![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Dec 31, 2021, 8:25 PM IST
ಕಡೂರು : ಯುವಕನೊಬ್ಬನಿಗೆ ಮದುವೆ ಮಾಡಿಸುವ ದುರುದ್ದೇಶದಿಂದ ಯುವತಿಯೊಬ್ಬಳನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಿದ್ದು ಕಡೂರು ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ .
ತಾಲೂಕಿನ ಮರಡಿಹಳ್ಳಿಯ ಮಲ್ಲೇಶ್(26),ಎಸ್.ಜಿ.ಕೊಪ್ಪಲಿನ ಪರಮೇಶ್ (30) ಮತ್ತು ಕುರುಬಗೆರೆಯ ಮಹಾಂತೇಶ್(27) ಈ ಘಟನೆಯಲ್ಲಿ ಬಂಧಿತರಾಗಿದ್ದು ಅಪಹರಣಕ್ಕೊಳಗಾಗಿದ್ದ ಯುವತಿಯನ್ನು ರಕ್ಷಿಸಿದ್ದಾರೆ.
ಘಟನೆ ವಿವರ
ಡಿ.27 ರ ಬೆಳಗಿನಜಾವ ಸುಮಾರು 4.15 ಕ್ಕೆ ಮರಡಿಹಳ್ಳಿ ವಾಸಿ ಓಂಕಾರಪ್ಪ ಪತ್ನಿ ಅಮ್ಮಯ್ಯ ತಮ್ಮ 17 ವರ್ಷದ ಮಗಳೊಂದಿಗೆ ಜಮೀನಿನಲ್ಲಿ ಕುಂಬಳಕಾಯಿ ಹೂ ಪರಾಗಸ್ಪರ್ಶ ಮಾಡಿಸಲು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ .ಮರಡಿಹಳ್ಳಿ ಮತ್ತು ಕಡೂರಹಳ್ಳಿ ಟಾರ್ ರಸ್ತೆಯಲ್ಲಿ ಬೊಲೆರೊ ವಾಹನ ಒಂದು ಹಿಂದಿನಿಂದ ಬಂದು ಓಂಕಾರಪ್ಪ ಮತ್ತು ಅಮ್ಮಯ್ಯ ಅವರಿಗೆ ವಾಹನದಲ್ಲಿದ್ದ ವ್ಯಕ್ತಿಗಳು ಥಳಿಸಿ ಅವರ ಮಗಳನ್ನು ಅಪಹರಿಸಿದ್ದಾರೆ.
ವಾಹನದಲ್ಲಿ ಗೋವಿಂದಪ್ಪ,ಪರಮೇಶ್,ಸಣ್ಣೆಗೌಡ ಬಂದಿದ್ದರೆಂದು ಓಂಕಾರಪ್ಪ ಗುರುತು ಹಿಡಿದಿದ್ದು ಈ ಅಪಹರಣ ಸಂದರ್ಭ ಅಲ್ಲೇ ಹೊಲದಲ್ಲಿ ಅಡಗಿ ಕುಳಿತಿದ್ದ 3-5 ಜನರು ಅಪಹರಣಕಾರರೊಂದಿಗೆ ಕೈಜೋಡಿಸಿದ್ದಾರೆ.
ತನಗೆ ಹಾಗೂ ಪತ್ನಿಯ ಕೈಕಾಲುಗಳಿಗೆ ತೀವ್ರ ಪೆಟ್ಟಾಗಿದೆ ಎಂದು ತಿಳಿಸಿರುವ ಓಂಕಾರಪ್ಪ ಈ ಘಟನೆಯಲ್ಲಿ ಗ್ರಾಮದ ಮಲ್ಲೇಶ್ ಮತ್ತು ಮಾರುತಿ ಅವರ ಕೈವಾಡವಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ದೂರು ನೀಡಿದ ಬಳಿಕ ಕಾರ್ಯ ಪ್ರವೃತ್ತರಾದ ಕಡೂರು ಪೊಲೀಸರು ಬಂಧಿತ ಆರೋಪಿ ಮಹಂತೇಶ್ , ಸಂಬಂಧಿ ಎಮ್ಮೆದೊಡ್ಡಿ ಭಾಗದ ಸಗಣಿಬಸವನಹಳ್ಳಿ ಗ್ರಾಮದ ಗುರುಸ್ವಾಮಿ ಮನೆಯಲ್ಲಿ ಯುವತಿಯನ್ನು ಪತ್ತೆ ಮಾಡಿದ್ದಾರೆ. ಯುವತಿಯನ್ನು ವೈದೈಕೀಯ ಪರೀಕ್ಷೆ ಬಳಿಕ ಪೋಷಕರಿಗೆ ಒಪ್ಪಿಸಲಾಗಿದೆ.
ಬಂಧಿತರಲ್ಲಿ ಓರ್ವನಾದ ಪರಮೇಶ್ ಕೆಲವು ತಿಂಗಳ ಹಿಂದೆ ಯುವತಿಯನ್ನು ಮದುವೆ ಮಾಡಿಕೊಡಿ ಎಂದು ಪ್ರಸ್ತಾಪಿದ್ದು, ಪಾಲಕ ಓಂಕಾರಪ್ಪ ಇದನ್ನು ತಿರಸ್ಕರಿಸಿದ್ದು ಈ ಹಿನ್ನೆಲೆಯಲ್ಲಿ ಯುವತಿಯನ್ನು ಅಪಹರಿಸಲಾಗಿದೆ ಎಂಬ ಅಂಶ ಪೊಲೀಸರ ಪ್ರಾಥಮಿಕ ತನಿಖೆಯಿಂದ ಹೊರಬಿದ್ದಿದೆ. ಆರೋಪಿಗಳನ್ನು ಕಡೂರು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.