ಚುನಾವಣಾ ಸುಧಾರಣೆ : ಸುದ್ದಿಗೊಷ್ಠಿಯಲ್ಲಿ ಕಣ್ಣೀರಿಟ್ಟ ಸ್ಪೀಕರ್ ಕಾಗೇರಿ
Team Udayavani, Feb 12, 2022, 1:39 PM IST
ಬೆಂಗಳೂರು : ಚುನಾವಣಾ ಸುಧಾರಣೆ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಭಾವುಕರಾದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭಾವುಕರಾಗಿ ಕಣ್ಣೀರಿಟ್ಟ ಘಟನೆ ಶನಿವಾರ ನಡೆದಿದೆ.
ಚುನಾವಣಾ ಸುಧಾರಣೆ ಬಹಳ ದೊಡ್ಡ ಜವಾಬ್ದಾರಿ.ಇದರ ಗಾಂಭೀರ್ಯತೆ ಗೊತ್ತಿರೋದ್ರಿಂದ ಸದನದಲ್ಲಿ ಚರ್ಚೆ ಮಾಡೋದು ಅಗತ್ಯ. ರೆಗ್ಯೂಲರ್ ಬಿಸಿನೆಸ್ ನ್ನ ಬದಿಗಿಟ್ಟು ಇದನ್ನ ಚರ್ಚೆ ಮಾಡೋದಿಲ್ಲ.ಸಂವಿಧಾನದ ಬಗ್ಗೆ ಚರ್ಚೆ ಮಾಡಿದ್ದೇವೆ.ಎಷ್ಟು ಒಳ್ಳೆಯ ಚರ್ಚೆ ಮಾಡಿದ್ದೇವೆ.ಎಷ್ಟು ಸದಸ್ಯರು ಸಂತೋಷ ಪಟ್ಟರು.ಬೇರೆ ಬೇರೆ ವಿಚಾರಗಳ ಬಗ್ಗೆ ಮುಕ್ತವಾಗಿ ಚರ್ಚಿಸುವ ಸ್ವಾಭವ ನಮ್ಮದಾಗಬೇಕು. ಬಸವಣ್ಣನ ನಾಡಿನವರು ನಾವು ಅನುಭವ ಮಂಟಪದಲ್ಲಿ ಚರ್ಚೆಯಾಗಿತ್ತು.ಮುಕ್ತವಾದ ವೇದಿಕೆಗಳಲ್ಲಿ ಚರ್ಚೆಗಳು ಅಗಬೇಕು ಎಂದರು.
ಇದನ್ನೂ ಓದಿ : ಸೋಮವಾರದಿಂದ ವಿಧಾನಸಭೆಯ ಜಂಟಿ ಅಧಿವೇಶನ: ಚುನಾವಣಾ ಸುಧಾರಣೆ ಬಗ್ಗೆ ಚರ್ಚೆ?
ಕೇವಲ ದೋಷಾರೋಪಣೆ ಮತ್ತು ಟೀಕೆಗಳು ಆಗಬಾರದು.ವ್ಯವಸ್ಥೆಗಳ ರೂಪಿಸೋದಕ್ಕೆ ನಮ್ಮ ಜವಾಬ್ದಾರಿ ಅರ್ಥ ಮಾಡಿಕೊಳ್ಳಬೇಕು. ಸೃಷ್ಟಿಯ ಸತ್ಯದ ಅರಿವನ್ನ ಮುಡಿಸಿಕೊಳ್ಳುವ ಹಂತಕ್ಕೆ ಹೋಗಬೇಕು.ಇಂಗ್ಲಿಷ್ -ಬ್ರಿಟಿಷ್ ಶಿಕ್ಷಣದ ಪದ್ದತಿಯಿಂದ ನಮ್ಮ ಜೀವನದ ನಂಬಿಕೆಗಳೇ ಇಲ್ಲ. ನಮ್ಮ ಸಾರ್ಥಕತೆಯೇ ಇಲ್ಲದಂತೆ ಆಗಿದೆ. ನಂಬಿಕೆಗಳು ಮತ್ತು ವಿಶ್ವಾಸಗಳು ಬರದೆ ಹೋದರೆ ಈ ವ್ಯವಸ್ಥೆಯನ್ನ ಚನ್ನಾಗಿ ನಡೆಸಲು ಸಾಧ್ಯವಿಲ್ಲ. ಯಾವ ವ್ಯವಸ್ಥೆಯಲ್ಲಿ ನಾವು ಇದ್ದೇವೆ ಸರಿಯಾಗಿ ನಡೆಸಬೇಕು ಎಂದಾದರೆ ನಮ್ಮ ಜ್ಞಾನ ವಿಸ್ತಾರಗೋಳಿಸುವ ಪ್ರಯತ್ನವಾಗಬೇಕು ಎಂದು ಭಾವುಕರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.