BSc ನರ್ಸಿಂಗ್‌ ಕೋರ್ಸ್‌ ಪ್ರವೇಶಕ್ಕೆ ವಿನಾಯಿತಿ

Team Udayavani, Jul 13, 2023, 7:32 AM IST

nurse

ಬೆಂಗಳೂರು: ಬಿಎಸ್ಸಿ ನರ್ಸಿಂಗ್‌ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆಯದ ವಿದ್ಯಾರ್ಥಿಗಳಿಗೂ ಅನುಕೂಲ ಆಗುವಂತೆ ಸರ್ಕಾರ ಒಂದಾವರ್ತಿ ವಿನಾಯ್ತಿ (ಒನ್‌ಟೈಮ್‌ ರಿಲ್ಯಾಕ್ಸೇಷನ್‌) ನೀಡಿದೆ.

2023-24ನೇ ಸಾಲಿನ ಬಿಎಸ್ಸಿ ನರ್ಸಿಂಗ್‌ ಕೋರ್ಸ್‌ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾದ ಸಿಇಟಿಗೆ ಪೂರ್ವಸಿದ್ಧತೆ ಮಾಡಿಕೊಳ್ಳಲಿಕ್ಕೂ ವಿದ್ಯಾರ್ಥಿಗಳಿಗೆ ಸರಿಯಾದ ಕಾಲಾವಕಾಶ ಸಿಕ್ಕಿಲ್ಲ. ಇದರಿಂದ ಸಾವಿರಾರು ಅಭ್ಯರ್ಥಿಗಳು ಅವಕಾಶ ವಂಚಿತರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಿಇಟಿ ಬರೆದವರಿಗೆ ಮತ್ತು ಬರೆಯದವರಿಗೆ ಎರಡೂ ವರ್ಗಗಳಿಗೆ ಅನ್ಯಾಯವಾಗದಂತೆ ಒಂದಾವರ್ತಿ ವಿನಾಯ್ತಿ ನೀಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.

ಅದರಂತೆ ಸಿಇಟಿ ಬರೆದ ಅಭ್ಯರ್ಥಿಗಳ ಪ್ರವೇಶಕ್ಕೆ ಮೆರಿಟ್‌ ಆಧಾರದಲ್ಲಿ ಎರಡು ಸುತ್ತಿನ ಕೌನ್ಸೆಲಿಂಗ್‌ ನಡೆಸಲಾಗುವುದು. ನಂತರ ಉಳಿಯುವ ಸೀಟುಗಳಿಗೆ ಆಯಾ ಕಾಲೇಜುಗಳಿಗೆ ಭರ್ತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಈ ಹಂತದಲ್ಲಿ ಸಿಇಟಿ ಬರೆಯದ ವಿದ್ಯಾರ್ಥಿಗಳೂ ಪ್ರವೇಶ ಪಡೆಯಬಹುದಾಗಿದೆ. ಆದರೆ, ಕಡ್ಡಾಯವಾಗಿ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾನದಂಡಗಳನ್ನು ಅನುಸರಿಸಬೇಕು. ಅದರಂತೆ ಪಿಯುಸಿ ವಿಜ್ಞಾನದಲ್ಲಿ ಸಾಮಾನ್ಯ ವಿದ್ಯಾರ್ಥಿಗಳು ಪಿಸಿಎಂಬಿಯಲ್ಲಿ ಶೇ. 45ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಶೇ. 40ರಷ್ಟು ಅಂಕ ಗಳಿಸಿರಬೇಕು ಎಂದು ಹೇಳಿದರು.

