Election 2023: ಮತದಾರನನ್ನು ಹುಡುಕಿಕೊಂಡು ಮನೆಮನೆಗೆ ಅಧಿಕಾರಿಗಳು!
80 ವರ್ಷ ಮೇಲ್ಪಟ್ಟವರು, ಅಂಗವಿಕಲರಿಗೆ ಅಂಚೆ ಮತದಾನಕ್ಕೆ ಅವಕಾಶ: 12ಡಿ ಫಾರ್ಮ್ ವಿತರಣೆ ಚುರುಕು
Team Udayavani, Apr 6, 2023, 7:38 AM IST
ಮಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆ ಸಂಬಂಧಿಸಿ ವಿಶೇಷವಾಗಿ ಅಳವಡಿಸಿಕೊಂಡಿರುವ 80 ವರ್ಷ ಮೇಲ್ಪಟ್ಟವರು ಮತ್ತು ಅಂಗವಿಕಲರಿಗೆ (ಪಿಡಬ್ಲ್ಯುಡಿ)ಗೆ ಅಂಚೆ ಮತದಾನ ವ್ಯವಸ್ಥೆಗೆ ಸಂಬಂಧಿಸಿದಂತೆ ಪ್ರಕ್ರಿಯೆಗಳು ಈಗಾಗಲೇ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಆರಂಭವಾಗಿದೆ.
ಆರಂಭಿಕ ಹಂತದಲ್ಲಿ 12ಡಿ ಅರ್ಜಿ ಫಾರ್ಮ್ ವಿತರಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಬಹುತೇಕ ಕ್ಷೇತ್ರಗಳಲ್ಲಿ ಶೇ. 80-90ರಷ್ಟು ಅರ್ಜಿ ವಿತರಣೆ ಮಾಡಲಾಗಿದೆ. ಸೆಕ್ಟರ್ ಆಫೀಸರ್ ಮತ್ತು ಬಿಎಲ್‌ಒಗಳ ಮೂಲಕ 12ಡಿ ಫಾರ್ಮ್ಗಳನ್ನು ವಿತರಿಸಲಾಗುತ್ತಿದೆ.
ಎ. 13ರಂದು ಚುನಾವಣ ಆಯೋಗ ನೋಟಿಫಿಕೇಶನ್ ಹೊರಡಿಸಲಿದ್ದು, ಅಂದಿನಿಂದ 5 ದಿನ ಅಂದರೆ ಎ. 17ರೊಳಗೆ ಈ ಅರ್ಜಿಯನ್ನು ತುಂಬಿಸಿ ಸಲ್ಲಿಸಬೇಕು. ಅದರಲ್ಲಿ ಮತದಾರರ ಪೂರ್ಣ ವಿವರಗಳನ್ನು ಭರ್ತಿ ಮಾಡಬೇಕು. ಇದನ್ನು ಸಂಬಂಧ ಪಟ್ಟ ಅಧಿಕಾರಿಗಳು ದೃಢೀಕರಿಸಬೇಕು. ಅರ್ಜಿಗಳನ್ನು ಬಿಎಲ್‌ಒಗಳ ಮೂಲಕ ಚುನಾವಣಾಧಿಕಾರಿಗಳಿಗೆ ಹಿಂದಿರುಗಿಸಬೇಕು.
ಮುಂದಿನ ಪ್ರಕ್ರಿಯೆಯಾಗಿ ಯಾರು ಮನೆಯಿಂದಲೇ ಮತದಾನ ಮಾಡಲು ಇಚ್ಛಿಸಿದ್ದಾರೋ ಅಂತವರನ್ನು ಮತದಾರರ ಪಟ್ಟಿಯಲ್ಲಿ ಗುರುತು ಮಾಡಿ ಇಡಲಾಗುತ್ತದೆ. ಎ. 17ರ ಬಳಿಕ ಎಷ್ಟು ಮಂದಿ ಮನೆಯಿಂದಲೇ ಮತದಾನ ಮಾಡಲು ಇಚ್ಛಿಸಿದ್ದಾರೆ ಎನ್ನುವ ವಿವರ ಸಿಗಲಿದೆ ಎನ್ನುತ್ತಾರೆ ಅಧಿಕಾರಿಗಳು.
ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ, ಪರಿಶೀಲನೆ, ಹಿಂಪಡೆಯುವಿಕೆ ಈ ಎಲ್ಲ ಪ್ರಕ್ರಿಯೆ ಮುಗಿದು ಅಂತಿಮವಾಗಿ ಯಾರೆಲ್ಲ ಕಣದಲ್ಲಿ ರುತ್ತಾರೆ ಎಂದು ಪಟ್ಟಿ ಸಿದ್ಧವಾದ ಬಳಿಕ, ಅಂಚೆ ಮತದಾನಕ್ಕೆ ಸಂಬಂ ಧಿಸಿದ ಬ್ಯಾಲೆಟ್ ಪೇಪರ್ ಮುದ್ರಣ ಮಾಡಲಾಗುತ್ತದೆ. ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಗತ್ಯತೆಗೆ ಅನುಗುಣವಾಗಿ ತಂಡಗಳನ್ನು ಸಿದ್ಧಪಡಿಸಿ, ಮನೆಯಿಂದಲೇ ಮತದಾನ ಪ್ರಕ್ರಿಯೆ ನಡೆಯುತ್ತದೆ.
