![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Jun 24, 2023, 6:33 AM IST
1930ರ ಆರಂಭದಲ್ಲಿ ಬ್ರಿಟಿಷ್ ಸರಕಾರ ಆಂತರಿಕ ಅರೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ಆಗಿನ ಮೀಸಲಾತಿಯಂತೆ ಮುಸ್ಲಿಮ್ ಅಭ್ಯರ್ಥಿಗಳನ್ನು ಮುಸ್ಲಿಮರು, ಕ್ರೈಸ್ತ ಅಭ್ಯರ್ಥಿಗಳನ್ನು ಕ್ರೈಸ್ತರು ಆರಿಸಿ ಕೊಳ್ಳುವಂತೆ, ದಲಿತ ಅಭ್ಯರ್ಥಿಗಳನ್ನು ದಲಿತರು ಆಯ್ಕೆ ಮಾಡುವ ಮತ ಕ್ಷೇತ್ರದ ಪ್ರಸ್ತಾವವಿತ್ತು. ಇವು ಬಿಟ್ಟರೆ ಉಳಿದ ಮತಕ್ಷೇತ್ರಗಳಲ್ಲಿ ಹಿಂದೂ ಮತ ದಾರರು ಹಿಂದೂ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ.
ದಲಿತರನ್ನು ದಲಿತರೇ ಆಯ್ಕೆ ಮಾಡುವ ಪ್ರತ್ಯೇಕ ಕ್ಷೇತ್ರದ ಬದಲು ಗಾಂಧೀಜಿಯವರು ದಲಿತರು ಹಿಂದೂ ಗಳ ಮತ ಕ್ಷೇತ್ರದ ಜತೆ ಪಾಲ್ಗೊಳ್ಳುವ ಪರವಿದ್ದರು. ದಲಿತ ಮತದಾರರು ದಲಿತ ಅಭ್ಯರ್ಥಿಗಳನ್ನೇ ಆಯ್ಕೆ ಮಾಡು ವುದಕ್ಕೆ ಡಾ| ಅಂಬೇಡ್ಕರ್ ಬೇಡಿಕೆ ಸಲ್ಲಿಸಿದ್ದರು. ಸರಕಾರ ದಲಿತ ಮತ ಕ್ಷೇತ್ರದ ಅಧಿಸೂಚನೆ ಹೊರಡಿಸಿದಾಗ ಇದರ ವಿರುದ್ಧ ಗಾಂಧೀಜಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಕಾಂಗ್ರೆಸ್ ನಾಯಕರು ಅಂಬೇಡ್ಕರ್ ಅವರನ್ನು ಭೇಟಿಯಾಗಿ “ಮಹಾತ್ಮರ ಜೀವಕ್ಕೆ ಅಪಾಯವಿದೆ.
ನೀವೇನಾದರೂ ಮ ನಸ್ಸು ಮಾಡಿ ರಾಜಿಯಾಗಬೇಕು’ ಎಂದಾಗ ಅಂಬೇಡ್ಕರ್ “ಅನೇಕ ಮಹಾ ತ್ಮರು ಹುಟ್ಟಿಹೋಗಿದ್ದಾರೆ. ಈ ಮಹಾ ತ್ಮರು ಹೋದರೆ ಇನ್ನಷ್ಟು ಮಹಾ ತ್ಮರು ಹುಟ್ಟುತ್ತಾರೆ. ಈ ಮಹಾತ್ಮರೆಲ್ಲರೂ ನಮ್ಮ ದಲಿತರಿಗೆ ಏನು ಮಾಡಿದ್ದಾರೆ?’ ಎಂದು ಆಕ್ರೋಶ ಹೊರಹಾಕಿದರು. ಕಾಂಗ್ರೆಸ್‌ನವರು “ದಲಿತರಿಗೆ 71 ಸ್ಥಾನ ಮೀಸಲಾತಿ ಕೊಡುವ ಬದಲು ಅದರ ಎರಡು ಪಾಲು ಕ್ಷೇತ್ರದಲ್ಲಿ ನಾವೇ ದಲಿತ ರಿಗೆ ಅವಕಾಶ ಮಾಡಿಕೊಡುತ್ತೇವೆ’ ಎಂದರು.
