ಡಿ.23 ರಿಂದ 31ರ ವರೆಗೆ 1,262 ಕೋಟಿ ಮೌಲ್ಯದ ಮದ್ಯ ಮಾರಾಟ
ಅಬಕಾರಿ ಇಲಾಖೆಗೆ ಭರ್ಜರಿ ಆದಾಯ; 15.4 ಲಕ್ಷ ಲೀಟರ್ ಬಿಯರ್ ಸೇಲ್
Team Udayavani, Jan 2, 2023, 7:20 AM IST
ಬೆಂಗಳೂರು: ಹೊಸ ವರ್ಷಾಚರಣೆಗೆ ಅಬಕಾರಿ ಇಲಾಖೆಗೆ ಭಾರಿ ಆದಾಯ ಬಂದಿದ್ದು, ಡಿ.23ರಿಂದ ಡಿ.31ರವರೆಗೆ ಬರೋಬ್ಬರಿ 1,262 ಕೋಟಿ ರೂ. ಮೌಲ್ಯದ 20.66 ಲಕ್ಷ ಲೀಟರ್ ಐಎಂಎಲ್ ಮದ್ಯ ಮಾರಾಟವಾಗಿದೆ. ಈ ಪೈಕಿ 15.4 ಲಕ್ಷ ಲೀಟರ್ ಬಿಯರ್ ಮಾರಾಟವಾಗಿ ದಾಖಲೆ ನಿರ್ಮಿಸಿದೆ.
ಡಿ.27-3.57 ಲಕ್ಷ ಲೀಟರ್-(2.41 ಲಕ್ಷ ಬಿಯರ್), ಡಿ.28-2.31 ಲಕ್ಷ ಲೀಟರ್ ಮದ್ಯ-(1.67 ಲಕ್ಷ ಬಿಯರ್), ಡಿ.29-2.31 ಲಕ್ಷ ಲೀಟರ್ ಮದ್ಯ,-(1.93 ಲಕ್ಷ ಬಿಯರ್), ಡಿ.30-2.93 ಲಕ್ಷ ಲೀಟರ್, (2.59 ಲಕ್ಷ ಬಿಯರ್), ಡಿ.31 3 ಲಕ್ಷ ಲೀಟರ್-(2.41 ಲಕ್ಷ ಬಿಯರ್), ಡಿ.31-181 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ಹೇಳಲಾಗಿದೆ.
ಹೊಸವರ್ಷ ಹಿನ್ನೆಲೆಯಲ್ಲಿ ಚರ್ಚ್ ಸ್ಟ್ರೀಟ್, ಬ್ರಿಗೆಡ್ ರಸ್ತೆಯಲ್ಲಿರುವ ಪಬ್‌ಗಳಿಗೆ ಫುಲ್ ಬೇಡಿಕೆ ವ್ಯಕ್ತವಾಗಿತ್ತು. ಪಬ್ ಮಾಲೀಕರು ಹೊಸ ವರ್ಷದ ಪಾರ್ಟಿಗೆ ನಿಗದೀತ ದರಕ್ಕಿಂತ ಶೇ.50 ರಷ್ಟು ಬೆಲೆ ಏರಿಕೆ ಮಾಡಿದ್ದರು. ದುಪ್ಪಟ್ಟು ದುಡ್ಡು ಕೊಡಲು ಮುಂದಾದರೂ ಬಹುತೇಕ್ ಪಬ್‌ಗಳು ಹೌಸ್‌ಫುಲ್ ಆಗಿದ್ದ ಕಾರಣಕ್ಕೆ ಪ್ರವೇಶ ಸಿಗದೇ ನಿರಾಸೆಗೊಳಗಾದರು.
ಚರ್ಚ್ ಸ್ಟ್ರೀಟ್ ನಡುವೆಯೂ ಪಬ್ ಗಳು ಹೌಸ್‌ಫುಲ್ ಆಗಿದ್ದವು. ಪಾರ್ಟಿ ಪ್ರಿಯರು ದುಪ್ಪಟ್ಟು ಹಣ ಕೊಟ್ಟು ಮುಂಗಡವಾಗಿ ಪಬ್‌ಗಳನ್ನು ಬುಕ್ ಮಾಡಿದ್ದರು. ಪಬ್ ಗಳಲ್ಲಿ ಮೋಜು ಮಸ್ತಿ ಮಾಡುವವರಿಗೆ ವಿಶೇಷ ಪ್ಯಾಕೇಜ್ ಕೊಡಲಾಗಿತ್ತು. ಪಬ್‌ಗ ಹೆಚ್ಚು ಜನರನ್ನು ಆಕರ್ಷಿಸಲು ಅನ್ ಲಿಮಿಟೆಡ್ ಆಫರ್ ವ್ಯವಸ್ಥೆ ನೀಡಲಾಗಿತ್ತು. ಕಪಲ್, ಫ್ಯಾಮಿಲಿ,ಸಿಂಗಲ್ಸ್ ಗಳಿಗೆ ಪ್ರತ್ಯೇಕ ಶುಲ್ಕ ನಿಗದಿಪಡಿಸಲಾಗಿತ್ತು.
