ಮೊದಲ ವಾಯುಪಡೆ ಪರಂಪರಾ ಕೇಂದ್ರ ಉದ್ಘಾಟನೆ
ವಾಯುಸೇನೆಯ ಹೆಮ್ಮೆಯ ಸಾಧನೆಗಳ ಪ್ರತಿಬಿಂಬ-ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಾರ್ಪಣೆ
Team Udayavani, May 9, 2023, 7:20 AM IST
ಭಾರತೀಯ ವಾಯುಪಡೆಯ ಅಸಾಮಾನ್ಯ ಸಾಹಸಗಳನ್ನು ನೆನಪಿಸುವಂತಹ, ರಕ್ಷಿಸುವಂತಹ ಒಂದು ಕೇಂದ್ರವಿದೆಯಾ ಎಂಬ ಪ್ರಶೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉತ್ತರ ನೀಡಿದ್ದಾರೆ. ಚಂಡೀಗಢದಲ್ಲಿ ಭಾರತೀಯ ವಾಯುಸೇನಾ ಪರಂಪರಾ ಕೇಂದ್ರವನ್ನು ಅವರು ಉದ್ಘಾಟಿಸಿದ್ದಾರೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಇಂತಹದ್ದೊಂದು ಕೇಂದ್ರ ನಿರ್ಮಾಣವಾಗಿದೆ.
ಏನಿದೆ ಈ ಕೇಂದ್ರದಲ್ಲಿ?
ವಾಯುಸೇನೆಯ ಮಹಾನ್ ಯೋಧರ ಬೃಹತ್ ಭಿತ್ತಿಚಿತ್ರಗಳು, ಸ್ಮರಣಿಕೆಗಳು, 1965, 1971, 1999ರ ಕಾರ್ಗಿಲ್ ಯುದ್ಧಗಳು ಸೇರಿದಂತೆ ವಿವಿಧ ಯುದ್ಧಗಳಲ್ಲಿ ವಾಯುಸೇನೆಯ ಪಾತ್ರದ ನೆನಪುಗಳು ಇಲ್ಲಿರುತ್ತವೆ. ಹಲವಾರು ವಿಭಾಗಗಳು ಈ ಕಟ್ಟಡದಲ್ಲಿವೆ. ಇಲ್ಲಿ ಹಲವಾರು ಆಕರ್ಷಣೆಗಳಿವೆ. ಯುದ್ಧವಿಮಾನಗಳ ಮಾದರಿಗಳು, ವೈಮಾನಿಕ ಎಂಜಿನ್‌ಗಳು, ಶಸ್ತ್ರಾಸ್ತ್ರಗಳು, ಗ್ರ್ಯಾಝೆವ್ ಶಿಪುನೊವ್‌ನಂತಹ ಅವಳಿ ಬ್ಯಾರೆಲ್‌ಗಳಿರುವ ಗನ್‌ಗಳು ಇಲ್ಲಿವೆ.
ಪ್ರದರ್ಶನಕ್ಕೂ ವಿಶೇಷ ವ್ಯವಸ್ಥೆ
ಸ್ಮರಣಿಕೆಗಳನ್ನು ನೇರವಾಗಿಯೂ, ಹೋಲೋಗ್ರಾಮ್‌ಗಳು ಕಂಪ್ಯೂಟರೀಕೃತ ಫಲಕಗಳು, ವಿದ್ಯುನ್ಮಾನ ಸಾಧನಗಳ ಮೂಲಕವೂ ತೋರಿಸಲಾಗುವುದು. ನಮಗೆ ಬೇಕಿರುವ ಮಾಹಿತಿ ಪಡೆಯಲು ಕಿಯೋಸ್ಕ್ಗಳನ್ನೂ ಬಳಸಬಹುದು. ಸಿಮ್ಯುಲೇಟರ್‌ಗಳನ್ನೂ ಇಲ್ಲಿಡಲಾಗಿದೆ. ಅಂದರೆ ನೆಲದಲ್ಲಿದ್ದರೂ ಸಿಮ್ಯುಲೇಟರ್‌ನಲ್ಲಿ ಕುಳಿತರೆ ಹಾರುತ್ತಿರುವಂತಹ ಅನುಭವವಾಗುತ್ತದೆ.
ವಿಸ್ತಾರ ಎಷ್ಟು?
ಪರಂಪರಾ ಕೇಂದ್ರ 17000 ಚದರಡಿ ಪ್ರದೇಶದಲ್ಲಿ ಹರಡಿಕೊಂಡಿದೆ. ಅರ್ಧ ಎಕರೆಗೆ ಸ್ವಲ್ಪ ಕಡಿಮೆ ವಿಸ್ತಾರವಿದೆ. ವಾಯುಪಡೆಯ ಸ್ಫೂರ್ತಿಯುತ ಕಾರ್ಯಗಳನ್ನು ಇದು ಪ್ರತಿಬಿಂಬಿಸುವಂತೆ ರೂಪಿಸಲಾಗಿದೆ.
ಯುವಕರಿಗೆ ಸ್ಫೂರ್ತಿ
ಈ ಕೇಂದ್ರ ಇಡೀ ದೇಶದ ಜನರಿಗೆ ಒಂದು ಸ್ಫೂರ್ತಿ ಕೇಂದ್ರವಾಗಿರಲಿದೆ. ಭೇಟಿ ನೀಡಲು ಬಯಸುವಂತೆ ಸಿದ್ಧಪಡಿಸಲಾಗಿದೆ. ಮಾತ್ರವಲ್ಲ ಯುವಕರು ಸೇನೆ ಸೇರುವಂತಹ ಪ್ರೇರಣೆಯನ್ನು ಇದು ನೀಡುತ್ತದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.