ಕನ್ನಡಕ್ಕಾಗಿಯೇ ಜೀವಿಸಿದ ಜಿ. ವೆಂಕಟಸುಬ್ಬಯ್ಯ


Team Udayavani, Apr 20, 2021, 6:50 AM IST

ಕನ್ನಡಕ್ಕಾಗಿಯೇ ಜೀವಿಸಿದ ಜಿ. ವೆಂಕಟಸುಬ್ಬಯ್ಯ

ವಿದ್ಯೆ, ವಿದ್ವತ್ತು, ವಿನಯ, ವಿನೋದಪ್ರಜ್ಞೆ, ಸೃಜನಶೀಲ ಪ್ರತಿಭೆ, ಕನ್ನಡದ ಪ್ರೀತಿ ಮತ್ತು ಮನುಷ್ಯ ಪ್ರೀತಿ- ಇವೆಲ್ಲವನ್ನೂ ಮೈಯ ಕಣಕಣದಲ್ಲೂ ತುಂಬಿಕೊಂಡಿದ್ದವರು ಪ್ರೊ| ಜಿ. ವೆಂಕಟಸುಬ್ಬಯ್ಯ. ಜಿ.ವಿ. ಎಂಬ ಎರಡಕ್ಷರದಿಂದಲೇ ಖ್ಯಾತರಾಗಿದ್ದ ಅವರು, ಈ ಶತಮಾನ ಕಂಡ ಶ್ರೇಷ್ಠ ವಿದ್ವಾಂಸರು. ಕನ್ನಡದಲ್ಲಿ ಯಾವುದಾದರೂ ಒಂದು ಪದಕ್ಕೆ ಅರ್ಥ ಹೊಳೆಯಲಿಲ್ಲ ಅಂದರೆ, ಪಾಮರರ ಮಾತು ಬಿಡಿ, ಪಂಡಿತರು ಕೂಡ ಎಡತಾಕುತ್ತಿದ್ದುದು ಜಿ.ವಿ. ಅವರನ್ನೇ.

ಶ್ರೀರಂಗಪಟ್ಟಣದ ಬಳಿಯ ಗಂಜಾಂ, ಜಿ.ವಿ ಯವರ ಹುಟ್ಟೂರು. ತಂದೆ ತಿಮ್ಮಣ್ಣಯ್ಯ, ಮೈಸೂರಿನ ಅರಮನೆ ವಿದ್ವಾಂಸರು. ಕನ್ನಡ- ಸಂಸ್ಕೃತದಲ್ಲಿ ಅವರಿಗೆ ಅಪಾರ ತಿಳಿವಳಿಕೆಯಿತ್ತು. ಪುರಾಣಗಳನ್ನು, ಅದರೊಂದಿಗೇ ಬೆರೆತುಹೋಗಿದ್ದ ಉಪಕಥೆಗಳನ್ನು ತಿಳಿಯುವುದರಲ್ಲಿ ಆಸಕ್ತಿಯಿತ್ತು. ಈ ಗುಣಗಳು ತಂದೆಯ ಮೂಲಕ ಜಿ.ವಿ. ಅವರಿಗೂ ಬಂದವು. ಮುಂದೆ ಕನ್ನಡದಲ್ಲಿ ಎಂ. ಎ ಮುಗಿಸಿದಾಗ ಜಿ. ವಿ. ಅವರಿಗೆ ಮೌಖೀಕ ಪರೀಕ್ಷೆ ಮಾಡಿದ ಬಿ. ಎಂ. ಶ್ರೀ- “ನಮಗೆ ವಯಸ್ಸಾಯಿತು. ಕನ್ನಡವನ್ನು ನಿಮ್ಮ ಕೈಯ್ಯಲ್ಲಿ ಇಟ್ಟಿದ್ದೇವೆ. ಅದನ್ನು ಕಾಪಾಡಿ…’ ಎಂದರಂತೆ. ಈ ಮಾತು, ಜಿ. ವಿ. ಅವರ ಮೇಲೆ ಅಗಾಧ ಪರಿಣಾಮ ಬೀರಿತು. ಕನ್ನಡವನ್ನು ಉಳಿಸಿ, ಬೆಳೆಸುವ ಕಾಯಕವೇ ತಮ್ಮ ಬದುಕಿನ ಮುಖ್ಯ ಗುರಿ ಎಂದು ಅವತ್ತೇ ನಿಶ್ಚಯಿಸಿದರು ಜಿ.ವಿ.