ಕೋವಿಡ್‌ನಿಂದಾಗಿ ಕಳೆದ ಮೂರು ವರ್ಷದಿಂದ ಹೊಸ ವರ್ಷವನ್ನು ಸಂಭ್ರಮಿಸಲಾಗಿರಲಿಲ್ಲ. ಈ ಬಾರಿ ಹೊಸ ವರ್ಷಾಚರಣೆಗೆ ಅವಕಾಶ ಸಿಕ್ಕಿತ್ತು. ಹಾಗಾಗಿ ಇಡೀ ರಾಜ್ಯದ ಜನರು ರಾತ್ರಿಯೆಲ್ಲ ಕಣಿದು ಕುಪ್ಪಳಿಸಿ ಹೊಸ ವರ್ಷವನ್ನು ಸ್ವಾಗತಿಸಿ 2023ನೇ ವರ್ಷವನ್ನು ಬರಮಾಡಿಕೊಂಡರು.
21,981 ಕೋಟಿ ರೂ.ಆದಾಯ:
ರಾಜ್ಯ ಸರ್ಕಾರ ಅಬಕಾರಿ ಇಲಾಖೆಗೆ 2022-23ನೇ ಸಾಲಿನಲ್ಲಿ 29 ಸಾವಿರ ಕೋಟಿ ರೂ.ರಾಜಸ್ವ ಗುರಿ ನೀಡಿತ್ತು. ಈ ವರ್ಷದ ಡಿ.29ರವರೆಗೆ ರಾಜ್ಯಾದ್ಯಂತ ಮದ್ಯ ಮಾರಾಟದಿಂದ ಇಲಾಖೆಗೆ ಬರೋಬ್ಬರಿ 21,981 ಕೋಟಿ ರೂ.ಆದಾಯ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಇದೇ ಅವಧಿಯಲ್ಲಿ ಶೇ.14 ಮದ್ಯ ಮಾರಾಟದಲ್ಲಿ ಹೆಚ್ಚಳವಾಗಿದೆ ಅಬಕಾರಿ ಇಲಾಖೆಯ ಅಂಕಿ-ಅಂಶಗಳು ತಿಳಿಸಿವೆ.
2020-21ರ ಡಿ.23ರಿಂದ ಡಿ.31ರವರೆಗೆ 17.48 ಲಕ್ಷ ಬಾಕ್ಸ್ ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್ ), 10.62 ಲಕ್ಷ ಬಾಕ್ಸ್ ಬಿಯರ್, 2021-22ರ ಡಿ.23ರಿಂದ ಡಿ.31ರವರೆಗೆ 19.46 ಲಕ್ಷ ಬಾಕ್ಸ್ ಐಎಂಎಲ್ , 11.24 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. ರಾಜ್ಯದಲ್ಲಿ 3,921 ವೈನ್‌ಶಾಪ್(ಸಿಎಲ್ 2), 3,622 ಬಾರ್ ಆ್ಯಂಡ್ ರೆಸ್ಟೋರೆಂಟ್(ಸಿಎಲ್ 9), 1,729 ಹೋಟೆಲ್ ಮತ್ತು ವಸತಿ ಗೃಹ (ಸಿಎಲ್ 7 ) ಹಾಗೂ 265 ಕ್ಲಬ್ ಸೇರಿ ಒಟ್ಟು 12,113 ಮದ್ಯದಂಗಡಿಗಳಿವೆ.
2022-23ರ ಡಿ.29ರಿಂದ ಡಿ.31ರವರೆಗೆ 8.24 ಲಕ್ಷ ಬಾಕ್ಸ್ ಐಎಂಎಲ್ ಹಾಗೂ 6.62 ಲಕ್ಷ ಬಾಕ್ಸ್ ಬಿಯರ್ ಸೇಲಾಗಿದೆ. ಇದೂ ಸಹ ಹಿಂದಿನ ಎರಡು ವರ್ಷದ ದಾಖಲೆಗಳನ್ನು ಮುರಿದಿದೆ. ಡಿ.31ರಂದು 200 ಕೋಟಿ ರೂ.ಮೌಲ್ಯದ ಐಎಂಎಲ್ ಮತ್ತು ಬಿಯರ್ ಮಾರಾಟವಾಗಿದೆ. ಸಿಲಿಕಾನ್ ಸಿಟಿಯಲ್ಲೇ ಅತೀ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ.
ಹೊಸ ವರ್ಷ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಾವಿರಕ್ಕೂ ಹೆಚ್ಚು ಸಾಂದರ್ಭಿಕ ( ಒಂದು ದಿನಕ್ಕೆ ಸೀಮಿತ) ಪರವಾನಗಿ ನೀಡಲಾಗಿದೆ. ಈ ವರ್ಷ ಪರವಾನಗಿಗಾಗಿ ಸಾವಿರಾರು ಅರ್ಜಿಗಳು ಅಬಕಾರಿ ಇಲಾಖೆಗೆ ಸಲ್ಲಿಕೆಯಾಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.