ಸುಲೇಮಾನ್ ಸ್ಟೋನ್ ಹೆಸರಿನಲ್ಲಿ ವಂಚನೆ :ಬಾಗಲಕೋಟೆಯಲ್ಲಿ 5 ಲಕ್ಷ ಜಪ್ತಿ
Team Udayavani, Jan 21, 2022, 8:20 PM IST
ಬಾಗಲಕೋಟೆ : ಬದುಕಿನಲ್ಲಿ ಒಳ್ಳೆಯದಾಗಲು ಸುಲೇಮಾನ್ ಸ್ಟೋನ್ (ದೇವರ ಕಲ್ಲು) ಕೊಡುವುದಾಗಿ ಹೇಳಿ ಮೋಸದ ಮಾಡಿದ ಬಾಗಲಕೋಟೆಯ ಓರ್ವ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು, ಆತನಿಂದ ೫ ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.
ಅಶೋಕ ರೇವಣಸಿದ್ದಪ್ಪ ಇಂಡಿ ಎಂಬುವವರಿಗೆ ಅಜಯ ಎಂಬ ಹೆಸರಿನ ವ್ಯಕ್ತಿ ಯೂಟೂಬ್‌ನಲ್ಲಿ ಸುಲೇಮಾನ್ ಸ್ಟೋನ್ ಎಂಬ ದೇವರ (ದೈವಿ) ಕಲ್ಲನ್ನು ಮಾರಾಟ ಮಾಡುವುದಾಗಿ ದೂರವಾಣಿ ಸಂಖ್ಯೆಯ ಸಮೇತ ವಿವರ ಹಾಕಿದ್ದ. ಈ ಕಲ್ಲನ್ನು ನಮ್ಮ ಬಳಿ ಇಟ್ಟುಕೊಂಡರೆ ಯಾವುದೇ ರೀತಿಯ ಅಪಘಾತವಾಗಲ್ಲ. ಯಾರೂ ನಮ್ಮ ಮೇಲೆ ದಾಳಿ ನಡೆಸಲ್ಲ. ಜೀವನದಲ್ಲಿ ತುಂಬಾ ಒಳ್ಳೆಯದಾಗುತ್ತದೆ. ಹಿಂದೆ ರಾಜ-ಮಹಾರಾಜರೆಲ್ಲ ಈ ದೈವಿ ಕಲ್ಲನ್ನು ಬಳಸುತ್ತಿದ್ದರು ಎಂದು ನಂಬಿಸಿ, 7 ಲಕ್ಷ ಮೊತ್ತಕ್ಕೆ ದೈವಿ ಕಲ್ಲನ್ನು ನೀಡುವುದಾಗಿ ಮೋಸತನದಿಂದ ಅಶೋಕ ಅವರನ್ನು ಬಾಗಲಕೋಟೆಗೆ ಕರೆಸಿ ಮೋಸ ಮಾಡಿದ್ದ. ಬಾಗಲಕೋಟೆಗೆ ಕರೆಸಿದ್ದಾಗ 5 ಲಕ್ಷ ನಗದು, ಒಂದು ಚಿನ್ನದ ಬ್ರೆಸಲೇಟ್ ನೀಡುವ ಜತೆಗೆ ಸುಲೇಮಾನ್ ಸ್ಟೋನ್ ಎಂದು ನಂಬಿಸಿ ಒಂದು ಕರಿ ಕಲ್ಲನ್ನು ನೀಡಿದ್ದ.
ಈ ಕುರಿತು ಅಶೋಕ ಅವರು ಬಾಗಲಕೋಟೆ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಾಗಲಕೋಟೆ ಉಪ ವಿಭಾಗದ ಡಿವೈಎಸ್ಪಿ ಚಂದ್ರಕಾಂತ ನಂದರಡ್ಡಿ ಮಾರ್ಗದರ್ಶನದಲ್ಲಿ ಶಹರ ಠಾಣೆಯ ಇನ್ಸಪೆಕ್ಟರ್ ವಿಜಯ ಮುರಗುಂಡಿ, ಎಎಸ್‌ಐ ವಿ.ಕೆ. ಕುಲಕರ್ಣಿ, ಸಿಬ್ಬಂದಿಗಳಾದ ಎಂಡಿ ಸೌದಿ, ವಿ.ಬಿ. ಹಾದಿಮನಿ, ಮುತ್ತು ಅಜಮನಿ, ನಾಸೀರ ಬೀಳಗಿ ಅವರು ತನಿಖೆ ಕೈಗೊಂಡು, ಆರೋಪಿ ನಗರದ ಕೆಂಪು ರಸ್ತೆಯ ಬಳಿಯ ನಿವಾಸಿ ಸಮೀರ (ಅಜಯ) ಜಾಫರ ಜಹಾಗೀರದಾರ ಎಂಬಾತನನ್ನು ಬಂಧಿಸಿದ್ದಾರೆ.
ಆರೋಪ ಸಮೀರನಿಂದ ಒಂದು ಬೈಕ್, 5 ಲಕ್ಷ ನಗದು, ಒಂದು ಚಿನ್ನದ ಬ್ರೆಸಲೇಟ್ ಕೂಡ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣ ಪತ್ತೆ ಮಾಡಿದ ಪೊಲೀಸ್ ಅಧಿಕಾರಿ-ಸಿಬ್ಬಂದಿಗೆ ಇಲಾಖೆ ಪ್ರಸಂಶಿಸಿದ್ದು, ನಗದು ಬಹುಮಾನ ನೀಡಲಾಗುವುದು ಎಂದು ಎಸ್ಪಿ ಲೋಕೇಶ ಜಗಲಾಸರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.