ಸುಳ್ಯ: ನಗರದಲ್ಲಿ ಫುಟ್‌ಪಾತ್ ಅವ್ಯವಸ್ಥೆ : ಓಡಾಡಲು ಸಂಕಷ್ಟ
Team Udayavani, Mar 23, 2021, 5:40 AM IST
ಸುಳ್ಯ: ವಾಹನ ದಟ್ಟನೆ, ರಸ್ತೆ ಬದಿವರೆಗಿನ ಬಹು ಮಹಡಿ ಕಟ್ಟಡಗಳಿಂದ ಸುಳ್ಯ ನಗರ ತುಂಬಿಹೋಗಿದೆ. ಇಲ್ಲಿನ ಪಾದಾಚಾರಿ ರಸ್ತೆಯಲ್ಲಿ ಮಾತ್ರ ಜನಸಾಮಾನ್ಯ ಕೆರೆ-ದಡ ಆಟವಾಡಿದಂತೆ ಹೋಗ ಬೇಕಾದ ಸ್ಥಿತಿ ಇದೆ.
ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಧ್ಯೆ ಬರುವ ಸುಳ್ಯ ಮುಖ್ಯರಸ್ತೆ ಬದಿಯ ಪಾದಾಚಾರಿ ರಸ್ತೆಯಲ್ಲಿನ ಗುಂಡಿಗಳಿಂದ ಜನರು ವಾಹನ ಸಂಚರಿಸುವಲ್ಲೇ ನಡೆಯುವಂತಾಗಿದೆ. ಬೇರೆ ಸ್ಥಳವಿಲ್ಲದ ಕಾರಣ ವಾಹನಗಳ ಪಾರ್ಕಿಂಗ್ ಕೂಡ ಫುಟ್‌ಪಾತ್ ಮೇಲೆಯೇ ಮಾಡುತ್ತಿದ್ದು ಸಾರ್ವಜನಿಕರು ಎಲ್ಲಿ ಓಡಾಡಬೇಕು ಎಂಬ ಪ್ರಶ್ನೆ ಉದ್ಭವವಾಗಿದೆ. ಸುಳ್ಯ ಜ್ಯೋತಿ ವೃತ್ತದಿಂದ ಸರಕಾರಿ ಆಸ್ಪತ್ರೆ ಬಳಿವರೆಗೆ 2 ಕಡೆ, ಶ್ರೀರಾಂ ಪೇಟೆಯಿಂದ ಖಾಸಗಿ ಬಸ್ ನಿಲ್ದಾಣದವರೆಗೆ 2 ಕಡೆ ಹಾಗೂ ಪೊಲೀಸ್ ಠಾಣೆಯ ಬಳಿಯಿಂದ ಗಾಂಧಿ ನಗರದವರೆಗೆ ಅವ್ಯವಸ್ಥಿತ ಫುಟ್ ಪಾತ್ ಕಾಣ ಸಿಗುತ್ತದೆ. ಪಾದಾಚಾರಿಗಳು ಇಲ್ಲಿ ಸರ್ಕಸ್ ಮಾಡುತ್ತಾ ನಡೆದಾಡುವುದು ಅನಿವಾರ್ಯವಾಗಿದೆ. ಪ್ರವಾಸಿ ವಾಹನ ನಿಲ್ದಾಣದ ಮುಂಭಾಗದಲ್ಲಿ 20 ಮೀಟರ್ ದೂರ ಫುಟ್‌ಪಾತ್ ಇಲ್ಲ.
ಬಸ್ ನಿಲ್ದಾಣದಿಂದ ವಿದ್ಯಾರ್ಥಿಗಳು ಕಾಲೇಜಿಗೆ, ಸಾರ್ವಜನಿಕರು ವಿವಿಧ ಮಳಿಗೆಗಳಿಗೆ ಇದೇ ದಾರಿಯಲ್ಲಿ ಸಂಚರಿಸಬೇಕಾಗಿದೆ. ಸದ್ಯ ಫುಟ್‌ಪಾತ್ ಇಲ್ಲದಲ್ಲಿ ಅಡಿಕೆ ಹಲಗೆ ಹಾಕಿದ್ದು, ಅದು ಕೂಡ ಈಗಲೋ ಆಗಲೋ ಎನ್ನುವಂತಿದೆ.
