ಸ್ವಚ್ಛ ನಗರ ಕನಸಿಗೆ ಫೆಲಿಕ್ಸ್‌ರ ನಾನ್‌ ಸ್ಟಾಪ್‌ ನಡಿಗೆ!

ಸ್ವಂತ ಕಾರಿನಲ್ಲೇ ಓಡಾಡಿ ನಿತ್ಯ ಕಸ ಸಂಗ್ರಹ; ಮಾದರಿ ಸೇವೆ

Team Udayavani, Feb 25, 2021, 5:40 AM IST

ಸ್ವಚ್ಛ ನಗರ ಕನಸಿಗೆ ಫೆಲಿಕ್ಸ್‌ರ ನಾನ್‌ ಸ್ಟಾಪ್‌ ನಡಿಗೆ!

ಕಾರ್ಕಳ: ಪರಿಸರ ಸ್ವತ್ಛತೆ ಕುರಿತು ಸಾರ್ವಜನಿಕರಲ್ಲಿ ಎಷ್ಟೇ ಜಾಗ್ರತಿ ಮೂಡಿಸಿದರೂ ಕೆಲವರು ಕಸ ಎಸೆಯುವುದನ್ನು ರೂಢಿಯಾಗಿಸಿಕೊಂಡಿದ್ದಾರೆ. ಇದರಿಂದ ಬೇಸತ್ತ ಕಾರ್ಕಳದ ಹಿರಿಯ ನಾಗರಿಕರೊಬ್ಬರು ಪ್ರತಿ ನಿತ್ಯ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹೆಕ್ಕುವ ಮೂಲಕ ಮಾದರಿಯಾಗಿದ್ದಾರೆ.

ನಗರದ ಮಂಗಲಪಾದೆ ನಿವಾಸಿ 71ರ ಇಳಿವಯಸ್ಸಿನ ಫೆಲಿಕ್ಸ್‌ ವಾಜ್‌ ಪ್ರತಿನಿತ್ಯ ಕಸ ಹೆಕ್ಕುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಪರಿಸರದ ಮೇಲೆ ಅಪಾರ ಕಾಳಜಿ ಹೊಂದಿರುವ ಇವರು ಪ್ರತಿದಿನ ಬೆಳಗ್ಗೆ 2 ತಾಸು ಸಾರ್ವಜನಿಕ ಸ್ಥಳಗಳಲ್ಲಿ ಕಸಗಳನ್ನು ಹೆಕ್ಕಿ ಸ್ವತ್ಛಗೊಳಿಸುತ್ತಾರೆ. ಕಳೆದ 7 ವರ್ಷಗಳಿಂದ ಈ ಕಾರ್ಯ ಮಾಡುವ ಮೂಲಕ ಪರಿಸರ ಪ್ರೇಮದ ಕಾಳಜಿ ತೋರುತ್ತಿದ್ದಾರೆ. ಅವರ ಸೇವೆಗೆ ಎಲ್ಲೆಡೆಯಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ.

ಬದಲಾಗಿದೆ ಕಾಲ
ಆರಂಭದಲ್ಲಿ ಕಸ ಸಂಗ್ರಹಕ್ಕೆಂದು ತೆರಳಿದಾಗೆಲ್ಲ ಜನ ಒಂದು ತರಹ ಭಿನ್ನವಾಗಿ ಕಾಣುತ್ತಿದ್ದರು. ಮುಜುಗರ ಪಡುವ ಹಾಗೆ ವರ್ತಿಸುತ್ತಿದ್ದರು. ಅನಂತರದಲ್ಲಿ ಸ್ವತ್ಛತೆಯ ಕುರಿತು ಎಲ್ಲೆಡೆ ಅರಿವು ಮೂಡಿ ಎಲ್ಲರು ಇದರಲ್ಲಿ ತೊಡಗಿಸಿಕೊಳ್ಳಲು ಆರಂಭಿಸಿದರು. ಜಾಗೃತಿ ಎಲ್ಲೆಡೆಗೂ ಪಸರಿಸಿತು ಎನ್ನುತ್ತಾರೆ ಅವರು.

