಿ ಬಿಟ್ಟು ಮತ್ತೆ ಕಾಂಗ್ರೆಸ್ ಸೇರಲು ಯತ್ನ..!
Team Udayavani, Mar 12, 2022, 6:37 PM IST
ಪಣಜಿ: ನಾನು ಪಕ್ಷೇತರನಾಗಿ ಚುನಾವಣೆಯಲ್ಲಿ ಆಯ್ಕೆಯಾಗಿರುವುದು ನನ್ನ ಜೀವನದಲ್ಲಿ ನಡೆದ ಒಂದು ಪವಾಡ ಎಂದು ಕುರ್ಚೊರೆಮ್ ಕ್ಷೇತ್ರದ ಪಕ್ಷೇತರ ಶಾಸಕ ಅಲೆಕ್ಸ್ ರೆಜಿನಾಲ್ಡೊ ಲಾರೆನ್ಸ್ ಹೇಳಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ದೇವರ ಆಶೀರ್ವಾದ ಮತ್ತು ಮತದಾರರ ನಂಬಿಕೆಯಿಂದಾಗಿ ನಾನು ಮತ್ತೆ ಆಯ್ಕೆಯಾದೆ ಎಂದರು.
ನಾನು ಕಾಂಗ್ರೇಸ್ ಪಕ್ಷ ತೊರೆದು ಟಿಎಂಸಿ ಪಕ್ಷ ಸೇರುವಾಗ ಮತ್ತು ಟಿಎಂಸಿ ಪಕ್ಷ ತೊರೆದಾಗ ನನ್ನ ಉದ್ದೇಶಗಳು ಸ್ವಚ್ಛವಾಗಿದ್ದವು. ನನ್ನ ಕ್ಷೇತ್ರದ ಜನತೆಗಾಗಿ ನಾನು ನಿಷ್ಠೆಯಿಂದ ಕೆಲಸ ಮಾಡುತ್ತೇನೆ ಎಂದು ಅಲೆಕ್ಸ್ ಹೇಳಿದರು.
ಗೋವಾ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ತೊರೆದ ಅಲೆಕ್ಸ್ ಟಿಎಂಸಿ ಸೇರಿದ್ದರು. ನಂತರ ಕಾಂಗ್ರೆಸ್ ಸೇರಲು ಟಿಎಂಸಿ ತೊರೆದರು. ಆದರೆ ಕಾಂಗ್ರೆಸ್ ಪಕ್ಷವು ಟಿಕೆಟ್ ನೀಡಲು ನಿರಾಕರಿಸಿದ್ದರಿಂದ ಪಕ್ಷೇತರರಾಗಿ ಚುನಾವಣೆಯಲ್ಲಿ ಸ್ಫರ್ಧಿಸಿದ್ದರು. ಗೆಲುವು ಸಾಧಿಸಿರುವ ಅವರು ಬಿಜೆಪಿಗೆ ಬೆಂಬಲ ನೀಡಿದ್ದಾರೆ.
ಬಹುಮತಕ್ಕೆ 21 ಸೀಟುಗಳ ಅವಶ್ಯಕತೆಯಿರುವಲ್ಲಿ 20 ಕ್ಷೇತ್ರಗಳನ್ನು ಗೆದ್ದುಕೊಂಡು ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗಿಲ್ಲವಾದರೂ ಬಿಜೆಪಿ ಮತ್ತೊಮ್ಮೆ ಸರ್ಕಾರ ರಚಿಸಲು ಸಜ್ಜಾಗಿದೆ. ಎರಡು ಸ್ಥಾನ ಗೆದ್ದಿರುವ ಪ್ರಾದೇಶಿಕ ಪಕ್ಷ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ (ಎಂಜಿಪಿ) ಸರ್ಕಾರ ರಚಿಸಲು ಬಿಜೆಪಿಗೆ ಬೆಂಬಲ ನೀಡಿದ್ದು, ಪಕ್ಷೇತರರಾದ ಆಂಟೋನಿಯೊ ವಾಸ್, ಚಂದ್ರಕಾಂತ್ ಶೆಟ್ಟಿ ಬೆಂಬಲ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Rajasthan: ಚುನಾವಣ ಅಧಿಕಾರಿ ಮೇಲೆ ಹಲ್ಲೆ; ಪ್ರತಿಭಟನೆ ನಡುವೆ ನರೇಶ್ ಮೀನಾ ಬಂಧನ!
Constitution: ಪ್ರಧಾನಿ ಸಂವಿಧಾನ ಓದಿಲ್ಲ, ಇದಕ್ಕೆ ನಾನು ಗ್ಯಾರಂಟಿ: ರಾಹುಲ್
Kerala:ಧರ್ಮ ಆಧಾರಿತ ವಾಟ್ಸಾಪ್ ಗ್ರೂಪ್ ರಚನೆ ಆರೋಪ; ಇಬ್ಬರು ಐಎಎಸ್ ಅಧಿಕಾರಿಗಳ ಅಮಾನತು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.