![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Sep 9, 2022, 12:08 PM IST
ಲಂಡನ್: ಬ್ರಿಟನ್ ರಾಣಿ ಎಲಿಜಬೆತ್ II (96ವರ್ಷ) ಗುರುವಾರ ತಡರಾತ್ರಿ ನಿಧನ ಹೊಂದಿದ್ದು, ಎಲಿಜಬೆತ್ ಬ್ರಿಟನ್ ರಾಣಿಯಾಗಿ ದೀರ್ಘಕಾಲ ಆಡಳಿತ ನಡೆಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಇವರ ನಿಧನದ ಬಳಿಕ ಹಿರಿಯ ಪುತ್ರ ವೇಲ್ಸ್ ನ ಮಾಜಿ ರಾಜಕುಮಾರ ಚಾರ್ಲ್ಸ್ ಅವರು ರಾಜನಾಗಿ ಕಿರೀಟ ತೊಡಲಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಕುಂದಾಪುರ: ವಿದ್ಯಾರ್ಥಿ ಆತ್ಮಹತ್ಯೆ; ನಾವುಂದ ಕಡಲ ತೀರದಲ್ಲಿ ಮೃತ ದೇಹ ಪತ್ತೆ
73 ವರ್ಷದ ಚಾರ್ಲ್ಸ್ ಇದೀಗ ಬ್ರಿಟನ್ ರಾಜನಾಗಿ ಕಿರೀಟ ಧರಿಸುವ ಅವಕಾಶ ಬಂದಂತಾಗಿದೆ. ಇದರೊಂದಿಗೆ ಬ್ರಿಟನ್ ನ ಕಿಂಗ್ ಚಾರ್ಲ್ಸ್ III ಆಡಳಿತ ನಡೆಸಲಿದ್ದಾರೆ. ರಾಣಿ ಎಲಿಜಬೆತ್ ಅವರ ಮೊದಲ ಪುತ್ರ ಚಾರ್ಲ್ಸ್. ಎಲಿಜಬೆತ್ ಅವರು ತಮ್ಮ 26ನೇ ವಯಸ್ಸಿನಲ್ಲಿ ರಾಣಿಯಾಗಿ ಕಿರೀಟ ಧರಿಸಿದ್ದರು.
ರಾಣಿ ಎಲಿಜಬೆತ್ ಅವರು ಬ್ರಿಟನ್ , ಆಸ್ಟ್ರೇಲಿಯಾ, ಕೆನಡಾ, ನ್ಯೂಜಿಲ್ಯಾಂಡ್ ಮತ್ತು ಪಪುವಾ ನ್ಯೂಗಿನೆಯಾ ಸೇರಿದಂತೆ 14 ದೇಶಗಳಿಗೆ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.
ಬ್ರಿಟನ್ ನೂತನ ರಾಜ ಚಾರ್ಲ್ಸ್:
1948 ನವೆಂಬರ್ 14ರಂದು ಚಾರ್ಲ್ಸ್ ಜನಿಸಿದ್ದರು. ಪ್ರಿನ್ಸ್ ಫಿಲಿಪ್ ಮತ್ತು ಎಲಿಜಬೆತ್ II ದಂಪತಿಗೆ ನಾಲ್ವರು ಮಕ್ಕಳಿದ್ದು, ಅವರಲ್ಲಿ ಚಾರ್ಲ್ಸ್ , ಪ್ರಿನ್ಸ್ ಆ್ಯಂಡ್ರ್ಯೂ, ಆನ್ನೆ ಪ್ರಿನ್ಸಸ್ ರಾಯಲ್, ಪ್ರಿನ್ಸ್ ಎಡ್ವರ್ಡ್ವ್ ಎಲಿಜಬೆತ್. ಇವರಲ್ಲಿ ಚಾರ್ಲ್ಸ್ ಮೊದಲ ಪುತ್ರರಾಗಿದ್ದಾರೆ. ಕೊಹಿನೂರ್ ವಜ್ರವನ್ನು ಚಾರ್ಲ್ಸ್ ಪತ್ನಿ ಕ್ಯಾಮಿಲಾ ಅವರ ಕಿರೀಟಕ್ಕೆ ತೊಡಿಸಲಾಗುವುದು ಎಂದು ವರದಿ ತಿಳಿಸಿದೆ.
ಚಾರ್ಲ್ಸ್ 3 ವರ್ಷದ ಹರೆಯದಲ್ಲಿದ್ದಾಗ ಅಜ್ಜ ಕಿಂಗ್ ಜಾರ್ಜ್ VI ವಿಧಿವಶರಾಗಿದ್ದರು. ನಂತರ 1952ರಲ್ಲಿ ತಾಯಿ ಎಲಿಜಬೆತ್ ಅವರು ಬ್ರಿಟನ್ ರಾಣಿಯಾಗಿ ಕಿರೀಟ ಧರಿಸಿದ್ದರು. ಚಾರ್ಲ್ಸ್ ಗೆ 9 ವರ್ಷವಾಗಿದ್ದಾಗ ಪ್ರಿನ್ಸ್ ಆಫ್ ವೇಲ್ಸ್ ಬಿರುದು ನೀಡಲಾಗಿತ್ತು.
ಚಾರ್ಲ್ಸ್ ವಿಷಯದಲ್ಲಿ ಎಲಿಜಬೆತ್ ಮತ್ತು ಫಿಲಿಪ್ ದಂಪತಿ ರಾಜಮನೆತನದ ಸಂಪ್ರದಾಯವನ್ನು ಮುರಿದಿದ್ದು, ರಾಯಲ್ ಟ್ಯೂಟರ್ ನೇಮಕ ಮಾಡುವ ಬದಲು ಶಾಲೆಗೆ ಕಳುಹಿಸಲು ನಿರ್ಧರಿಸಿದ್ದರು. ಅದರಂತೆ ಪಶ್ಚಿಮ ಲಂಡನ್ ಹಿಲ್ ಹೌಸ್ ಸ್ಕೂಲ್ ನಲ್ಲಿ ಚಾರ್ಲ್ಸ್ ವಿದ್ಯಾಭ್ಯಾಸ ಪಡೆದಿದ್ದು, ಕೇಂಬ್ರಿಡ್ಜ್ ಟ್ರಿನಿಟಿ ಯೂನಿರ್ವಸಿಟಿಯಲ್ಲಿ ಪದವಿ ಶಿಕ್ಷಣ ಪಡೆದಿದ್ದರು.
1981ರಲ್ಲಿ ಚಾರ್ಲ್ಸ್ ಅವರು ಡಯನಾ ಸ್ಪೆನ್ಸರ್ ಅವರನ್ನು ವಿವಾಹವಾಗಿದ್ದರು. ಈಕೆ ಜನಪರ ರಾಜಕುಮಾರಿ ಎಂದೇ ಜನಪ್ರಿಯರಾಗಿದ್ದಾರೆ. ಚಾರ್ಲ್ಸ್ ದಂಪತಿಗೆ ಪ್ರಿನ್ಸ್ ವಿಲಿಯಮ್ ಮತ್ತು ಹ್ಯಾರಿ ಸೇರಿದಂತೆ ಇಬ್ಬರು ಮಕ್ಕಳು.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
You seem to have an Ad Blocker on.
To continue reading, please turn it off or whitelist Udayavani.