ಟ್ರೇಡಿಂಗ್ ವ್ಯವಹಾರ ನೆಪದಲ್ಲಿ ವಂಚನೆ
Team Udayavani, Apr 20, 2023, 5:04 AM IST
ಉಡುಪಿ: ಆನ್‌ಲೈನ್ ವ್ಯವಹಾರದ ಬಗ್ಗೆ ಟೆಲಿಗ್ರಾಂನಲ್ಲಿ ಹಣ ಡೆಪಾಸಿಟ್ ಮಾಡುವಂತೆ ತಿಳಿಸಿ ವಂಚಿಸಿದ ಘಟನೆ ನಡೆದಿದೆ.
ಹೊಟೇಲ್ ಕೆಲಸ ಮಾಡಿಕೊಂಡಿರುವ ಸಂದೀಪ್ ಕುಮಾರ್ ಅವರಿಗೆ ಎ.4ರಂದು ಟೆಲಿಗ್ರಾಮ್ ಆ್ಯಪ್ ನಲ್ಲಿ ಟ್ರೇಡಿಂಗ್ ವ್ಯವಹಾರದ ಬಗ್ಗೆ ಅನಾಮಧೇಯ ಲಿಂಕ್ ಬಂದಿದ್ದು, ಅದಕ್ಕೆ ಹಣವನ್ನು ಡಿಪಾಸಿಟ್ ಮಾಡುವಂತೆ ತಿಳಿಸಲಾಗಿತ್ತು. ಆ ಸಮಯದಲ್ಲಿ ಅವರು ಹಾಕಿದ ಹಣ ಹಿಂತಿರುಗಿ ಬಂದಿತ್ತು. ಇದನ್ನು ನಂಬಿದ ಅವರು ತನ್ನ ಕರ್ಣಾಟಕ ಬ್ಯಾಂಕ್ ರಾಜರಾಜೇಶ್ವರಿ ನಗರ ಶಾಖೆಯ ಎಸ್.ಬಿ.ಖಾತೆ ಯಿಂದ ಹಂತಹಂತವಾಗಿ ಒಟ್ಟು 4,20,341ರೂ.ಗಳನ್ನು ಆರೋಪಿ ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದರು. ಯಾರೋ ಅಪರಿಚಿತ ವ್ಯಕ್ತಿಗಳು ಟೆಲಿಗ್ರಾಮ್ ಆ್ಯಪ್‌ನಲ್ಲಿ ಟ್ರೇಂಡಿಂಗ್ ವ್ಯವಹಾರ ಎಂದು ನಂಬಿಸಿ ಅವರಿಗೆ ವಂಚಿಸಿದ್ದಾರೆ. ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.