ಅವರವರ ಪ್ರಕೃತಿಗೆ ಅನುಸರಿಸಿ ಸುಖ, ಸಂತೋಷ

Team Udayavani, Mar 18, 2021, 6:20 AM IST

ಅವರವರ ಪ್ರಕೃತಿಗೆ ಅನುಸರಿಸಿ ಸುಖ, ಸಂತೋಷ

ಸಂತಸ ಅಥವಾ ಮನಸಿನ ತೃಪ್ತಿ ಅಂದರೆ ಇದಮಿತ್ತಂ ಅಂತ ಹೇಳಬರುವುದಿಲ್ಲ. ಕೆಲವರಿಗೆ ಹಣ ಕೂಡಿ ಹಾಕಿ ಹಾಕಿ ರಸ್ತೆಯಲ್ಲಿ ಕುಣಿದು ಕುಪ್ಪಳಿಸುವ ಆಸೆ ಯಾದರೆ? ಇನ್ನೂ ಕೆಲವರಿಗೆ ದೊಡ್ಡ ಸಾಧನೆ ಮಾಡದೆ ಪ್ರಚಾರ ಗಿಟ್ಟಿಸುವ ಗೀಳು. ಮತ್ತೆ ಕೆಲವರಿಗೆ ದೊಡ್ಡ ರಾಜಕಾರಣಿಗಳ ಸಂಗ ಮಾಡಿ ಅವರಿಗೆ ಭೋಪರಾಕು ಹಾಕುವುದೇ ಜೀವನದ ಸುಂದರ ಕ್ಷಣಗಳು. ತಿಂಡಿಪೋತರಿಗೆ ಪುಗಸಟ್ಟೆ ಹೊಟ್ಟೆ ತುಂಬಾ ತಿಂದು ತೇಗುವುದೆ ಗಮ್ಮತ್ತು. ಇನ್ನೂ ಕೆಲವು ಮಂದಿ ಚಿತ್ರಕಲೆ, ಗಾಯನ, ನೃತ್ಯ ಇತ್ಯಾದಿಗಳನ್ನು ಸುಖದ ತಾಣವಾಗಿ, ಹವ್ಯಾಸವಾಗಿ ಬೆಳೆಸಿಕೊಳ್ಳುತ್ತಾರೆ.

ಇದಲ್ಲದೆ ಇನ್ನೊಂದು ಅಪರೂಪದ ಗುಂಪು ಕೂಡ ಇದೆ. ಇವರು ಸಂತಸವನ್ನು ಅರಸಿ ಬಡಬಗ್ಗರ, ದೀನ ದಲಿತರ ಸೇವೆಯಲ್ಲಿ ತಮ್ಮ ಜೀವನದಲ್ಲಿ ಸಾರ್ಥಕ್ಯ ಕಾಣುತ್ತಾರೆ. ಆದರೆ ಈ ಕೊನೆಯ ವರ್ಗ ಮಾತ್ರ ಅಪರೂಪದ ಮತ್ತು ಅತೀ ಕಡಿಮೆ ಸಂಖ್ಯೆಯಲ್ಲಿರುವವರು. ಇವರಿಗೆ ಹಣಬಲ ಬೇಕೆಂದೇನೂ ಇಲ್ಲ. ಆದರೆ ತಮ್ಮೊಂದಿಗೆ ಸಹಕರಿಸುವ, ಸ್ಪಂದಿಸುವ ಜನಬಲವೇ ಇವರ ಆಸ್ತಿ.

ಹಾಗೆ ಲೋಕದಲ್ಲಿ ಜನರ ಸುಖ ಸಂತೋಷ ಅಳೆಯುವುದು ಅವರವರ ಪ್ರಕೃತಿಗೆ ಅನುಸರಿಸಿ ಎನ್ನದೆ ವಿಧಿ ಇಲ್ಲ.
ಆದರೆ ಇದಕ್ಕೆಲ್ಲ ವಿಪರೀತವಾಗಿ ನಾನು, ನನ್ನದು ಎಂದು ಬಗೆದು ಲೋಕ ಮುಳುಗಿದರೆ ನನಗೇನು ಎಂಬ ಭಾವ ಮೆರೆಯುವ ಸ್ವಕೇಂದ್ರಿತ, ಸ್ವಜನ ಹಿತ ಬಯಸುವ, ಸಮಾಜದ ಋಣ ನಾನೇಕೆ ತೀರಿಸಲಿ ಎಂದು ಅಹಂಕಾರದ ಮೂಟೆ ಹೊತ್ತು ಜೀವಿಸುವ ವರ್ಗ ಮಾತ್ರ ಅದೇನು ಸುಖದಿಂದ ಬಾಳುತ್ತದೋ ತಿಳಿಯದು. ಕೊನೆಗೆ ನಂದ ರಾಯನ ಬದುಕು ನರಿ, ನಾಯಿ ತಿಂದು ಹೋಯಿತು ಅಂದ ಹಾಗೆ ಇವರ ಬದುಕು.