ನಿಯಮ 330ರಡಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಎಸ್‌.ವಿ. ಸಂಕನೂರ, ಬಿಎಸ್ಸಿ ನರ್ಸಿಂಗ್‌ ಕೋರ್ಸ್‌ಗೆ ಸಿಇಟಿ ಪರೀಕ್ಷೆಯ ಮೂಲಕ ಸೀಟು ಹಂಚಿಕೆ ಮಾಡಲಾಗುತ್ತಿದೆ. ಆದರೆ, ವಿದ್ಯಾರ್ಥಿಗಳಿಗೆ ಪರೀಕ್ಷೆ ಪೂರ್ವಸಿದ್ಧತೆಗೂ ಕಾಲಾವಕಾಶ ನೀಡಿಲ್ಲ. ಸಾವಿರಾರು ವಿದ್ಯಾರ್ಥಿಗಳಿಗೆ ಪರೀಕ್ಷೆ ಬಗ್ಗೆ ಮಾಹಿತಿ ಕೂಡ ಇಲ್ಲ. ಈ ಕ್ರಮದಿಂದ ಸಾವಿರಾರು ಅಭ್ಯರ್ಥಿಗಳು ವಂಚಿತರಾಗುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಅಧಿಸೂಚನೆ ಹೊರಡಿಸಿ ಪರೀಕ್ಷೆ ನಡೆಸಲಾಗಿದೆ. ಅದೇನೇ ಇರಲಿ, ತರಾತುರಿ ಪರೀಕ್ಷೆಯಿಂದ ವಿದ್ಯಾರ್ಥಿಗಳಿಗೆ ಅನಾನುಕೂಲ ಆಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹಾಗಾಗಿ, ಒನ್‌ಟೈಮ್‌ ವಿನಾಯ್ತಿ ನೀಡಲಾಗಿದೆ. ಎರಡು ಸುತ್ತಿನ ಕೌನ್ಸೆಲಿಂಗ್‌ ನಂತರ ಉಳಿಯುವ ಸೀಟುಗಳ ಭರ್ತಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಕಾಲೇಜುಗಳು ಹೆಚ್ಚು ಶುಲ್ಕ ನಿಗದಿಪಡಿಸಲು ಬೇಡಿಕೆ ಇಡುತ್ತಿವೆ. 2ರಿಂದ 3 ಲಕ್ಷ ರೂ. ಶುಲ್ಕಕ್ಕೆ ಅನುಮತಿ ಕೇಳುತ್ತಿವೆ. ಇದರಿಂದ ಪೋಷಕರಿಗೆ ಹೊರೆ ಆಗಲಿದ್ದು, ಶುಲ್ಕ ನಿಗದಿಪಡಿಸುವ ಸಂಬಂಧ ಮಾತುಕತೆ ನಡೆದಿದೆ ಎಂದು ಮಾಹಿತಿ ನೀಡಿದರು.

ಏಪ್ರಿಲ್‌ನಲ್ಲಿ ಪ್ರಕಟಣೆ ಹೊರಡಿಸಿ, ಮೇನಲ್ಲಿ ಈ ಸಂಬಂಧ ಸಿಇಟಿ ನಡೆಸಲಾಗಿತ್ತು. ರಾಜ್ಯದಲ್ಲಿ 33 ಸಾವಿರ ನರ್ಸಿಂಗ್‌ ಸೀಟುಗಳು ಲಭ್ಯವಿದ್ದು, ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಪೈಕಿ ಒಟ್ಟು 1.75 ಲಕ್ಷ ಅಭ್ಯರ್ಥಿಗಳು ಸೀಟು ಹಂಚಿಕೆಗೆ ಅರ್ಹತೆ ಪಡೆದಿದ್ದಾರೆ ಎಂದು ತಿಳಿಸಿದರು.

ಟಾಪ್ ನ್ಯೂಸ್

Central Government ಕೃಷಿ ಸಿಂಚಾಯಿ ಯೋಜನೆ: ರಾಜ್ಯದಿಂದ ಹೆಚ್ಚುವರಿ ಸಬ್ಸಿಡಿ ಖೋತಾ

Central Government ಕೃಷಿ ಸಿಂಚಾಯಿ ಯೋಜನೆ: ರಾಜ್ಯದಿಂದ ಹೆಚ್ಚುವರಿ ಸಬ್ಸಿಡಿ ಖೋತಾ

Shobha

Dengue: ಜನರ ಪ್ರಾಣ ಹೋಗುವ ಮುನ್ನ ಸರಕಾರ ಎಚ್ಚೆತ್ತುಕೊಳ್ಳಲಿ: ಶೋಭಾ ಕರಂದ್ಲಾಜೆ

Infectious Disease ಕರುನಾಡಿಗೆ ಜ್ವರ ಭೀತಿ: ರಾಜ್ಯ ಸರಕಾರ ಕಟ್ಟೆಚ್ಚರ

Infectious Disease ಕರುನಾಡಿಗೆ ಜ್ವರ ಭೀತಿ: ರಾಜ್ಯ ಸರಕಾರ ಕಟ್ಟೆಚ್ಚರ

PM Modi ಇಂದಿನಿಂದ ಪ್ರಧಾನಿ ಮೋದಿ ರಷ್ಯಾ,ಆಸ್ಟ್ರಿಯಾ ವಿದೇಶ ಪ್ರವಾಸ ಆರಂಭ

PM Modi ಇಂದಿನಿಂದ ಪ್ರಧಾನಿ ಮೋದಿ ರಷ್ಯಾ,ಆಸ್ಟ್ರಿಯಾ ವಿದೇಶ ಪ್ರವಾಸ ಆರಂಭ

Maharashtra rains: ಉತ್ತರ ಕರ್ನಾಟಕದಲ್ಲಿ ನೆರೆ ಭೀತಿ

Maharashtra rains: ಉತ್ತರ ಕರ್ನಾಟಕದಲ್ಲಿ ನೆರೆ ಭೀತಿ

ASF

ASF; ಕೇರಳದಲ್ಲಿ ಹಂದಿ ಜ್ವರ ಉಲ್ಬಣ: 310 ಹಂದಿಗಳ ಹತ್ಯೆಗೈದ ಸರ್ಕಾರ!