ದಲಿತರಿಗಿಂತ ಹೆಚ್ಚು ಸಂಖ್ಯೆಯ ಮತದಾರರ ಋಣದಲ್ಲಿ ದಲಿತ ಅಭ್ಯರ್ಥಿ ಇದ್ದರೆ ದಲಿತರು ಹೇಗೆ ಉದ್ಧಾರವಾಗಬಲ್ಲರು ಎಂಬುದು ಅಂಬೇಡ್ಕರ್ ವಾದವಾಗಿತ್ತು. ಆ ಕಾಲ ದಲ್ಲಿ ಪರಿಸ್ಥಿತಿ ಹೇಗಿತ್ತೆಂದರೆ ಗಾಂಧೀ ಜಿಯವರೆಂದರೆ ಭಾರತ ಎಂಬ ಹವಾ ಇತ್ತು. ಅಂತಹ ಬಲಿಷ್ಠ ನೇತಾಜಿ ಸುಭಾ ಶ್ಚಂದ್ರ ಬೋಸರು ಸಹ ಕಾಂಗ್ರೆಸ್ ಅಧ್ಯ ಕ್ಷರಾಗಿ ಬಹುಮತದಿಂದ ಆಯ್ಕೆ ಯಾದರೂ ಗಾಂಧೀಜಿ ಬೆಂಬಲವಿಲ್ಲದೆ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡ ಬೇಕಾಗಿ ಬರಬೇಕಾದರೆ “ಗಾಂಧಿ ಹವಾ’ ಹೇಗಿದ್ದಿರಬಹುದು ಎಂದು ಯೋಚಿಸಿ. ಇಂತಹುದೇ ಕಾರಣಕ್ಕೆ ಡಾ|ಅಂಬೇಡ್ಕರ್ ಗಾಂಧೀಜಿಯವರನ್ನು ಕಟುವಾಗಿ ಟೀಕಿಸಿ ಕೊನೆಗೂ ಒಪ್ಪಿಕೊಂಡರೆಂ ಬುದನ್ನು ಇತಿಹಾಸ ಪ್ರಾಧ್ಯಾಪಕ ಡಾ| ರಾಮದಾಸ ಪ್ರಭು ಬೆಟ್ಟು ಮಾಡುತ್ತಾರೆ.
ಸಂವಿಧಾನ ಕರಡು ಸಮಿತಿಯ ಅಧ್ಯಕ್ಷತೆಗೆ ಒಬ್ಬರ ಹೆಸರು ಸೂಚಿಸಲು ಗಾಂಧೀಜಿಯವರು ಜವಾಹರಲಾಲ್ ನೆಹರೂ ಅವರಿಗೆ ಕೋರಿದರು. ನೆಹರೂ ಅವರು ಬ್ರಿಟಿಷ್ ಸಂವಿಧಾನ ತಜ್ಞ ಐವರ್ ಜೆನ್ನಿಂಗ್ಸ್ ಹೆಸರನ್ನು ಶಿಫಾರಸು ಮಾಡಿದರು. ಅಂಬೇಡ್ಕರ್ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳದ ಕಾರಣ ನೆಹರೂ ಪ್ರಸ್ತಾವಿಸಲಿಲ್ಲ ಎಂಬ ವಾದವಿದೆ. ತಾನು ಮಾಡಿದ ಶಿಫಾ ರಸನ್ನೇ ಗಾಂಧೀಜಿ ಒಪ್ಪಿಕೊ ಳ್ಳುತ್ತಾರೆಂದು ನೆಹರೂ ಸಹ ಅಂದು ಕೊಂಡಿದ್ದರು. ಆದರೆ ಗಾಂಧೀಜಿ ಜೆನ್ನಿಂಗ್ಸ್ ಹೆಸರನ್ನು ತಿರಸ್ಕರಿಸಿ ಅಂಬೇ ಡ್ಕರ್ ಅವರೇ ಆ ಸ್ಥಾನಕ್ಕೆ ಯೋಗ್ಯರು ಎಂದು ಸೂಚಿಸಿದರು ಎಂಬುದನ್ನು ಅಂಬೇಡ್ಕರ್ ಕುರಿತಾದ ಇಂಗ್ಲಿಷ್ ಪುಸ್ತಕ ದಲ್ಲಿ ತಮಿಳುನಾಡಿನ ಹಿರಿಯ ರಾಜಕಾ ರಣಿ ಡಾ| ಎಚ್.ವಿ.ಹಂದೆ (95 ವರ್ಷ, ಚೆನ್ನೈಯಲ್ಲಿದ್ದಾರೆ.) ಉಲ್ಲೇಖೀಸಿದ್ದಾರೆ. ಈ ಪುಸ್ತಕವನ್ನು ಮದ್ರಾಸ್ ವಿ.ವಿ. ಕನ್ನಡ ವಿಭಾಗ ಮುಖ್ಯಸ್ಥರಾಗಿದ್ದ ಪ್ರೊ| ಶ್ರೀಕೃಷ್ಣ ಭಟ್ ಅರ್ತಿಕಜೆ ಅನುವಾದಿಸಿದ್ದಾರೆ.
