![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, May 8, 2023, 8:01 AM IST
ಲಂಡನ್: ಪ್ರಪಂಚದ ಯಾವುದೇ ದೇಶದಲ್ಲೂ ಭಾರತದಲ್ಲಿರುವಂತೆ ಮುಕ್ತ ಅಭಿವ್ಯಕ್ತಿ ಸ್ವಾತಂ ತ್ರ್ಯವಿಲ್ಲ. ಭಾರತದಲ್ಲಿನ ಪ್ರಜಾಸತ್ತೆಗೆ ಯಾವುದೇ ಕಡಿವಾಣವೂ ಇಲ್ಲ. ದೇಶದಲ್ಲಿನ ಪ್ರಜಾಸತ್ತಾತ್ಮಕ ಮೌಲ್ಯಗಳು ಹಿಂದೆಂದಿಗಿಂತಲೂ ಈಗ ಬಲಿಷ್ಠವಾಗಿವೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಲಂಡನ್‌ನಲ್ಲಿ ಹೇಳಿದ್ದಾರೆ.
ಬ್ರಿಟನ್ ದೊರೆಯಾಗಿ ಮೂರನೇ ಚಾರ್ಲ್ಸ್ ಪಟ್ಟಾಭಿಷಿಕ್ತರಾದ ಕಾರ್ಯಕ್ರಮದಲ್ಲಿ ಧನ್‌ಕರ್ ಪಾಲ್ಗೊಂಡಿದ್ದರು. ಈ ವೇಳೆ ಬ್ರಿಟನ್‌ನಿಂದ ವಾಪಸಾಗುವ ಮುನ್ನ ಭಾರತೀಯ ಹೈಕಮಿಷನ್ ವತಿಯಿಂದ ಆಯೋಜಿಸಲಾಗಿದ್ದ ಭಾರತೀಯ ಮೂಲದ ಬ್ರಿಟನ್ನಿಗರೊಂದಿಗಿನ ಸಂವಾದ ನಡೆಸಿದರು.
ಬ್ರಿಟನ್‌ನಲ್ಲಿರುವ ಭಾರತೀಯ ಮೂಲದ ಪ್ರಜೆಗಳ ಮಹತ್ತರ ಪಾತ್ರವನ್ನುದ್ದೇಶಿಸಿ ಮಾತನಾಡಿದ ಅವರು ಬ್ರಿಟನ್ ವಿ.ವಿ.ಗಳಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಭಾರತೀಯ ವಿದ್ಯಾ ರ್ಥಿಗಳು ಮತ್ತು ಅವರ ಸಾಧನೆಗಳ ಬಗ್ಗೆ ದೇಶ ಹಮ್ಮೆಪಡು ತ್ತದೆ. ಭಾರತದ ಸದ್ಭಾವನ ರಾಯ ಭಾರಿಗಳಾಗಿ ನೀವೇ ಕಾರ್ಯನಿರ್ವಹಿಸಬೇಕಿದ್ದು, ಭಾರತದ ಬಗ್ಗೆಗಿನ ವದಂತಿಗಳಿಗೆ ಸ್ಪಷ್ಟವಾದ ಉತ್ತರ ನೀಡಿ ಎಂದು ಧನ್‌ಕರ್ ಕರೆ ನೀಡಿದ್ದಾರೆ.
ಜತೆಗೆ ಭಾರತ ಇಂದು ಜಾಗತಿಕ ಸಮಸ್ಯೆ ಗಳನ್ನು ತನ್ನದೇ ನಿಲುವಿನಲ್ಲಿ ಪರಿಹರಿಸುವಷ್ಟು ಸಮರ್ಥವಾಗಿದೆ. ವಿಶ್ವದಲ್ಲೇ ಅತ್ಯಂತ ಪ್ರಸಿದ್ಧ ರಾಷ್ಟ್ರವಾಗಿದೆ. ನಮ್ಮ ದೇಶದ ವಾಸ್ತವ ಸ್ಥಿತಿಯನ್ನು ತಿರುಚುವಂಥ ಹೇಳಿಕೆಗಳ ವಿರುದ್ಧ ಧ್ವನಿ ಎತ್ತರಿಸಿ, ಭಾರತದಲ್ಲಿನ ನಿಜವಾದ ಸ್ವಾತಂತ್ರ್ಯವನ್ನು, ಗೌರವನ್ನು ಎತ್ತಿ ಹಿಡಿಯುವ ಜವಾಬ್ದಾರಿ ವಿದ್ಯಾರ್ಥಿಗಳದ್ದು ಎಂದೂ ಮನವರಿಕೆ ಮಾಡಿಸಿದ್ದಾರೆ.
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
You seem to have an Ad Blocker on.
To continue reading, please turn it off or whitelist Udayavani.