ಅಂದು ಕೆಅರ್‌ಡಿಎಲ್‌ನವರು ರಸ್ತೆ ವಿಸ್ತೀರ್ಣದ ವೇಳೆ ನಗರದ ಉಳಿದ ಕಡೆ ತಡೆಬೇಲಿ ಹಾಗೂ ಫುಟ್‌ಪಾತ್ ನಿರ್ಮಾಣ ಮಾಡಿದ್ದರು. ಆದರೆ ಆ ನಿರ್ದಿಷ್ಟ ಸ್ಥಳ ಖಾಸಗಿ ಯವರಿಗೆ ಸಂಬಂಧಿಸಿ¨ªಾಗಿದ್ದು, ವೈಯಕ್ತಿಕ ವಿರೋಧದಿಂದಾಗಿ ಫುಟ್‌ಪಾತ್ ಆಗಲಿಲ್ಲ ಎಂದು ಸ್ಥಳೀಯ ಆಡಳಿತ ಹೇಳುತ್ತದೆ.
ಆದಾಯ ಕಂಡುಕೊಳ್ಳಬಹುದು
ರಾ.ಹೆ.ಸುಪರ್ದಿಯಲ್ಲಿ ಸದ್ಯ ಈ ರಸ್ತೆಯಿದ್ದು, ಇಲ್ಲಿನ ನೋವು ಅರ್ಥವಾದಂತಿಲ್ಲ. ಪರಿವಾರ ಕಾನದಿಂದ ಪೈಚಾರು ವರೆಗಿನ ರಸ್ತೆಯನ್ನು ಸ್ಥಳೀಯ ಆಡಳಿತಕ್ಕೆ ವಹಿಸಿದರೆ ಈ ಅವ್ಯವಸ್ಥೆಯನ್ನು ಸರಿ ಮಾಡಬಹುದು ಎನ್ನುವ ಮಾತು ಕೇಳಿ ಬಂದಿದೆ. ಜವಾಬ್ದಾರಿಯನ್ನು ನ.ಪಂ.ಗೆ ನೀಡಿದರೆ ವ್ಯವಸ್ಥೆ ಸರಿಪಡಿಸುವುದಲ್ಲೆ ಬ್ಯಾನರ್, ಜಾಹಿರಾತುಗಳ ಅಳವಡಿಕೆಗೆ ಅವಕಾಶ ಮಾಡಿಕೊಟ್ಟು ಆದಾಯವನ್ನೂ ಕಂಡುಕೊಳ್ಳಹುದಾಗಿದೆ. ಖಾಸಗಿಯವರು ಫುಟ್‌ಪಾತ್‌ಗೆ ಬೇಕಾದ ಸ್ಥಳ ಬಿಟ್ಟುಕೊಡಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಮನವಿ ಮಾಡಿದ್ದೇವೆ.
ಫುಟ್‌ಪಾತ್ ಸರಿ ಮಾಡಲು ಯಾವುದೇ ಅನುದಾನಗಳಿಲ್ಲ. ಮುಖ್ಯ ರಸ್ತೆ ಯನ್ನು ನ.ಪಂ. ವ್ಯಾಪ್ತಿಗೆ ಬಿಟ್ಟು ಕೊಟ್ಟರೆ ನಾವು ಅಭಿವೃದ್ಧಿ ಮಾಡಬಹುದು. ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದ್ದೇವೆ.
-ವಿನಯ್ ಕುಮಾರ್ ಕಂದಡ್ಕ, ನ.ಪಂ. ಅಧ್ಯಕ್ಷರು
– ಸುದೀಪ್ ರಾಜ್ ಕೋಟೆಮೂಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.