![T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ](https://www.udayavani.com/wp-content/uploads/2024/12/BANG-1-415x237.jpg)
World Cup; ಸೋಲಿನೊಂದಿಗೆ ಹೊರಬಿದ್ದ ಪಾಕ್: ಇಂಗ್ಲೆಂಡ್‌ಗೆ ಗೆಲುವಿನ ವಿದಾಯ
ಚಾಂಪಿಯನ್ಸ್ ಟ್ರೋಫಿ ಗೆ ಅರ್ಹತೆ ಸಂಪಾದಿಸಿದ ಆಂಗ್ಲರು
Team Udayavani, Nov 11, 2023, 10:22 PM IST
![1-dsadsad](https://www.udayavani.com/wp-content/uploads/2023/11/1-dsadsad-620x401.jpg)
ಕೋಲ್ಕತಾ: ಹಾಲಿ ಚಾಂಪಿಯನ್ ಇಂಗ್ಲೆಂಡ್ ಸೊಗಸಾದ ಜಯದೊಂದಿಗೆ ವಿಶ್ವಕಪ್ ಪಂದ್ಯಾವಳಿಗೆ ವಿದಾಯ ಹೇಳಿದೆ. ಇನ್ನೊಂದೆಡೆ ಸಾಧ್ಯವೇ ಇಲ್ಲದ ಟಾರ್ಗೆಟ್ ಪಡೆದಿದ್ದ ಪಾಕಿಸ್ಥಾನ ದೊಡ್ಡದೊಂದು ಸೋಲು ಹೊತ್ತು ಕೂಟದಿಂದ ನಿರ್ಗಮಿಸಿತು. ಅರ್ಥಾತ್, ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಶನಿವಾರದ ಮುಖಾಮುಖೀಯಲ್ಲಿ ಇಂಗ್ಲೆಂಡ್ 93 ರನ್ನುಗಳ ಅಂತರದಿಂದ ಬಾಬರ್ ಪಡೆಯನ್ನು ಹಿಮ್ಮೆಟ್ಟಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ 9 ವಿಕೆಟಿಗೆ 337 ರನ್ ಪೇರಿಸಿದರೆ, ಪಾಕಿಸ್ಥಾನ 43.3 ಓವರ್‌ಗಳಲ್ಲಿ 244ಕ್ಕೆ ಆಲೌಟ್ ಆಯಿತು. ಇದು ಆಂಗ್ಲರಿಗೆ ಒಲಿದ 3ನೇ ಗೆಲುವಾದರೆ, ಪಾಕ್ ಅನುಭವಿಸಿದ 5ನೇ ಸೋಲು. ಇದರೊಂದಿಗೆ ಇಂಗ್ಲೆಂಡ್ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಅರ್ಹತೆ ಸಂಪಾದಿಸಿತು.
ಚೇಸಿಂಗ್ ವೇಳೆ ಆರಂಭಿಕರನ್ನು 10 ರನ್ ಆಗುವಷ್ಟ ರಲ್ಲಿ ಕಳೆದುಕೊಂಡ ಪಾಕಿಸ್ಥಾನ, ಈ ಆಘಾತದಿಂದ ಚೇತರಿಸಿ ಕೊಳ್ಳಲೇ ಇಲ್ಲ. ಇಂಗ್ಲೆಂಡ್ ಸಾಂಫಿಕ ಬೌಲಿಂಗ್ ದಾಳಿಯ ಮೂಲಕ ಪಾಕ್ ಮೇಲೆರಗಿತು. ಎಲ್ಲ 5 ಬೌಲರ್‌ಗಳೂ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ಆಘಾ ಸಲ್ಮಾನ್ ಅವರಿಂದ ಏಕೈಕ ಅರ್ಧ ಶತಕ ದಾಖಲಾಯಿತು (51).
ಸತತ 2ನೇ 300 ರನ್
ಕೂಟದಿಂದ ಹೊರಬಿದ್ದ ಬಳಿಕ ಚಾಂಪಿಯನ್ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಚಿಗುರಿದ್ದು ವಿಶೇಷ. ಸತತ 2 ಪಂದ್ಯಗಳಲ್ಲಿ ಅದು 300 ಪ್ಲಸ್ ರನ್ ಬಾರಿಸಿತು. ಇದಕ್ಕೂ ಮೊದಲು ನೆದರ್ಲೆಂಡ್ಸ್ ವಿರುದ್ಧ 9ಕ್ಕೆ 339 ರನ್ ಮಾಡಿತ್ತು. ಇಲ್ಲಿ 2 ರನ್ ಕಡಿಮೆ, ಅಷ್ಟೇ.
