IPhone ಗಿಫ್ಟ್ ಹೆಸರಿನಲ್ಲಿ ವಂಚನೆ
Team Udayavani, Apr 23, 2023, 5:25 AM IST
ಮಂಗಳೂರು: ಐ ಫೋನ್ ಗಿಫ್ಟ್ ಕಳುಹಿಸಿರುವುದಾಗಿ ಹೇಳಿ ಹಣ ಪಡೆದು ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ದೂರುದಾರ ವ್ಯಕ್ತಿಗೆ ಎರಡು ತಿಂಗಳ ಹಿಂದೆ ಇನ್‌ಸ್ಟಾಗ್ರಾಂ ಅಕೌಂಟ್‌ಗೆ dr_fredlutodc ಎಂಬ ಇನ್‌ಸ್ಟಾಗ್ರಾಂ ಹೆಸರು ಹೊಂದಿರುವ ಅಪರಿಚಿತ ವ್ಯಕ್ತಿಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಅದನ್ನು ದೂರುದಾರ ವ್ಯಕ್ತಿ ಒಪ್ಪಿಕೊಂಡಿದ್ದರು. ಅನಂತರ ಅಪರಿಚಿತ ವ್ಯಕ್ತಿ ದೂರುದಾರ ವ್ಯಕ್ತಿಯ ವಾಟ್ಸಪ್ ಸಂಖ್ಯೆ ಪಡೆದುಕೊಂಡು 8880237242 ಮತ್ತು +447418370799 ಸಂಖ್ಯೆಯಿಂದ ಮೆಸೇಜ್‌ಗಳನ್ನು ಕಳುಹಿಸುತ್ತಿದ್ದ. ತನ್ನನ್ನು ವೈದ್ಯನೆಂದು ಪರಿಚಯಿಸಿಕೊಂಡಿದ್ದ. ಮಾ.27ರಂದು ಅಪರಿಚಿತ ವ್ಯಕ್ತಿ ಐಫೋನ್ ಗಿಫ್ಟ್ ಕಳುಹಿಸಿದ್ದೇನೆ ಎಂದು ಹೇಳಿ ಕೊರಿಯರ್ ಚಾರ್ಜ್ ಎಂದು ದೂರುದಾರ ವ್ಯಕ್ತಿಯಿಂದ 50,000 ರೂ. ರಾಣಿದಾಸ್ ಎಂಬ ವ್ಯಕ್ತಿಯ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಅನಂತರ ಯಾವುದೇ ಗಿಫ್ಟ್ ನೀಡಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.