ಸಂಡೇ ಬ್ರಿಗೇಡ್‌ ಜತೆ
ಕಾರ್ಕಳ ಸ್ವಚ್ಚ ಬ್ರಿಗೇಡ್‌ ತಂಡ ಪ್ರತಿ ರವಿವಾರ ಸ್ವಚ್ಚತೆ ಆಂದೋಲನ ನಡೆಸುತ್ತಿದ್ದಾರೆ. ರವಿವಾರದ ಒಂದು ದಿನ ಫೆಲಿಕ್ಸ್‌ ರವರು ಆ ತಂಡದ ಜತೆಗೆ ಜತೆಗೆ ಸ್ವಚ್ಚತೆ ಸೇವೆಯಲ್ಲಿ ತೊಡಗಿಸಿಕೊಂಡು ಶ್ರಮ ಸೇವೆ ನೀಡುತ್ತಾರೆ.

ನಿತ್ಯ 2 ಗಂಟೆ
ಕಳೆದ 7 ವರ್ಷಗಳಿಂದ ಇವರು ಪ್ರತಿನಿತ್ಯ ಬೆಳಗ್ಗೆ 6ರಿಂದ 8 ಗಂಟೆ ತನಕ ಸ್ವತ್ಛತೆ ಸೇವೆ ಮಾಡುತ್ತಿದ್ದಾರೆ, ಮಂಗಲಪಾದೆ, ಸ್ವರಾಜ್‌ ಮೈದಾನ, ಅನಂತಶಯನ ದೇವಸ್ಥಾನ ಮುಂತಾದ ಕಡೆ ತೆರಳಿ ಕಸ ಹೆಕ್ಕುತ್ತಾರೆ. ಕಸ ಸಂಗ್ರಹಕ್ಕೆ ಕಾರನ್ನು ಬಳಸಿಕೊಳ್ಳುತ್ತಿದ್ದಾರೆ. ಪೆಟ್ರೋಲ್‌ ದರ ಏರಿಕೆಯಾದರೂ ಕಾರಲ್ಲೇ ಕಸ ಸಂಗ್ರಹಿಸಿ ನಷ್ಟವಾದರೂ ಪರವಾಗಿಲ್ಲ, ಪರಿಸರ ಸ್ವಚ್ಚವಾಗಿರಬೇಕು ಎನ್ನುವುದು ಇವರ ದೃಢ ಉದ್ದೇಶ.

ಪರಿಸರ ಪ್ರೇಮ
ವಿದೇಶದಲ್ಲಿ 35 ವರ್ಷ ಉದ್ಯೋಗದಲ್ಲಿದ್ದರು. ಅನಂತರದಲ್ಲಿ ಕೆಲಸ ತೊರೆದು ಊರಿಗೆ ಬಂದು ನೆಲೆಸಿದ್ದಾರೆ. ಸ್ವದೇಶಕ್ಕೆ ಮರಳಿ 11 ವರ್ಷವಾಗಿದೆ. ಮೊದಲಿನಿಂದಲೂ ಪರಿಸರದ ಬಗ್ಗೆ ಅಪಾರ ಪ್ರೀತಿ ಇರಿಸಿಕೊಂಡಿದ್ದರು.