ಇಂಗ್ಲೆಂಡ್‌ನ 340 ರನ್ ಗುರಿಯನ್ನು ಪಾಕಿಸ್ಥಾನ 6.4 ಓವರ್‌ಗಳಲ್ಲಿ, ಅರ್ಥಾತ್ 40 ಎಸೆತಗಳಲ್ಲಿ ಮೀರಿ ನಿಲ್ಲಬೇಕಿತ್ತು. ಈ ಎಲ್ಲ ಎಸೆತಗಳನ್ನು ಸಿಕ್ಸರ್‌ಗೆ ಬಡಿದಟ್ಟಿದರೂ ಗಳಿಸಲು ಸಾಧ್ಯವಿದ್ದುದು 240 ರನ್ ಮಾತ್ರ. ಮುಂದಿನದು 5ನೇ ಸ್ಥಾನ ಉಳಿಸಿಕೊಳ್ಳಬೇಕಾದ ಒತ್ತಡ. ಇದಕ್ಕೆ 188 ರನ್ ಗಳಿಸಬೇಕಿತ್ತು.
ಇಂಗ್ಲೆಂಡ್‌ನ ಈ ಬೃಹತ್ ಮೊತ್ತಕ್ಕೆ ಮೂವರ ಅರ್ಧ ಶತಕ ಕಾರಣ. ಆರಂಭಕಾರ ಜಾನಿ ಬೇರ್‌ಸ್ಟೊ 59, ಜೋ ರೂಟ್ 60 ಹಾಗೂ ಬೆನ್ ಸ್ಟೋಕ್ಸ್ 84 ರನ್ ಬಾರಿಸಿದರು. 40ನೇ ಓವರ್ ಅಂತ್ಯಕ್ಕೆ ಇಂಗ್ಲೆಂಡ್ ಕೇವಲ 2 ವಿಕೆಟ್ ಕಳೆದುಕೊಂಡು 240 ರನ್ ಗಳಿಸಿತ್ತು. ಅಂತಿಮ 10 ಓವರ್‌ಗಳಲ್ಲಿ ಇದೇ ಲಯದಲ್ಲಿ ಸಾಗಲು ವಿಫಲವಾಯಿತು. ಇಲ್ಲಿ 97 ರನ್ನಿಗೆ 7 ವಿಕೆಟ್ ಉದುರಿತು.
ಡೇವಿಡ್ ಮಲಾನ್ (31) ಮತ್ತು ಜಾನಿ ಬೇರ್‌ಸ್ಟೊ (59) ಸೇರಿಕೊಂಡು ಉತ್ತಮ ಆರಂಭ ಒದಗಿಸಿದರು. 13.3 ಓವರ್‌ಗಳಲ್ಲಿ 82 ರನ್ ಒಟ್ಟುಗೂಡಿತು. ಮಲಾನ್ ಗಳಿಕೆ 31 ರನ್. 39 ಎಸೆತ ಎದುರಿಸಿದ ಅವರು 5 ಬೌಂಡರಿ ಬಾರಿಸಿದರು. ಇಫ್ತಿಕಾರ್ ಅಹ್ಮದ್ ಪಾಕ್‌ಗೆ ಮೊದಲ ಬ್ರೇಕ್ ಒದಗಿಸಿದರು.
ಸ್ಕೋರ್ ಪಟ್ಟಿ
ಇಂಗ್ಲೆಂಡ್
ಡೇವಿಡ್ ಮಲಾನ್ ಸಿ ರಿಜ್ವಾನ್ ಬಿ ಇಫ್ತಿಕಾರ್ 31
ಜಾನಿ ಬೇರ್‌ಸ್ಟೊ ಸಿ ಸಲ್ಮಾನ್ ಬಿ ರವೂಫ್ 59
ಜೋ ರೂಟ್ ಸಿ ಶದಾಬ್ ಬಿ ಅಫ್ರಿದಿ 60
ಬೆನ್ ಸ್ಟೋಕ್ಸ್ ಬಿ ಅಫ್ರಿದಿ 84
ಜೋ ರೂಟ್ ರನೌಟ್ 27
ಹ್ಯಾರಿ ಬ್ರೂಕ್ ಸಿ ಅಫ್ರಿದಿ ಬಿ ರವೂಫ್ 30
ಮೊಯಿನ್ ಅಲಿ ಬಿ ರವೂಫ್ 8
ಕ್ರಿಸ್ ವೋಕ್ಸ್ ಔಟಾಗದೆ 4
ಡೇವಿಡ್ ವಿಲ್ಲಿ ಸಿ ಇಫ್ತಿಕಾರ್ ಬಿ ವಾಸಿಮ್ 15
ಗಸ್ ಅಟಿRನ್ಸನ್ ಬಿ ವಾಸಿಮ್ 0
ಆದಿಲ್ ರಶೀದ್ ಔಟಾಗದೆ 0
ಇತರ 19
ಒಟ್ಟು (50 ಓವರ್‌ಗಳಲ್ಲಿ 9 ವಿಕೆಟಿಗೆ) 337
ವಿಕೆಟ್ ಪತನ: 1-82, 2-108, 3-240, 4-257, 5-302, 6-306, 7-317, 8-336, 9-336.
