ಕೋಮು ಸಂಘರ್ಷ: ಮಂಗಳೂರಿನಲ್ಲಿ’ಮಾರಿ ಗುಡಿ’ ನಕಲಿ ಖಾತೆ: ಓರ್ವನ ಬಂಧನ
ನಿನಗೂ ಹರ್ಷನ ಗತಿ ಎಂದು ಬೆದರಿಕೆ
Team Udayavani, Apr 20, 2022, 12:44 PM IST
ಮಂಗಳೂರು: ಕೋಮು ಸಂಘರ್ಷ ಮಾಡುವ ಹುನ್ನಾರದಿಂದ ಮೆಸೇಜ್ ಗಳನ್ನು ಮಾರಿ ಗುಡಿ ಎಂಬ ನಕಲಿ ಇನ್ ಸ್ಟಾ ಗ್ರಾಮ್ ಖಾತೆ ಮೂಲಕ ಪೋಸ್ಟ್ ಮಾಡುತ್ತಿದ್ದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಬೆಳ್ತಂಗಡಿ ಯ ಮುಹಮ್ಮದ್ ಅಝಲ್(20) ಎಂಬಾತನನ್ನು ಬಂಧಿಸಿ ನಾಯಾಲಯಕ್ಕೆ ಹಾಜರು ಪಡಿಸಲಾಗಿದೆ . ಮಾನ್ಯ ನ್ಯಾಯಾಲಯ ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
”ಯಾವುದೇ ಧಾರ್ಮಿಕ ವಸ್ತ್ರ ಕಾಲೇಜಿನಲ್ಲಿ ಧರಿಸುವಂತಿಲ್ಲ” ಎಂದು ಹೈಕೋರ್ಟ್ ನೀಡಿದ ಮಧ್ಯಂತರ ತೀರ್ಪನ್ನು ಉಲಂಘಿಸಿ ಮಂಗಳೂರಿನ ಕಾರ್ ಸ್ಟ್ರೀಟ್ ಕಾಲೇಜಿನಲ್ಲಿ 05 ಜನ ವಿದ್ಯಾರ್ಥಿನಿಯರು ಕಾಲೇಜಿನ ತರಗತಿಯನ್ನು ಹಿಜಾಬ್ ಧರಿಸಿ ಪ್ರವೇಶಿಸಲು ಪ್ರಯತ್ನಿಸಿದ ಸಂದರ್ಭದಲ್ಲಿ ವಿದ್ಯಾರ್ಥಿ ಪ್ರಶ್ನಿಸಿದ್ದನ್ನು ವಿರೋಧಿಸಿ, ಆತನ ಭಾವಚಿತ್ರವಿರುವ ಪೋಸ್ಟ್ ಹಾಕಿ ಅದರಲ್ಲಿ , ಶ್ರದ್ಧಾಂಜಲಿ ಎಂಬ ತಲೆಬರಹ ಹಾಕಿ ಸಾರ್ವಜನಿಕವಾಗಿ ಕೊಲೆ ಬೆದರಿಕೆ ಹಾಕಿದ ಪೋಸ್ಟ್ ಹಾಕಲಾಗಿತ್ತು.
ಶಿವಮೊಗ್ಗದಲ್ಲಿ , ಹರ್ಷನನ್ನು ಕೊಲೆ ಮಾಡಿದ ಹಾಗೆ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ತಿಳಿಸಿ ವಿದ್ಯಾರ್ಥಿಗೆ ವಾಟ್ಸಾಪ್ ನಲ್ಲಿ ಮೆಸೇಜ್ ಗಳನ್ನು ಮಾಡಲಾಗಿದೆ.
ವಾಟ್ಸಾಪ್ ಕಾಲ್ ಗಳ ಮೂಲಕ , ಜೀವ ಬೆದರಿಕೆ ಹಾಕಿದ ಹಾಗೂ ನಕಲಿ ಸಾಮಾಜಿಕ ಜಾಲತಾಣ ಖಾತೆಗಳ ಬಗ್ಗೆ , ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ದೂರು ನೀಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.