ಊರಿಗೆ ಮರಳಿದಾಗ ಎಲ್ಲೆಂದರಲ್ಲಿ ಕಸ ಹರಡಿ ಬಿದ್ದಿರುವುದನ್ನು ಕಣ್ಣಾರೆ ಕಂಡು ಬೇಸತ್ತಿದ್ದರು. ಪರಿಸರ ಸ್ವತ್ಛವಿಲ್ಲದೆ ಕೊಳಚೆಯಿಂದ ಇರುವುದಕ್ಕೆ ಅಸಹನೆಗೊಂಡರು. ಅನಂತರದಲ್ಲಿ ಸ್ವತಃ ಶುಚಿತ್ವದ ಪಣತೊಟ್ಟರು. ಕಸ ಹೆಕ್ಕುವುದನ್ನು ನಿತ್ಯದ ಪರಿಪಾಠವನ್ನಾಗಿಸಿದರು.

ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಬಿಸಾಕುವುದನ್ನು ತಡೆಯಲು ಸ್ವರಾಜ್‌ ಮೈದಾನ ಬಳಿ ತ್ಯಾಜ್ಯ ಸಂಗ್ರಹ ಚೀಲಗಳನ್ನು ನೇತು ಹಾಕಿ ಇಟ್ಟಿದ್ದಾರೆ. ನಿತ್ಯ ಸಂಗ್ರಹಿಸಿದ ಕಸವನೆಲ್ಲ ಒಂದೆಡೆ ಇರಿಸಿದ ಬಳಿಕ ಪುರಸಭೆ ಕಾರ್ಮಿಕರು ವಿಲೇವಾರಿ ಮಾಡುತ್ತಾರೆ.

– 20 ಕೆ.ಜಿ.ದಿನವೊಂದಕ್ಕೆ ಕಸ ಸಂಗ್ರಹ
– 2 ತಾಸು ಪ್ರತಿನಿತ್ಯ ಸ್ವತ್ಛತೆ ಸೇವೆ
– 4 ಕಿ.ಮೀ ನಿತ್ಯ ಕಾರಲ್ಲಿ ಪ್ರಯಾಣಿಸಿ ಸಂಗ್ರಹ
– 7 ವರ್ಷದಿಂದ ಕಾಯಕ

ಸ್ವತಃ ತ್ಯಾಜ್ಯ ಸಂಗ್ರಹಕ್ಕೆ ಮಾದರಿ
ವಿದೇಶದಿಂದ ಹಿಂತಿರುಗಿ ಊರಲ್ಲಿ ನೆಲೆಸಿದಾಗ ಸುತ್ತಮುತ್ತಲ ಪರಿಸರದಲ್ಲಿ ಕಸ ತುಂಬಿರುತ್ತಿರುವುದನ್ನು ಕಂಡಿದ್ದೆ. ಅದರಿಂದ ಮನಸ್ಸಿಗೆ ದುಃಖವಾಗುತ್ತಿತ್ತು. ಅಂದಿನಿಂದ ಸ್ವತಃತ್ಯಾಜ್ಯ ಸಂಗ್ರಹಕ್ಕೆ ಆರಂಭಿಸಿದೆ.
-ಫೆಲಿಕ್ಸ್‌ ವಾಜ್‌

ಟಾಪ್ ನ್ಯೂಸ್

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13

Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್‌

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Karkala: ಬೈಕ್‌ ಢಿಕ್ಕಿ; ಗಾಯ

Karkala: ಬೈಕ್‌ ಢಿಕ್ಕಿ; ಗಾಯ

ನ. 26 : ಕಾಪುವಿನಲ್ಲಿ ಸಂವಿಧಾನ ಉಳಿಸಿ ಬೃಹತ್ ಆಂದೋಲನ ಮತ್ತು ಜಾಗೃತಿ ಜಾಥಾ ಆಯೋಜನೆ

ನ. 26 : ಕಾಪುವಿನಲ್ಲಿ ಸಂವಿಧಾನ ಉಳಿಸಿ ಬೃಹತ್ ಆಂದೋಲನ ಮತ್ತು ಜಾಗೃತಿ ಜಾಥಾ ಆಯೋಜನೆ

2-karkala

Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

16

Pro Kabaddi: ಗುಜರಾತ್‌ಗೆ ರೋಚಕ ಜಯ

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.