![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Feb 6, 2021, 10:05 PM IST
ಗುರುಗಾಂವ್: ಸಿಆರ್‌ಪಿಎಫ್ 34 ಮಹಿಳಾ ಸೈನಿಕರನ್ನೊಳಗೊಂಡ ಮೊದಲ ತುಕಡಿಯನ್ನು ವಿಶೇಷ ಅರಣ್ಯ ಸಮರ ಕಮಾಂಡೋ ಪಡೆ “ಕೋಬ್ರಾ’ಗೆ ಅಧಿಕೃತವಾಗಿ ಸಂಯೋಜಿಸಲಾಗಿದೆ. ಈ ತುಕಡಿ ಮುಂಬರುವ ದಿನಗಳಲ್ಲಿ ದೇಶದಲ್ಲಿನ ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ಬಳಕೆಯಾಗಲಿದೆ.
ಕಾದಾರ್‌ಪುರ ಹಳ್ಳಿಯಲ್ಲಿನ ಕೋಬ್ರಾ ಕ್ಯಾಂಪ್‌ನಲ್ಲಿ ತುಕಡಿ ಪದಗ್ರಹಣ ಸಮಾರಂಭಕ್ಕೆ ಸಿಆರ್‌ಪಿಎಫ್ ನ ಪ್ರಧಾನ ನಿರ್ದೇಶಕಿ ಎ.ಪಿ. ಮಹೇಶ್ವರಿ ಚಾಲನೆ ನೀಡಿದರು. ಕೋಬ್ರಾದಲ್ಲಿ ಈಗಾಗಲೇ ಇದ್ದ 6 ಮಹಿಳಾ ಸಿಬ್ಬಂದಿಯನ್ನು ಈ ತುಕಡಿಗೆ ಸೇರಿಸಲಾಗಿದೆ.
3 ತಿಂಗಳ ಕಠಿಣ ತರಬೇತಿ ಬಳಿಕ ನಕ್ಸಲ್ ಪೀಡಿತ ಪ್ರದೇಶಗಳಾದ ಛತ್ತೀಸ ಗಡ, ಸುಕ್ಮಾ, ದಂತೇ ವಾಡ, ಬಿಜಾಪುರದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
2009ರಿಂದ ಆರಂಭಗೊಂಡ, ಸಿಆರ್‌ಪಿಎಫ್ ನ ಅಂಗ ಘಟಕ ಕೋಬ್ರಾ ಮುಖ್ಯವಾಗಿ ಅರಣ್ಯದೊಳಗಿನ ನಕ್ಸಲ್ ಚಟುವಟಿಕೆ ನಿಗ್ರಹ ಮತ್ತು ಗುಪ್ತಚರ ಹೊಣೆಗಾರಿಕೆ ಹೊಂದಿದೆ.
ಇದನ್ನೂ ಓದಿ:ರೈಲ್ವೆಯ “ಐಆರ್‌ಸಿಟಿಸಿ’ ಮೂಲಕ ಇನ್ನು ಬಸ್ ಬುಕಿಂಗ್‌ಗೂ ಅವಕಾಶ
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.