Election ಅಕ್ರಮ: 170 ಕೋಟಿ ರೂ. ಜಪ್ತಿ
Team Udayavani, Apr 17, 2023, 7:16 AM IST
ಬೆಂಗಳೂರು: ರಾಜ್ಯದಲ್ಲಿ ಚುನಾವಣ ಅಕ್ರಮ ಸಂಬಂಧಿಸಿ ಒಟ್ಟು 170.26 ಕೋ. ರೂ. ಜಪ್ತಿ ಮಾಡಲಾಗಿದ್ದು, ಕಳೆದ 24 ಗಂಟೆಗಳಲ್ಲಿ ಮಾಡಿರುವ ಜಪ್ತಿ ಪ್ರಮಾಣ ಅಂದಾಜು 10 ಕೋಟಿ ರೂ. ಆಗಿದೆ.
ಚುನಾವಣ ವೇಳಾಪಟ್ಟಿ ಪ್ರಕಟವಾದ ಮಾ.29ರಿಂದ ಎ. 16ರ ವರೆಗೆ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸರು ಮತ್ತು ಆದಾಯ ತೆರಿಗೆ ಅಧಿಕಾರಿಗಳು 71.27 ಕೋ. ರೂ. ನಗದು, 18.51 ಕೋ.ರೂ. ಮೌಲ್ಯದ ಉಚಿತ ಉಡುಗೊರೆಗಳು, 26.63 ಕೋ. ರೂ. ಮೌಲ್ಯದ 62.26 ಕೆ.ಜಿ. ಬಂಗಾರ, 2.79 ಕೋ. ರೂ. ಮೌಲ್ಯದ 401.97 ಕೆ.ಜಿ. ಬೆಳ್ಳಿಯನ್ನು ವಶಪಡಿಸಿಕೊಂಡಿವೆ. ಈ ಸಂಬಂಧ ಒಟ್ಟು 1,410 ಎಫ್ಐಆರ್‌ಗಳನ್ನು ದಾಖಲಿಸಿಕೊಳ್ಳಲಾಗಿದೆ.
ವಿವಿಧ ಇಲಾಖೆಗಳ ಅಧಿಕಾರಿಗಳು 37.59 ಕೋ. ರೂ. ಮೌಲ್ಯದ 8.94 ಲಕ್ಷ ಲೀಟರ್ ಮದ್ಯ ಹಾಗೂ 13.45 ಕೋ. ರೂ. ಮೌಲ್ಯದ 654.22 ಕೆ.ಜಿ. ಮಾದಕ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಅಬಕಾರಿ ಇಲಾಖೆಯು 1,787 ಗಂಭೀರ, ಪರವಾನಿಗೆ ಉಲ್ಲಂ ಸಿದ 1,337, ಎನ್‌ಡಿಪಿಎಸ್ 65 ಮತ್ತು ಅಬಕಾರಿ ಕಾಯ್ದೆ ಅನ್ವಯ ಒಟ್ಟು 8,124 ಪ್ರಕರಣಗಳನ್ನು ದಾಖಲಿಸಿಕೊಂಡಿದೆ. 1,202 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ರಾಜ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.