ಕಬ್ಬಿನ FRP ದರ ಕ್ವಿಂಟಲ್ಗೆ 10 ರೂ. ಹೆಚ್ಚಳ
Team Udayavani, Jun 29, 2023, 7:12 AM IST
ನವದೆಹಲಿ: ಕರ್ನಾಟಕ ಸೇರಿದಂತೆ ದೇಶದ ಕಬ್ಬು ಬೆಳೆಗಾರರಿಗೆ ಸಂತೋಷದಾಯಕ ಸುದ್ದಿಯನ್ನು ಕೇಂದ್ರ ಸಂಪುಟ ನೀಡಿದೆ. ಲಾಭದಾಯಕ ಮತ್ತು ನ್ಯಾಯೋಚಿತ ದರ (ಎಫ್ಆರ್ಪಿ)ವನ್ನು ಪ್ರತಿ ಕ್ವಿಂಟಲ್ಗೆ 10 ರೂ. ಹೆಚ್ಚಳ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದಾಗಿ ಪ್ರತಿ ಕ್ವಿಂಟಲ್ ಕಬ್ಬಿಗೆ 315 ರೂ. ಸಿಗಲಿದ್ದು, ಅಕ್ಟೋಬರ್ನಿಂದ ಶುರುವಾಗುವ 2023-24ನೇ ಬೆಳೆ ಹಂಗಾಮಿಗೆ ಅನ್ವಯವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳಿಗಾಗಿನ ಕೇಂದ್ರ ಸಂಪುಟ ಸಮಿತಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. 2022-23ನೇ ಸಾಲಿಗೆ ಹೋಲಿಕೆ ಮಾಡಿದರೆ ದರ ಏರಿಕೆ ಪ್ರಮಾಣ ಶೇ. 3.28 ಹೆಚ್ಚಾಗಿದೆ. ಕಳೆದ ವರ್ಷ ಪ್ರತಿ ಕ್ವಿಂಟಲ್ಗೆ 305 ರೂ. ನಿಗದಿ ಮಾಡಲಾದ್ದರೆ, 2014-15ನೇ ಸಾಲಿನಲ್ಲಿ 210 ರೂ. ಇತ್ತು ಎಂದರು. 2022-23ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳಿಂದ 1,11,366 ಕೋಟಿ ರೂ. ಮೌಲ್ಯದ ಕಬ್ಬನ್ನು ಖರೀದಿ ಮಾಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.