ಕನ್ನಡದ ಪದಗಳಿಗೆ ಅರ್ಥ ಹುಡುಕುವುದು, ಪದಮೂಲ ಕಂಡುಹಿಡಿಯುವುದು, ನಿಘಂಟು ರಚನೆಯ ಕೆಲಸದಲ್ಲಿ ಮೈಮರೆಯುವುದನ್ನು ದಶಕಗಳ ಕಾಲ ಮಾಡಿದವರು ಜಿ.ವಿ. ಒಂದು ರೀತಿಯಲ್ಲಿ ಇದು ಯಾರೂ ಗುರುತಿಸದ ಕೆಲಸ. ಅದಕ್ಕಾಗಿ ಜಿ.ವಿ ಬೇಸರಿಸಲಿಲ್ಲ. ಕನ್ನಡದ ಕೆಲಸವನ್ನು ನಾನು ಆತ್ಮ ತೃಪ್ತಿಗೆ ಮತ್ತು ಮನಸ್ಸಂತೋಷಕ್ಕೆ ಮಾಡ್ತೇನೆ. ಅದನ್ನು ಯಾರಾದರೂ ಗುರುತಿಸಲಿ, ಹೊಗಳಲಿ ಎಂದು ಯಾಕೆ ಬಯಸಬೇಕು? ಮನೆಯ ಕೆಲಸ ಮಾಡುವಾಗ ಯಾರಾದರೂ ನಮ್ಮನ್ನು ಮೆಚ್ಚಲಿ ಅಂತ ಮಾಡ್ತೇವಾ ? ಇಲ್ಲ ತಾನೇ, ಕನ್ನಡದ ಕೆಲಸವೂ ಹಾಗೆಯೇ ಅನ್ನುತ್ತಿದ್ದರು.

1944ರಿಂದಲೂ ಶಬ್ದ ಸಂಗ್ರಹ, ವಿಶ್ಲೇಷಣೆ ಮಾಡುತ್ತಾ ಬಂದವರು ಜಿ.ವಿ. ತತ#ಲವಾಗಿ, ನಿಘಂಟಿನಲ್ಲಿ ಪದಸಂಗ್ರಹದ ಸಂಖ್ಯೆ ಹೆಚ್ಚಿತು.ಮಾತ್ರವಲ್ಲ, ಎರವಲು ಪದಕೋಶ ಎಂಬ ಮತ್ತೂಂದು ಗ್ರಂಥವೂ ಸಿಕ್ಕಿತು. ಶಬ್ದ ಸಂಗ್ರಹವೆಂದರೆ ರೂಪಾಯಿ ಜೋಡಿಸಿದಂತೆ ಅಲ್ಲ. ಒಂದು ಶಬ್ದ ಎಲ್ಲಿ ಹುಟ್ಟಿತು? ಏಕೆ ಹುಟ್ಟಿತು? ಅದರ ಮೊದಲ ಪ್ರಯೋಗ ಎಲ್ಲಿ ಯಾವಾಗ ಆಯಿತು? ಆ ಪದ ಕಾಲಕಾಲಕ್ಕೆ ಹೇಗೆಲ್ಲ ಬದಲಾಯಿತು? ಯಾವ ಶಬ್ದ ಕನ್ನಡಕ್ಕೆ ಎಲ್ಲಿಂದ ಬಂದಿದೆ, ಅದರ ಮೂಲರೂಪವೇನು? ಯಾವ ಯಾವ ಕಾವ್ಯಗಳಲ್ಲಿ, ಗ್ರಂಥದಲ್ಲಿ ಆ ಪದ ಬಳಕೆಯಾಗಿದೆ? ಎಂಬುದನ್ನೆಲ್ಲ ತಿಳಿಯಬೇಕು. ಹೀಗೆ ತಿಳಿಯಬೇಕೆಂದರೆ ಅಪಾರ ತಾಳ್ಮೆ ಬೇಕು. ಮಾತ್ರವಲ್ಲ, ಕನ್ನಡದ ಜತೆಗೆ ಇಂಗ್ಲಿಷ್‌, ಹಿಂದಿ, ಮರಾಠಿ, ಉರ್ದು, ತೆಲುಗು, ತಮಿಳು, ಮಲಯಾಳ, ಅರಬಿ, ಪಾರ್ಶಿ, ಸಿಂಧಿ ಭಾಷೆಗಳಲ್ಲಿನ ಅರ್ಥವಿವರಣೆ ಯನ್ನೂ ತಡಕಾಡಬೇಕು. ಈ ಕೆಲಸವನ್ನು ಒಂದು ತಪಸ್ಸಿನಂತೆ ನಿರ್ವಹಿಸಿಕೊಂಡು ಬಂದವರು ಜಿ.ವಿ. ಈ ಕಾಯಕದ ಜತೆ ವಿಮರ್ಶೆ, ಚರಿತ್ರೆ, ಜೀವನ ಚರಿತ್ರೆ, ವ್ಯಕ್ತಿ ಚಿತ್ರ, ಮಕ್ಕಳ ಸಾಹಿತ್ಯ, ಅನುವಾದ, ಸಂಶೋಧನೆ ಪ್ರಕಾರಗಳಲ್ಲಿ ಗ್ರಂಥಗಳನ್ನು ಬರೆದು ಪ್ರಕಟಿಸಿದರು.

