ದಕ್ಷಿಣ ಭಾರತದಲ್ಲಿ ಇನ್ನು ಪ್ರವಾಹ ಸರ್ವೇಸಾಮಾನ್ಯ! ಅಧ್ಯಯನ ವರದಿ
Team Udayavani, Jan 19, 2021, 7:10 PM IST
– ಹವಾಮಾನ ವೈಪರೀತ್ಯದಿಂದಾಗಿ ಭಾರೀ ಮಳೆ ಸಾಧ್ಯತೆ
– ಜೀವವೈವಿಧ್ಯ, ಆಹಾರ ಸುರಕ್ಷತೆ ಮೇಲೆ ದುಷ್ಪರಿಣಾಮ
ನವದೆಹಲಿ: ಭಾರೀ ಮಳೆ, ಎಲ್ಲೆಡೆ ಉಕ್ಕಿಹರಿವ ನದಿಗಳು… ಇದು ದಕ್ಷಿಣ ಭಾರತದಲ್ಲಿ ಇನ್ನು ಸರ್ವೇಸಾಮಾನ್ಯ!
ಹೌದು. ಹವಾಮಾನ ವೈಪರೀತ್ಯದಿಂದಾಗಿ ಮುಂದಿನ ದಶಕಗಳಲ್ಲಿ ದಕ್ಷಿಣ ಭಾರತ ಅತಿಹೆಚ್ಚು ನೆರೆಪ್ರವಾಹಗಳಿಗೆ ಸಾಕ್ಷಿಯಾಗಲಿದೆ ಎಂದು ತಜ್ಞರ ಸಂಶೋಧನೆ ಎಚ್ಚರಿಸಿದೆ. ಇದು 2100ರ ವೇಳೆಗೆ ಜಾಗತಿಕ ಜೀವವೈವಿಧ್ಯ ಮತ್ತು ಆಹಾರ ಸುರಕ್ಷತೆ ಮೇಲೆ ಗಂಭೀರ ಪರಿಣಾಮ ಬೀರಲೂಬಹುದು ಎಂದೂ ತಿಳಿಸಿದೆ.
ಹವಾಮಾನ ವೈಪರೀತ್ಯದಿಂದಾಗಿ ಭೂಮಧ್ಯ ರೇಖೆ ಹಾದುಹೋಗುವ ಪೂರ್ವ ಆಫ್ರಿಕ ಮತ್ತು ಹಿಂದೂ ಮಹಾಸಾಗರದಲ್ಲಿ ಮಳೆ ಸುರಿಯುವಿಕೆಯಲ್ಲಿ ಭಾರೀ ವ್ಯತ್ಯಾಸವಾಗಲಿದೆ. ಇದರಿಂದ ದಕ್ಷಿಣ ಭಾರತ ಸೇರಿದಂತೆ ಉಷ್ಣವಲಯದ ಹಲವು ಪ್ರದೇಶಗಳಲ್ಲಿ ಮಳೆಯ ಸ್ವರೂಪವನ್ನೇ ಬದಲಾಯಿಸಲಿದ್ದು, “ಮಳೆಯ ಅಸಮ ಹಂಚಿಕೆ’ ಎದುರಾಗಲಿದೆ ಎಂದು ಎಚ್ಚರಿಸಿದೆ.
ಇದನ್ನೂ ಓದಿ:ಕೇಂದ್ರ ಮಾದರಿ ವೇತನ ಪಡೆಯುವುದೇ ಮುಖ್ಯ ಗುರಿ; ಸಿ.ಎಸ್. ಷಡಕ್ಷರಿ
ಉಷ್ಣತೆಯೂ ಅಧಿಕ!: “ಜಗತ್ತಿನ ಬೇರೆಡೆಗಿಂತ ಏಷ್ಯಾದಲ್ಲಿ ಅತಿಹೆಚ್ಚು ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದ್ದು, ಉತ್ತರ ಏಷ್ಯಾದ ಹಲವು ಭಾಗಗಳಲ್ಲಿ ಹಿಮಗಡ್ಡೆ- ಹಿಮನದಿಗಳ ಕರಗುವಿಕೆ ಹೆಚ್ಚಾಗಲಿದೆ’ ಎಂದು ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ಲೇಖಕ ಜೇಮ್ಸ್ ರ್‍ಯಾಂಡರ್ಸನ್ ಅಭಿಪ್ರಾಯಪಟ್ಟಿದ್ದಾರೆ.
ಕ್ಯಾಲಿಫೋರ್ನಿಯಾ ವಿವಿ ತಜ್ಞರ ತಂಡ ನಡೆಸಿದ ಈ ಸಂಶೋಧನೆ ಸಾರಾಂಶವನ್ನು “ನೇಚರ್ ಕ್ಲೈಮೇಟ್ ಚೇಂಜ್’ ಪತ್ರಿಕೆ ಪ್ರಕಟಿಸಿದೆ. ಭಾರತದ 27 ರಾಜ್ಯಗಳ ಹವಾಮಾನ ಮಾದರಿ ಮತ್ತು ಉಷ್ಣವಲಯದ ಮಳೆಪ್ರದೇಶಗಳ ಪ್ರತಿಕ್ರಿಯೆಗಳನ್ನು ತಜ್ಞರು ಅಧ್ಯಯನಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.