ಚತುಷ್ಪಥ ಸಂಪರ್ಕ ರಸ್ತೆ, ಆರ್‌ಯುಬಿ: ಬೇಡಿಕೆ ಈಡೇರುವ ಹಂತಕ್ಕೆ
Team Udayavani, Mar 29, 2021, 6:00 AM IST
ಮಹಾನಗರ: ಜೆಪ್ಪು ರಾಷ್ಟ್ರೀಯ ಹೆದ್ದಾರಿ-66ರಿಂದ ಮೊರ್ಗನ್ಸ್ ಗೇಟ್ ಜಂಕ್ಷನ್‌ವರೆಗೆ ಚತುಷ್ಪಥ ಸಂಪರ್ಕ ರಸ್ತೆ, ಮಹಾಕಾಳಿ ಪಡ್ಪುವಿನಲ್ಲಿ ಆರ್‌ಯುಬಿ ನಿರ್ಮಾಣ ಕಾರ್ಯ ನಡೆಯಲಿದ್ದು, ಇದರೊಂದಿಗೆ ಜೆಪ್ಪು ಮಹಾಕಾಳಿ ಪಡ್ಪು ಪ್ರದೇಶದ ಸಾರ್ವಜನಿಕರ ಹಲವು ವರ್ಷಗಳ ಬೇಡಿಕೆ ಈಡೇರುವ ಹಂತಕ್ಕೆ ಬಂದಿದೆ.
ಸದ್ಯ ಸಂಪರ್ಕ ರಸ್ತೆಯು 4.50 ಮೀ.ನಿಂದ 6 ಮೀ. ಆಗಲಇದ್ದು, ಈ ರಸ್ತೆ ಮೇಲ್ದರ್ಜೆಗೇರಲಿದೆ. ಇದೀಗ ನೂತನ ಯೋಜನೆಯ ಪ್ರಕಾರ 1078 ಮೀ. ಉದ್ದದ ರಸ್ತೆಯನ್ನು 18 ಮೀ. ಅಗಲಕ್ಕೆ ವಿಸ್ತರಿಸಿ 4 ಪಥದ ಕಾಂಕ್ರೀಟ್ ರಸ್ತೆ, ಮೀಡಿಯನ್, ದಾರಿದೀಪಗಳು, ಎರಡೂ ಭಾಗಗಳಲ್ಲಿ ಆರ್‌ಸಿಸಿ ಮಳೆ ನೀರು ಚರಂಡಿ, ತಗ್ಗು ಪ್ರದೇಶದ ಭಾಗದಲ್ಲಿ ಆರ್‌ಸಿಸಿ ತಡೆಗೋಡೆ, ಗ್ರಾನೈಟ್ ಕಲ್ಲು ಪಿಚ್ಚಿಂಗ್ ಒಳಗೊಂಡಿದೆ. ಸದ್ಯ ಪ್ರಸ್ತಾವಿಕ ರಸ್ತೆಯು ರಾ.ಹೆ. 66ರಿಂದ ಮಹಾಕಾಳಿ ಪಡ್ಪು ರೈಲ್ವೇ ಕೆಳಸೇತುವೆ ಮುಖಾಂತರ ಶೆಟ್ಟಿಬೆಟ್ಟು ಜಂಕ್ಷನ್, ಮೊರ್ಗನ್ಸ್‌ಗೇಟ್ ಜಂಕ್ಷನ್‌ವರೆಗೆ ಸದ್ಯ ಇರುವ ಕಿರಿದಾದ ಕಾಲುದಾರಿ ವಿಸ್ತರಿಸಿ ಚತುಷ್ಪತ ರಸ್ತೆಯಾಗಿ ಅಭಿವೃದ್ಧಿಗೊಳ್ಳಲಿದೆ.
