ಆತ್ಮನಿರ್ಭರ ಭಾರತಕ್ಕೆ ನಾಲ್ಕು ಆಧಾರ ಸ್ತಂಭ
Team Udayavani, May 23, 2020, 6:00 AM IST
ಬೆಂಗಳೂರು: ಆತ್ಮನಿರ್ಭರ ಭಾರತವು ಸ್ವಾಭಿಮಾನಿ, ಸಶಕ್ತ, ಸಂಘಟಿತ ಮತ್ತು ಏಕಾತ್ಮ ಭಾರತವೆಂಬ ನಾಲ್ಕು ಆಧಾರ ಸ್ತಂಭಗಳ ಮೇಲೆ ನಿಂತಿದೆ. ದೇಶದ ಪ್ರತಿಯೊಬ್ಬರೂ ಕೈಜೋಡಿಸಿ ಇದನ್ನು ಸಾಕಾರಗೊಳಿಸಬೇಕಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘ ಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಪ್ರತಿಪಾದಿಸಿದ್ದಾರೆ.
ಶ್ಯಾಮ್ ಪ್ರಸಾದ್ ಮುಖರ್ಜಿ ಸಂಶೋಧನ ಪ್ರತಿಷ್ಠಾನದಡಿ ಶುಕ್ರವಾರ “ಆತ್ಮ ನಿರ್ಭರ ಭಾರತ- ದೂರದೃಷ್ಟಿ ಮತ್ತು ಕ್ರಿಯೆ’ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಆತ್ಮ ನಿರ್ಭರ ಭಾರತದ ಮೂಲಕ ಜಗತ್ತನ್ನು ನಿಯಂತ್ರಿಸಬೇಕು ಎಂಬ ಚಿಂತನೆ ಭಾರತಕ್ಕಿಲ್ಲ. ಬದಲಿಗೆ ನಮ್ಮ ಅಸ್ತಿತ್ವದ ಮೂಲಕ ಅಭಿವೃದ್ಧಿಯಾಗಬೇಕು ಎಂಬ ಆಶಯವಷ್ಟೇ ಇದೆ ಎಂದರು.
ಲಾಕ್‌ಡೌನ್‌ನಿಂದಾಗಿ ದೇಶದಲ್ಲಿ ಶೇ. 100ರಷ್ಟು ದೇವಾಲಯಗಳು ಬಂದ್ ಆದವು. ಶೇ.99.99ರಷ್ಟು ಚರ್ಚ್‌ಗಳು ಬಂದ್ ಆಗಿದ್ದು, ಈಸ್ಟರ್ ಹಬ್ಬವನ್ನು ಕ್ರೈಸ್ತರು ಮನೆಗಳಲ್ಲೇ ಆಚರಿಸಿದರು. ಜೈನರು ಮಹಾವೀರ ಜಯಂತಿಯನ್ನು, ಬೌದ್ಧರು ಬುದ್ದ ಜಯಂತಿಯನ್ನು ಮನೆಗಳಲ್ಲೇ ಆಚರಿಸಿದರು. ಮುಸ್ಲಿಂ ಸಮುದಾಯದಲ್ಲಿ ಶೇ.85ರಿಂದ ಶೇ. 90ರಷ್ಟು ಮಸೀದಿಗಳು ಇಂದಿಗೂ ಮುಚ್ಚಿವೆ. ಕೆಲವು ಸಮಾಜ ಘಾತುಕ ಶಕ್ತಿಗಳು ಸಾಮಾಜಿಕ ಜಾಲತಾಣ ಮತ್ತಿತರೆಡೆ ಅತಿರೇಕದ ವರ್ತನೆ ತೋರುವುದನ್ನು ಹೊರತುಪಡಿಸಿದರೆ ಉಳಿದವರು ಸ್ಪಂದಿಸಿದ್ದಾರೆ. ನಾವು ನಾಣ್ಯದ ಎರಡು ಮುಖವನ್ನೂ ನೋಡಬೇಕು ಎಂದರು.
ದೇಶದಲ್ಲಿ ಸದ್ಯ ಶೇ. 63ರಷ್ಟು ಉದ್ಯೋಗಿ ವರ್ಗದವರಿದ್ದಾರೆ. ಮುಂದಿನ 33 ವರ್ಷಗಳಲ್ಲಿ ಇದು ಶೇ. 50ಕ್ಕಿಂತ ಹೆಚ್ಚಲಿದೆ. ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ. ಕೋವಿಡ್-19 ನಿಯಂತ್ರಣಕ್ಕೆ ದೇಶದ ಎಂಟು ಪ್ರತಿಷ್ಠಿತ ಸಂಸ್ಥೆಗಳು ಲಸಿಕೆ ಅಭಿವೃದ್ಧಿ ಕಾರ್ಯದಲ್ಲಿ ನಿರತವಾಗಿವೆ. ಚೀನದಿಂದ ವೈರಸ್ ಬಂದಿದ್ದು, ಭಾರತದಿಂದ ಲಸಿಕೆ ಬರಲಿದೆ ಎಂಬುದು ಸಾಕಷ್ಟು ವಿಜ್ಞಾನಿಗಳ ನಂಬಿಕೆ ಎಂದರು.
ಮೂರು ಅಂಶಗಳು ಮುಖ್ಯ
ಸ್ವದೇಶಿ, ಸ್ವಭಾಷಾ ಮತ್ತು ಸ್ವಭೂಷ ಅಂಶಗಳನ್ನು ಅಳವಡಿಸಿ ಕೊಳ್ಳಲು ಮುಂದಾಗಬೇಕು. ಮುಖ್ಯವಾಗಿ ಮಾತೃ ಭಾಷೆಯ ಒಂದು ಪತ್ರಿಕೆ ಓದಬೇಕು. ಮನೆಯಲ್ಲಿ ಮಾತೃ ಭಾಷೆ ಯನ್ನೇ ಬಳಸಬೇಕು. ಮಾತೃಭಾಷೆಯಲ್ಲೇ ಸಹಿ ಮಾಡಬೇಕು. ಈ ಸಣ್ಣ ಪ್ರಯತ್ನ ದೊಡ್ಡ ಬದಲಾವಣೆ ತರಲಿದೆ. ಸ್ವದೇಶಿ ಉಡುಗೆ, ಸ್ಥಳೀಯ ವಸ್ತು ಖರೀದಿಸಬೇಕು. ಗುಣಮಟ್ಟದ ವಸ್ತು ಉತ್ಪಾದಿಸು ವಂತೆ ಪ್ರೇರಣೆ ನೀಡಬೇಕು ಎಂದು ಸಂತೋಷ್ ಕರೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ
CT Ravi case:ಬೆಳಗಾವಿ ಕೋರ್ಟ್ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ
Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.