Jammu-ಕಾಶ್ಮೀರದಲ್ಲಿ ಬಂದೂಕಲ್ಲ; ಬಾಡಿಕ್ಯಾಮ್‌ ಅಸ್ತ್ರ

Jammu-ಕಾಶ್ಮೀರದಲ್ಲಿ ಬಂದೂಕಲ್ಲ; ಬಾಡಿಕ್ಯಾಮ್‌ ಅಸ್ತ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shobha

Dengue: ಜನರ ಪ್ರಾಣ ಹೋಗುವ ಮುನ್ನ ಸರಕಾರ ಎಚ್ಚೆತ್ತುಕೊಳ್ಳಲಿ: ಶೋಭಾ ಕರಂದ್ಲಾಜೆ

Infectious Disease ಕರುನಾಡಿಗೆ ಜ್ವರ ಭೀತಿ: ರಾಜ್ಯ ಸರಕಾರ ಕಟ್ಟೆಚ್ಚರ

Infectious Disease ಕರುನಾಡಿಗೆ ಜ್ವರ ಭೀತಿ: ರಾಜ್ಯ ಸರಕಾರ ಕಟ್ಟೆಚ್ಚರ

Maharashtra rains: ಉತ್ತರ ಕರ್ನಾಟಕದಲ್ಲಿ ನೆರೆ ಭೀತಿ

Maharashtra rains: ಉತ್ತರ ಕರ್ನಾಟಕದಲ್ಲಿ ನೆರೆ ಭೀತಿ

Reel-Cinema

Film: ಚಲನಚಿತ್ರ ಚೆನ್ನಾಗಿದ್ದರೆ ಮಾತ್ರ ಟಿಕೆಟ್‌ ಖರೀದಿಸಿ

ಆಗಸ್ಟ್‌ನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

Augustನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Central Government ಕೃಷಿ ಸಿಂಚಾಯಿ ಯೋಜನೆ: ರಾಜ್ಯದಿಂದ ಹೆಚ್ಚುವರಿ ಸಬ್ಸಿಡಿ ಖೋತಾ

Central Government ಕೃಷಿ ಸಿಂಚಾಯಿ ಯೋಜನೆ: ರಾಜ್ಯದಿಂದ ಹೆಚ್ಚುವರಿ ಸಬ್ಸಿಡಿ ಖೋತಾ

Shobha

Dengue: ಜನರ ಪ್ರಾಣ ಹೋಗುವ ಮುನ್ನ ಸರಕಾರ ಎಚ್ಚೆತ್ತುಕೊಳ್ಳಲಿ: ಶೋಭಾ ಕರಂದ್ಲಾಜೆ

Infectious Disease ಕರುನಾಡಿಗೆ ಜ್ವರ ಭೀತಿ: ರಾಜ್ಯ ಸರಕಾರ ಕಟ್ಟೆಚ್ಚರ

Infectious Disease ಕರುನಾಡಿಗೆ ಜ್ವರ ಭೀತಿ: ರಾಜ್ಯ ಸರಕಾರ ಕಟ್ಟೆಚ್ಚರ

PM Modi ಇಂದಿನಿಂದ ಪ್ರಧಾನಿ ಮೋದಿ ರಷ್ಯಾ,ಆಸ್ಟ್ರಿಯಾ ವಿದೇಶ ಪ್ರವಾಸ ಆರಂಭ

PM Modi ಇಂದಿನಿಂದ ಪ್ರಧಾನಿ ಮೋದಿ ರಷ್ಯಾ,ಆಸ್ಟ್ರಿಯಾ ವಿದೇಶ ಪ್ರವಾಸ ಆರಂಭ

Maharashtra rains: ಉತ್ತರ ಕರ್ನಾಟಕದಲ್ಲಿ ನೆರೆ ಭೀತಿ

Maharashtra rains: ಉತ್ತರ ಕರ್ನಾಟಕದಲ್ಲಿ ನೆರೆ ಭೀತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.