ಆ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತ ಗೊಳಿಸಿದರು. ಮಾಸದ ಮುಗುಳ್ನಗೆ, ಮಗುವಿನ ಮುಗ್ಧತೆ ಮತ್ತು ಯುವಕನ ಕುತೂಹಲದೊಂದಿಗೇ ಬದುಕಿದವರು ಜಿ.ವಿ. ನೂರು ವರ್ಷ ದಾಟಿದ ಅನಂತರವೂ ಅವರು 20ರ ಹುಡುಗನ ಲವಲವಿಕೆಯನ್ನು ಉಳಿಸಿಕೊಂಡಿದ್ದರು. ಕನ್ನಡದ ಕೆಲಸವನ್ನು ಯಾರೇ ಮಾಡಿದರೂ ಅವರ ಬೆನ್ನು ತಟ್ಟುವುದು ಅವರ ಇಷ್ಟದ ಕೆಲಸವಾಗಿತ್ತು. “ಒಂದು ಕೃತಿಯ ಬಗ್ಗೆ ಅಭಿಪ್ರಾಯ ತಿಳಿಸುವುದು, ಒಂದು ಕೃತಿಯ ಬಗ್ಗೆ ನಾಲ್ಕು ಮಾತು ಬರೆಯುವುದು ಕೂಡ ಕನ್ನಡವನ್ನು ಕಟ್ಟುವ ಕೆಲಸವೇ. ಅದನ್ನು ನಾನು ಶ್ರದ್ಧೆಯಿಂದ ಮಾಡುತ್ತೇನೆ’ ಅನ್ನುತ್ತಿದ್ದರು.