ಬೌಲಿಂಗ್: ಶಾಹೀನ್ ಶಾ ಅಫ್ರಿದಿ 10-1-72-2
ಹ್ಯಾರಿಸ್ ರವೂಫ್ 10-0-64-3
ಇಫ್ತಿಕಾರ್ ಅಹ್ಮದ್ 7-0-38-1
ಮೊಹಮ್ಮದ್ ವಾಸಿಮ್ ಜೂ. 10-0-74-2
ಶದಾಬ್ ಖಾನ್ 10-0-57-0
ಆಘಾ ಸಲ್ಮಾನ್ 3-0-25-0
ಪಾಕಿಸ್ಥಾನ
ಅಬ್ದುಲ್ಲ ಶಫೀಕ್ ಎಲ್‌ಬಿಡಬ್ಲ್ಯು ವಿಲ್ಲಿ 0
ಫಖರ್ ಜಮಾನ್ ಸಿ ಸ್ಟೋಕ್ಸ್ ಬಿ ವಿಲ್ಲಿ 1
ಬಾಬರ್ ಆಜಂ ಸಿ ರಶೀದ್ ಬಿ ಅಟಿRನ್ಸನ್ 38
ಮೊಹಮ್ಮದ್ ರಿಜ್ವಾನ್ ಬಿ ಮೊಯಿನ್ 36
ಸೌದ್ ಶಕೀಲ್ ಬಿ ರಶೀದ್ 29
ಆಘಾ ಸಲ್ಮಾನ್ ಸಿ ಸ್ಟೋಕ್ಸ್ ಬಿ ವಿಲ್ಲಿ 51
ಇಫ್ತಿಕಾರ್ ಅಹ್ಮದ್ ಸಿ ಮಲಾನ್ ಬಿ ಅಲಿ 3
ಶದಾಬ್ ಖಾನ್ ಬಿ ರಶೀದ್ 4
ಶಾಹೀನ್ ಶಾ ಅಫ್ರಿದಿ ಎಲ್‌ಬಿಡಬ್ಲ್ಯು ಅಟಿRನ್ಸನ್ 25
ಮೊಹಮ್ಮದ್ ವಾಸಿಮ್ ಔಟಾಗದೆ 16
ಹ್ಯಾರಿಸ್ ರವೂಫ್ ಸಿ ಸ್ಟೋಕ್ಸ್ ಬಿ ವೋಕ್ಸ್ 35
ಇತರ 6
ಒಟ್ಟು (43.3 ಓವರ್‌ಗಳಲ್ಲಿ ಆಲೌಟ್) 244
ವಿಕೆಟ್ ಪತನ: 1-0, 2-10, 3-61, 4-100, 5-126, 6-145, 7-150, 8-186, 9-191.
ಬೌಲಿಂಗ್:
ಡೇವಿಡ್ ವಿಲ್ಲಿ 10-0-56-3
ಕ್ರಿಸ್ ವೋಕ್ಸ್ 5.3-0-27-1
ಆದಿಲ್ ರಶೀದ್ 10-0-55-2
ಗಸ್ ಅಟಿನ್ಸನ್ 8-0-45-2
ಮೊಯಿನ್ ಅಲಿ 10-0-60-2
ಪಂದ್ಯಶ್ರೇಷ್ಠ: ಡೇವಿಡ್ ವಿಲ್ಲಿ
ಟಾಪ್ ನ್ಯೂಸ್
![T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ](https://www.udayavani.com/wp-content/uploads/2024/12/BANG-1-415x237.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ](https://www.udayavani.com/wp-content/uploads/2024/12/BANG-1-150x86.jpg)
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
![BGT 2024: Team India faces injury problems ahead of Melbourne match](https://www.udayavani.com/wp-content/uploads/2024/12/team-150x86.jpg)
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
![ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ](https://www.udayavani.com/wp-content/uploads/2024/12/vaibhav-150x86.jpg)
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
![IND-W vs WI: ವನಿತೆಯರ ಏಕದಿನ ಮುಖಾಮುಖಿ](https://www.udayavani.com/wp-content/uploads/2024/12/18-1-150x90.jpg)
IND-W vs WI: ವನಿತೆಯರ ಏಕದಿನ ಮುಖಾಮುಖಿ
![Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!](https://www.udayavani.com/wp-content/uploads/2024/12/9-28-150x90.jpg)
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
![T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ](https://www.udayavani.com/wp-content/uploads/2024/12/BANG-1-150x86.jpg)
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
![BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್](https://www.udayavani.com/wp-content/uploads/2024/12/1-42-150x90.jpg)
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
![BGT 2024: Team India faces injury problems ahead of Melbourne match](https://www.udayavani.com/wp-content/uploads/2024/12/team-150x86.jpg)
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
![Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು](https://www.udayavani.com/wp-content/uploads/2024/12/mohali-150x86.jpg)
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
![ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ](https://www.udayavani.com/wp-content/uploads/2024/12/vaibhav-150x86.jpg)
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.