ನಮ್ಮ ಗಳಿಕೆ ಎಂಬುದು ಸಮಾಜ ಒದಗಿಸಿದ್ದು. ಕೆಲವೊಮ್ಮೆ ನಮ್ಮ ನಿರೀಕ್ಷೆಗೂ ಮೀರಿ ಧನ ಸಂಪತ್ತು ಲಭ್ಯವಾಗುವುದು ಸುಳ್ಳಲ್ಲ. ದೇವರು ಕೆಲವೊಂದು ಮಂದಿಗೆ ಅದೇಕೋ ಉದಾರತೆ ತೋರುತ್ತಾನೆ. ಆ ಸಂದರ್ಭದಲ್ಲಿ ವ್ಯಕ್ತಿ ಅಹಂಕಾರ ಮೆರೆಯುವುದು ಸರಿಯಲ್ಲ. ತನ್ನ ಆವಶ್ಯಕತೆಗೆ ತಕ್ಕಷ್ಟು ತನ್ನದು ಉಳಿದದ್ದು ಸಮಾಜಕ್ಕೆ ಸಲ್ಲ ಬೇಕಾದದ್ದು ಎಂಬ ಮನೋಧರ್ಮ ತನ್ನದಾಗಿಸಿಕೊಂಡರೆ ಆತನ ಸಂತಸದ ಕ್ಷಣಗಳು ಹೆಚ್ಚುತ್ತವೆ. ಬಾಯಾರಿದವನಿಗೆ ನೀರು, ಹಸಿದವನಿಗೆ ಒಂದು ಹಿಡಿ ಅನ್ನ, ರೋಗದಿಂದ ಬಳಲುವ ವ್ಯಕ್ತಿಗೆ ತಕ್ಕ ಚಿಕಿತ್ಸೆ ಇತ್ಯಾದಿ ಕರ್ಮಗಳನ್ನು ಮಾಡಿ ಅದರಲ್ಲಿ ತನ್ನ ಜೀವನದ ಸಾರ್ಥಕ್ಯ ಭಾವ ಮೆರೆಯುವ ಜನರು ನಿಜವಾಗಿಯೂ ಧನ್ಯರು. ತಮ್ಮ ಬದುಕು ತಮಗಾಗಿಯೇ ಅಲ್ಲ. ಸಹಜೀವಿಗಳಿಗೂ ಅದರಲ್ಲಿ ಹಕ್ಕು ಇದೆ ಎಂಬ ಮನಸ್ಸು ನಿಜ ಅರ್ಥದಲ್ಲಿ ಶ್ರೀಮಂತಿಕೆ. ಈ ತರದ ಸಮಾಜಮುಖೀ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡು ಬಾಳುವ ಮಂದಿ ನಿಜವಾಗಿಯೂ ದೇವರಿಗೆ ಪೂಜೆ ಪುನಸ್ಕಾರ ಮಾಡದಿದ್ದರೂ “ಮಾನವ ಸೇವೆ ಮಾಧವ ಸೇವೆ’ ಎಂಬ ಧರ್ಮ ಅನುಸರಿಸುವ ಮಹಾನ್‌ ಚೇತನಗಳು. ಇವರೇನೂ ತಮ್ಮ ಸತ್ಕಾರ್ಯಗಳಿಗೆ ಪ್ರತಿಯಾಗಿ ಏನೇನೂ ಅಪೇಕ್ಷೆ ಇಟ್ಟುಕೊಳ್ಳುವ ಜಾಯಮಾನದವರಲ್ಲ. ತಮ್ಮ ಕಾಯಕ ನೆರವೇರಿಸಿ ಅದರಲ್ಲೇ ತೃಪ್ತಿ, ಸಂತಸ ಪಡುವ ಮನೋಧರ್ಮದ ಶ್ರೀಮಂತರು.

ಮನುಷ್ಯ ಜೀವನದ ಉದ್ದೇಶ ಏನೆಂದು ಅರಿತು, ಸಂತೃಪ್ತಿ-ಸಂತೋಷಗಳ ನಿರ್ವಚ ನವನ್ನು ಆವಿಷ್ಕರಿಸಿದ ವ್ಯಕ್ತಿ ಹುಟ್ಟಿದ್ದು ನಿಜವಾಗಿಯೂ ಸಾರ್ಥಕ. ಯಾವುದು ಸರಿಯೋ ಅದನ್ನು ಆರಿಸಿ ತಮ್ಮ ಜೀವನಕ್ಕೆ ಅರ್ಥ ಕಂಡುಕೊಳ್ಳಿ. ಅರ್ಥವತ್ತಾಗಿ ಜೀವಿಸಲು ಕಲಿಯಿರಿ, “ಅರ್ಥ’ ಹೊತ್ತು ಹೊತ್ತು, ಬಳಲಿ ಕೊನೆಯಲ್ಲಿ ನಾಲ್ಕು ಜನಕ್ಕೆ ಹೊರುವ ಕಾಯಕ ಸಿಗದಂತೆ ಜೀವನಕ್ಕೆ ವಿದಾಯ ಹೇಳಬೇಡಿ.

– ಬಿ. ನರಸಿಂಗ ರಾವ್‌, ಕಾಸರಗೋಡು

ಟಾಪ್ ನ್ಯೂಸ್

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.