ಕೇರಳ-ಮಂಗಳೂರು ಮಧ್ಯೆ ಪ್ರತಿನಿತ್ಯ ಹತ್ತಾರು ರೈಲುಗಳು ಸಂಚರಿಸುತ್ತದೆ. ಈ ರೈಲು ಮಹಾಕಾಳಿಪಡ್ಪು ಮೂಲಕ ಸಾಗುವ ಕಾರಣದಿಂದ ವಾಹನ ಸಂಚಾರ ಸ್ಥಗಿತಗೊಳ್ಳುತ್ತದೆ. ಈ ಕಾರಣಕ್ಕಾಗಿ ರಸ್ತೆ ಬ್ಲಾಕ್ ಆಗಿ ತೊಕ್ಕೊಟ್ಟು-ಮಂಗಳೂರು ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವ ಪ್ರಮೇಯ ಇಲ್ಲಿ ನಿತ್ಯದ ಸಂಗತಿ. ಅಲ್ಲದೆ ಇಕ್ಕಟ್ಟಿನ ರಸ್ತೆಯಲ್ಲಿ ವಾಹನ ಸಂಚರಿಸಲೂ ಆಗದೆ ಸಂಕಷ್ಟವೇ ಎದುರಾಗುತ್ತಿದೆ. ಇದೇ ಕಾರಣಕ್ಕೆ ಇದೀಗ ಸ್ಮಾರ್ಟ್‌ಸಿಟಿ ಯೋಜನೆಯ ಸುಮಾರು 49.95 ಕೋಟಿ ರೂ. ವೆಚ್ಚದಲ್ಲಿ ಸಂಪರ್ಕ ರಸ್ತೆ ಮತ್ತು ಆರ್‌ಯುಬಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಶೀಘ್ರ ಇಲ್ಲಿನ ಸಮಸ್ಯೆ ಪರಿಹಾರಗೊಳ್ಳಲಿದೆ.
ನಾಲ್ಕು ಆರ್‌ಯುಬಿ: ಹೊಸ ಪರಿಕಲ್ಪನೆ
ಅಧಿಕಾರಿಗಳು ಹೇಳುವಂತೆ ರಸ್ತೆಯಲ್ಲಿ ನಾಲ್ಕು ಆರ್‌ಯುಬಿ ಅಳವಡಿಸಲಾಗುತ್ತಿದ್ದು, ಇದು ರಾಜ್ಯದಲ್ಲಿ ಹೊಸ ಪ್ರಯೋಗ. ಪ್ರಸ್ತುತ ಒಂದು ರೈಲ್ವೇ ಹಳಿ ಭಾಗದಲ್ಲಿ ಆರ್‌ಯುಬಿ ಇದ್ದು, ಇನ್ನೊಂದು ರೈಲು ಹಳಿ ಭಾಗದಲ್ಲಿ ಲೆವೆಲ್ ಕ್ರಾಸಿಂಗ್ ನಿರ್ಮಾಣ ಮಾಡಲಾಗಿದೆ. ಸದ್ಯ ಇರುವಂತಹ ಲೆವೆಲ್ ಕ್ರಾಸಿಂಗ್ ಭಾಗದಲ್ಲಿ ರೈಲು ಸಂಚಾರಕ್ಕಾಗಿ ರೈಲ್ವೇ ಗೇಟ್ ಹಾಕಿದಾಗ ವಾಹನಗಳು ಸಾಲು ನಿಂತು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ. ಇದನ್ನು ತಪ್ಪಿಸಿ ಸುಗಮ ಸಂಚಾರ ಕಲ್ಪಿಸಲು 30.7 ಕೋಟಿ ರೂ.ಗಳನ್ನು ಮಂಗಳೂರು ಸ್ಮಾರ್ಟ್‌ಸಿಟಿ ವತಿಯಿಂದ ಠೇವಣಿ ವಂತಿಗೆ ಆಧಾರದಲ್ಲಿ ರೈಲ್ವೇ ಇಲಾಖೆಯು ನಿರ್ಮಾಣ ಕಾರ್ಯವಹಿಸಲಿದೆ.
ಸಮಗ್ರ ಅಭಿವೃದ್ಧಿ
ಜೆಪ್ಪು ಮಹಾಕಾಳಿಪಡು³ ಪ್ರದೇಶದ ಸಾರ್ವಜನಿಕರ ಹಲವು ವರ್ಷಗಳ ಬೇಡಿಕೆ ಈಡೇರುವ ಹಂತಕ್ಕೆ ಬಂದಿದೆ. 49.95 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಸ್ಮಾರ್ಟ್‌ಸಿಟಿ, ರೈಲ್ವೇ ಇಲಾಖೆ ಸಹಕಾರದೊಂದಿಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಮುಖ್ಯ. ಮಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಬದ್ಧ.
-ಡಿ. ವೇದವ್ಯಾಸ ಕಾಮತ್, ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್ ಬಾವ
ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್ ಬಂದ್
Request: ಮಂಗಳೂರಿನಲ್ಲಿ ಸೈನಿಕ ಶಾಲೆ, ಮಿಲಿಟರಿ ನೆಲೆ ಸ್ಥಾಪಿಸಿ: ಕ್ಯಾ.ಬ್ರಿಜೇಶ್ ಚೌಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಫೆ.21ರಂದು ತೆರೆಗೆ ಬರಲಿದೆ ʼವಿಷ್ಣು ಪ್ರಿಯಾʼ
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.