ನಿಮ್ಮ ದೀರ್ಘಾಯುಷ್ಯದ ಗುಟ್ಟೇನು? ಎಂಬುದು ಅವರಿಗೆ ಮೇಲಿಂದ ಮೇಲೆ ಎದುರಾಗುತ್ತಿದ್ದ ಪ್ರಶ್ನೆ. ಆಗೆಲ್ಲ ಜಿ.ವಿ. ಒಂದು ತುಂಟ ನಗೆಯೊಂದಿಗೆ ಹೀಗೆನ್ನುತ್ತಿದ್ದರು: “ನನ್ನ ದೀರ್ಘಾಯುಷ್ಯದ ಗುಟ್ಟು ಏನು ಎಂಬುದು ನನಗೆ ಗೊತ್ತಿಲ್ಲ. ಆದರೆ ನನ್ನ ಆರೋಗ್ಯದ ಗುಟ್ಟು ಮಾತ್ರ ಗೊತ್ತು. ಅದೇನೆಂದರೆ- ನಾನು ಯಾವುದೇ ವಿಚಾರಕ್ಕೆ, ಯಾರ ಬಗ್ಗೆಯೇ ಆಗಲಿ ಹೊಟ್ಟೆಕಿಚ್ಚು ಪಡುವ ಸ್ವಭಾವ ಹೊಂದಿಲ್ಲ. ಆದುದರಿಂದ ಸದಾ ಆನಂದವಾಗಿ ಇರುತ್ತೇನೆ. ಈ ಕಾರಣದಿಂದಲೇ ಇದುವರೆಗೂ ಸಂತೋಷದಿಂದ ಬದುಕಲು ಸಾಧ್ಯವಾಗಿದೆ…’

ಬೌತಿಕವಾಗಿ ಜಿ.ವಿ. ಅವರು ನಮ್ಮೊಂದಿಗಿಲ್ಲ ನಿಜ. ಆದರೆ ನಿಘಂಟು ಬ್ರಹ್ಮ, ಕನ್ನಡದ ಕಿಟ್ಟೆಲ್‌- ಎಂಬ ಪದಗಳು ಕಿವಿಗೆ ಬಿದ್ದಾಗಲೆಲ್ಲ ಜಿ.ವಿ. ಅವರೂ ಅವರ ಮಾಸದ ಮುಗುಳ್ನಗೆಯೂ ನೆನಪಾಗುತ್ತಲೇ ಇರುತ್ತದೆ.

ಟಾಪ್ ನ್ಯೂಸ್

2-muddebihala

Muddebihal: ಟ್ರ್ಯಾಕ್ಟರ್-ಟ್ರೇಲರ್‌ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು

Shiggavi-candidate

By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್‌ ಪಠಾಣಗೋ?

Kalinga-King-cobra

King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!

Mysuru-Nirmala

Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’

DKS–HDD-HDK

By Election: ಚನ್ನಪಟ್ಟಣದಲ್ಲಿ ಎಚ್‌.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್‌ ಮೇಕೆದಾಟು ಜಟಾಪಟಿ

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Paper-Reader

Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Air-Delhi

Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ‌ ಇಚ್ಛಾಶಕ್ತಿ ಪ್ರದರ್ಶಿಸಲಿ

PM-yojana

Education: ಪಿಎಂ ವಿದ್ಯಾಲಕ್ಷ್ಮೀ ಯೋಜನೆ ಬಡ ಪ್ರತಿಭಾನ್ವಿತರಿಗೆ ವರದಾನ

supreme-Court

Supreme Court: ಖಾಸಗಿ ಸಂಪನ್ಮೂಲ ಸ್ವಾಧೀನ ಸುಪ್ರೀಂ ತೀರ್ಪು ಸಮತೋಲಿತ

Canada

Canada Temple Attack: ಕೆನಡಾ ದೇಗುಲ ದಾಳಿ: ಜಾಗತಿಕ ವಿರೋಧ ಪ್ರತಿಧ್ವನಿಸಲಿ

Flight

Hoax Call: ಹುಸಿ ಬಾಂಬ್‌ ಬೆದರಿಕೆ ಮರುಕಳಿಸದಿರಲಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

2-muddebihala

Muddebihal: ಟ್ರ್ಯಾಕ್ಟರ್-ಟ್ರೇಲರ್‌ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು

Shiggavi-candidate

By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್‌ ಪಠಾಣಗೋ?

Kalinga-King-cobra

King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!

Mysuru-Nirmala

Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’

DKS–HDD-HDK

By Election: ಚನ್ನಪಟ್ಟಣದಲ್ಲಿ ಎಚ್‌.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್‌ ಮೇಕೆದಾಟು ಜಟಾಪಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.