ಇಜಾಜ್ ಜೈಲಿನಿಂದ ಹೊರಬಂದರೆ ಕೊಚ್ಚಿ ಹಾಕುತ್ತೇವೆ: ಮುತಾಲಿಕ್ ವಿವಾದ
ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ; ಇದೊಂದು ಲವ್ ಜಿಹಾದ್ ಪ್ರಕರಣ ಎಂದ ಶ್ರೀರಾಮಸೇನಾ ಸಂಸ್ಥಾಪಕ
Team Udayavani, Mar 12, 2022, 5:42 PM IST
ಹುಬ್ಬಳ್ಳಿ : ಗದಗದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದವನ ವಿರುದ್ದ ಡಮ್ಮಿ ಕೇಸ್ ಹಾಕಿ,ಆತ ಏನಾದರು, ಜೈಲಿನಿಂದ ಹೊರಬಂದರೆ, ಆತನನ್ನು ಕೊಚ್ಚಿ ಹಾಕುತ್ತೇವೆ ಎಂದು ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪತಿಯಿಂದ ಹಲ್ಲೆಗೊಳಗಾಗಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ಮಹಿಳೆಯ ಆರೋಗ್ಯ ವಿಚಾರಿಸಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಸುದ್ದಿಗಾರರೊಂದಿಗೆ ಮಾತನಾಡಿ, ಇದೊಂದು ಲವ್ ಜಿಹಾದ್ ಪ್ರಕರಣಕ್ಕೆ ಉತ್ತಮ ಉದಾಹರಣೆಯಾಗಿದೆ. ತನ್ನ ಪ್ರಿಯತಮ ಇಜಾಜ್ ಶಿರೂರನನ್ನು 2018 ರಂದು ಮದುವೆಯಾಗಿದ್ದಾರೆನ್ನಲಾಗಿದ್ದು ಹಿಂದೂ ಧರ್ಮದ ಮಹಿಳೆಯನ್ನು ಎರಡು ದಿನಗಳ ಹಿಂದೆ ಗದಗ ಪಟ್ಟಣದಲ್ಲಿ ಮಚ್ಚಿನಿಂದ 23 ಬಾರಿ ಮನಬಂದಂತೆ ಹಲ್ಲೆ ಮಾಡಲಾಗಿದೆ. ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಮದುವೆಯಾದ ಮಹಿಳೆಯನ್ನು ಮತಾಂತರ ಮಾಡಿ, ಅರ್ಫಾ ಬಾನು ಎಂದ ಬದಲಿಸಿದ್ದ ಮಾತ್ರವಲ್ಲದೆ ಇವರ ದಾಂಪತ್ಯದ ಸಾಕ್ಷಿಯಾಗಿ ಮಗು ಕೂಡಾ ಇದೆ. ಮದುವೆಯಾಗಿ ಮೂವರು ಮಕ್ಕಳು ಇದ್ದರೂ ಕೂಡಾ ಹಿಂದೂ ಮಹಿಳೆಯನ್ನು ಪ್ರೀತಿಸಿ ಬ್ಲ್ಯಾಕ್ ಮೇಲ್ ಮಾಡಿ ಮದುವೆ ಮಾಡಿಕೊಂಡಿದ್ದ. ಹಾಗಾಗಿ ಇಜಾಜ್ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಮುತಾಲಿಕ್ ಒತ್ತಾಯಿಸಿದರು.
ಹದಿಹರೆಯದ ಹೆಣ್ಣು ಮಕ್ಕಳು ಪ್ರೀತಿಯಲ್ಲಿ ಬಿಳೋ ಮುಂಚೆ ಈ ಘಟನೆ ನೆನಪಿಸಿಕೊಳ್ಳ ಬೇಕು. ಅಲ್ಲದೇ ಆ ಮನೆಯನ್ನು ಮೌಲ್ವಿಗಳು ಬಹಿಷ್ಕಾರ ಹಾಕಬೇಕು ಎಂದು ಕಿಡಿಕಾರಿದರು. ಇಜಾಜ್ ಎಂಬ ಆಟೋ ಚಾಲಕನ ನ್ನು ಪ್ರೀತಿಸಿದ್ದ ಈ ಮಹಿಳೆ 2018 ರಲ್ಲಿತನ್ನ ಮನೆಯಲ್ಲಿ ಗೊತ್ತಾಗದೇ ಮದುವೆ ಆಗುತ್ತಾರೆ. ಹುಬ್ಬಳ್ಳಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು ಎನ್ನಲಾಗಿದ್ದು, ಇಜಾಜ್ ನಿಗೆ ಈ ಮುಂಚೆ ಮದುವೆಯಾಗಿ ಮೂವರು ಮಕ್ಕಳು ಇದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಆರು ತಿಂಗಳ ಹಿಂದೆ ವಿಚ್ಚೇದನ ಅರ್ಜಿಯನ್ನು ಸಲ್ಲಿಸಿದ್ದಳು.
ಇಜಾಜ್ ಹಾಗೂ ಅರ್ಫಾ ಬಾನುವಿಗೆ ಪ್ರೀತಿಯ ಫಲವಾಗಿ ಒಂದು ಮಗುವೂ ಇದೆ. ವಿಚ್ಚೇದನ ಅರ್ಜಿ ಸಲ್ಲಿಸಿದ್ದ ದಿನದಿಂದ ತವರು ಮನೆಯಲ್ಲಿ ವಾಸವಾಗಿದ್ದಳು. ವಿಚ್ಛೇದನ ಅರ್ಜಿಯಿಂದ ಕುಪಿತಗೊಂಡ ಇಜಾಜ್ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಈ ವಿಷಯವನ್ನೆ ಮನಸ್ಸಿನಲ್ಲಿಟ್ಟಿದ್ದ ಇಜಾಜ್ ಎರಡು ದಿನಗಳ ಹಿಂದೆ ಗದಗ ನಗರದಲ್ಲಿ ಅರ್ಫಾ ಬಾನು ಸ್ಕೂಟಿ ಕಲಿಯುವ ಸಂದರ್ಭದಲ್ಲಿ ಮಚ್ಚಿನಿಂದ ಕೊಚ್ಚಿ ಮಾರಣಾಂತಿ ಕವಾಗಿ ಮನಬಂದಂತೆ ಇರಿದಿದ್ದು, ಅಲ್ಲಿ ನೆರದಿದ್ದ ಸಾರ್ವಜನಿಕರು ಕಕ್ಕಾಬಿಕ್ಕಿಗೊಡ ಘಟನೆ ನಡೆಯಿತು. ಗಂಭೀರವಾಗಿ ಅಸ್ವಸ್ಥಗೊಂಡಿದ್ದ ಮಹಿಳೆ ಸದ್ಯ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.