ಸಂಪೂರ್ಣ ವೀಡಿಯೋ ಚಿತ್ರೀಕರಣ
ಸಂಬಂಧಪಟ್ಟ ಬಿಎಲ್‌ಒ, ಗಜೆಟೆಡ್ ಅಧಿಕಾರಿಯ ನೇತೃತ್ವದಲ್ಲಿ, ಫೋಟೋಗ್ರಫಿ ಮತ್ತು ವೀಡಿಯೋ ಚಿತ್ರೀಕರಣ ತಂಡದೊಂದಿಗೆ ಮತದಾನ ಪ್ರಕ್ರಿಯೆ ನಡೆಯುತ್ತದೆ. ಈ ವೇಳೆ 13ಎ, 13ಬಿ ಮತ್ತು 13ಸಿ ಎಂದು ಕವರ್‌ಗಳಿದ್ದು, ಬ್ಯಾಲೆಟ್ ಪೇಪರ್ ಮತ್ತು ಡಿಕ್ಲರೇಶನ್ ಹಾಗೂ ಇತರ ವಿವರಗಳನ್ನು ತುಂಬಿ ಸೀಲ್ ಮಾಡುವ ಮೂಲಕ ಮತದಾನ ಪ್ರಕ್ರಿಯೆ ಮುಗಿಯುತ್ತದೆ. ಈ ಮತಪತ್ರಗಳನ್ನು ಮತ ಪೆಟ್ಟಿಗೆಯಲ್ಲಿ ಹಾಕಿ ಸ್ಟ್ರಾಂಗ್ ರೂಮ್‌ನಲ್ಲಿ ಭದ್ರವಾಗಿ ಇರಿಸುತ್ತಾರೆ. ಚುನಾವಣೆಗೆ ಮೂರು ದಿನ ಮೊದಲು ಈ ಪ್ರಕ್ರಿಯೆ ಪೂರ್ಣ ಗೊಳ್ಳ ಬೇಕಿದೆ. ಮತ ಎಣಿಕೆ ದಿನ ಇದರ ಎಣಿಕೆಯೂ ನಡೆಯುತ್ತದೆ.
ವೆಬ್‌ಸೈಟ್‌ನಲ್ಲಿ ಅಪ್‌ಲೋಡ್
ಕೇಂದ್ರ ಚುನಾವಣೆ ಆಯೋಗದಿಂದ ಎಲೆಕ್ಟ್ 1 ಎಂದು ವೆಬ್‌ಸೈಟ್ ರಚಿಸಲಾಗಿದ್ದು, ಅದರಲ್ಲಿ ಯಾರೆಲ್ಲ ಅಂಚೆ ಮತದಾನ ಮಾಡಲು ಇಚ್ಛಿಸಿದ್ದಾರೆ ಮತ್ತು ಅವರು ಮತದಾನ ಮಾಡಿರುವ ಫೋಟೋಗಳನ್ನು ಅಪ್‌ಲೋಡ್ ಮಾಡಿ, ದಾಖಲು ಮಾಡಲಾಗುತ್ತದೆ.
12ಡಿ ಅರ್ಜಿ ವಿತರಣೆ ಪ್ರಕ್ರಿಯೆ
ಈಗಾಗಲೇ ಪ್ರಗತಿಯಲ್ಲಿದ್ದು, ಶೇ.90ರಷ್ಟು ಪೂರ್ಣಗೊಂಡಿದೆ. ಹಿರಿಯ ಮತದಾರರು ಮನೆಯಿಂದಲೇ ಮತದಾನ ಮಾಡಲು ಇಚ್ಛೆ ಪಟ್ಟಲ್ಲಿ ಈ ಅವಕಾಶ ಬಳಸಿಕೊಳ್ಳಬಹುದು. ಸಂಪೂರ್ಣ ಗುಪ್ತ ಮತದಾನ ವ್ಯವಸ್ಥೆಯಂತೆಯೇ ಈ ಪ್ರಕ್ರಿಯೆಯೂ ನಡೆಯಲಿದೆ.
- ಅಭಿಷೇಕ್ ವಿ. ,ಚುನಾವಣಾಧಿಕಾರಿ, ಮಂಗಳೂರು ನಗರ ಉತ್ತರ
~ ಭರತ್ ಶೆಟ್ಟಿಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.