ಮೀನಿನ ಪದಾರ್ಥಕ್ಕಾಗಿ ಸ್ನೇಹಿತರ ಜಗಳ: ಕೊಲೆಯಲ್ಲಿ ಅಂತ್ಯ
Team Udayavani, Oct 31, 2021, 2:51 PM IST
ರಾಜ್‍ಕೋಟ್: ಸ್ನೇಹಿತರ ನಡುವೆ ಊಟದ ವಿಚಾರದಲ್ಲಿ ನಡೆದ ಕ್ಷುಲ್ಲಕ ಜಗಳವೊಂದು ಕೊಲೆಯಲ್ಲಿ ಅಂತ್ಯವಾದ ಘಟನೆ ಗುಜರಾತ್ ರಾಜ್ಯದ ಮೊರ್ಬಿ ಜಿಲ್ಲೆಯ ಮಲಿಯಾ ಮಿಯಾನ ತಾಲೂಕಿನ ವೇಣಸರ ಗ್ರಾಮದಲ್ಲಿ ಗುರುವಾರ (ಅ.28) ನಡೆದಿದೆ.
ರಂಜಿತ್ ಕುನ್ವಾರಿಯಾ (32) ಎಂಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಸುನೀಲ್ ಅರೋಪಿ ಪರಾರಿಯಾಗಿದ್ದಾನೆ.
ಘಟನೆಯ ವಿವರ
ಗ್ರಾಮದ ಹೊರ ವಲಯದಲ್ಲಿ ಹರಿಯುವ ಖೋದ್ರೋಯಿ ನದಿ ದಡದಲ್ಲಿ ರಂಜಿತ್ ಹಾಗೂ ಅವರ ಸೋದರ ಸಂಬಂಧಿ ಅಶೋಕ್, ಸುನೀಲ್ ಮತ್ತು ಪ್ರಕಾಶ್ ಪಾರ್ಟಿ ಆಯೋಜಿಸಿದ್ದರು. ನದಿಯಲ್ಲಿ ಮೀನು ಹಿಡಿದು ಅಲ್ಲೇ ಅಡುಗೆ ಮಾಡಿ ಊಟ ಮಾಡುವುದು ಎಂದು ತಮ್ಮ ತಮ್ಮ ವಾಹನಗಳಲ್ಲಿ ಪಾತ್ರೆ, ದಿನಸಿ ವಸ್ತುಗಳನ್ನು ತಂದಿದ್ದರು.
ನದಿ ದಡದಲ್ಲಿ ಒಲೆಯೊಂದನ್ನು ಮಾಡಿ, ಅನ್ನ ಬೇಯಲು ಇಟ್ಟು, ನದಿಯಲ್ಲಿ ಮೀನು ಹಿಡಿದಿದ್ದರು. ನದಿಯಲ್ಲಿ ಹೆಚ್ಚಿನ ಪ್ರಮಾಣದ ಮೀನು ಅವರಿಗೆ ಸಿಕ್ಕಿದ್ದರಿಂದ ಸುನೀಲ್ ತನ್ನ ಸಹೋದರ ಸಂದೀಪ್‍ಗೆ ಕರೆ ಮಾಡಿ ಬರುವಂತೆ ಹೇಳಿದ್ದಾರೆ.
ಎಲ್ಲರೂ ಸೇರಿ ಆಹಾರ ಸೇವಿಸುತ್ತಿರುವ ಸಂದರ್ಭ ಸಂದೀಪ್ ಮತ್ತೊಂದು ಬಾರಿ ನನಗೆ ಮೀನು ಬೇಕು ಎಂದು ಕೇಳಿದಾಗ, ನೀನು ಮೀನು ಹಿಡಿಯಲು, ಅಡುಗೆ ಮಾಡಲು ಸಹಾಯ ಮಾಡಿಲ್ಲ ಎಂದು ರಂಜಿತ್ ಕೋಪಗೊಂಡಾಗ, ಈ ವರ್ತನೆಯನ್ನು ಕಂಡ ಸಂದೀಪ್ ಸಹೋದರ ಸುನೀಲ್ ಕೋಪಗೊಂಡು ಜಗಳವಾಡಿದ್ದ. ನಂತರ ಅಲ್ಲಿಂದ ತೆರಳಿ ಕಾರಿನಲ್ಲಿ ಕುಳಿತ. ಕಾರಿನಲ್ಲಿ ಕುಳಿತಿದ್ದರಿಂದ ಇವನು ಹೊರಟು ಹೋಗುತ್ತಾನೆ ಎಂದು ಉಳಿದವರು ಭಾವಿಸಿದ್ದರು. ಆದರೆ ಸುನೀಲ್ ತನ್ನ ಕಾರನ್ನು ವೇಗವಾಗಿ ಓಡಿಸಿ, ರಂಜಿತ್ ಮೇಲೆ ಹರಿಸಿದ್ದಾನೆ.
ಕಾರಿನ ಚಕ್ರಕ್ಕೆ ಸಿಲುಕಿ ರಂಜಿತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾರಿನ ಬಳಿ ನಿಂತಿದ್ದ ಪ್ರಕಾಶ್ ಗಂಭೀರವಾಗಿ ಗಾಯಗೊಂಡಿದ್ದಾನೆ.
ಇದನ್ನೂ ಓದಿ: ಈ ಆಟಗಾರನಿಗೆ ಯಾಕೆ ಟಿ20 ತಂಡದಲ್ಲಿ ಸ್ಥಾನ?: ಕಿಡಿಕಾರಿದ ಶೇನ್ ವಾರ್ನ್
ಪರಿಸ್ಥಿಯ ಗಂಭೀರತೆಯನ್ನು ಅರಿತ ಸುನೀಲ್ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಅಲ್ಲಿಯೇ ನಿಂತಿದ್ದ ಸಂದೀಪ್‍ನನ್ನು ಸ್ನೇಹಿತರು ಥಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ರಾಜ್ ಕೋಟ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣ ಮಲಿಯಾ ಮಿಯಾನಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಅರೋಪಿ ಸುನೀಲ್ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.