ಇಲ್ಲಿ ಎರಡು ಚಿಂತನೆಗಳು ವಿಶ್ಲೇಷಣೆ ಯೋಗ್ಯ. “ಸ್ವಾತಂತ್ರ್ಯ ಯಾರಿಗೆ? ನಾವು ಅಸ್ಪೃಶ್ಯರು. ನಮಗೆ ಭೂಮಿಯ ಹಕ್ಕೇ ಇಲ್ಲ. ನಮಗೆ ದೇಶವೇ ಇಲ್ಲ ದಿದ್ದ ಮೇಲೆ ಸ್ವಾತಂತ್ರ್ಯ ಯಾರಿಗೆ?’ ಎಂಬ ಪ್ರಶ್ನೆ ಅಂಬೇಡ್ಕರ್ ಅವರ ದ್ದಾಗಿತ್ತು. “ಭಾರತದ ಸಂವಿಧಾನದ ರಚನೆಗೆ ಬ್ರಿಟಿಷ್ ಪ್ರಜೆ ಏಕೆ? ಆತ ಅಲ್ಲಿನ ಸಂವಿಧಾನ ತಜ್ಞ ಇರಬಹುದು. ಭಾರತದ ಸಂವಿಧಾನ ರಚನೆ ಸಮಿತಿಗೆ ಭಾರತೀಯರೇ ಆಗಬೇಕು. ನಮ್ಮವರೇ ಆದ ಅಂಬೇಡ್ಕರ್ ತಜ್ಞರಿರುವಾಗ ಅವರೇ ಅಧ್ಯಕ್ಷರಾಗಲಿ’ ಎಂದವರು ಗಾಂಧೀಜಿ.
ಇಲ್ಲಿ ಎಲ್ಲರ ವಾದದಲ್ಲಿಯೂ ಹುರು ಳಿದೆ. ಆದರೆ “ನ್ಯಾಯಾಧೀಶ’ನ ಸ್ಥಾನ ದಲ್ಲಿ ಯೋಚಿಸುವಾಗ ಎಲ್ಲ ಪೂರ್ವ ಗ್ರಹಗಳನ್ನು ಬದಿಗೊತ್ತಿ ತೀರ್ಪು ಕೊಡ ಬೇಕು. ಆಗಲೇ ಅದು “ನ್ಯಾಯತೀರ್ಪು’ ಎಂದೆನಿಸುತ್ತದೆ. ತೀರ್ಪುಗಳೆಂದರೆ ಕೇವಲ ನ್ಯಾಯಾಲಯದಲ್ಲಿ ಹೊರ ಬಂದುದು ಮಾತ್ರವಲ್ಲ, ನಮ್ಮೆಲ್ಲ ಹೇಳಿಕೆ ಗಳೂ “ನ್ಯಾಯತೀರ್ಪು’ ಆಗಬೇಕು, ಮಾತುಗಳಿಗೆ ಮೌಲ್ಯ ಬರುವುದು ಆಗ.
ನುಡಿದರೆ ಮುತ್ತಿನ ಹಾರದಂತಿರಬೇಕು|
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು|
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು|
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು|
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲಸಂಗಮದೇವ
ನೆಂತೊಲಿವನಯ್ಯ?
ಎಂದು ಬಸವಣ್ಣನವರು ಹೇಳಿದ್ದಾರಲ್ಲ?
ಕರಡು ಸಮಿತಿಯು 2 ವರ್ಷ 11 ತಿಂಗಳು 18 ದಿನಗಳಲ್ಲಿ ಸಂವಿಧಾನ ಸಿದ್ಧ ಪಡಿಸಿತು. ಈ ಸಭೆಯಲ್ಲಿ ಸಮಿತಿ ಸದಸ್ಯ ರಾಗಿದ್ದ ಬ್ರಹ್ಮಾವರ ಪೇತ್ರಿ ಸಮೀಪದ ಬೆನಗಲ್ ಮೂಲದ ನರಸಿಂಗ ರಾವ್ ಅವರ ಕೊಡು ಗೆಯನ್ನು ಅಧ್ಯಕ್ಷ ಡಾ| ಅಂಬೇಡ್ಕರ್ ಮುಕ್ತಕಂಠದಿಂದ ಶ್ಲಾ ಸಿದ್ದರು. ಈ ಸಂವಿಧಾನವು ಪ್ರಪಂಚದಲ್ಲಿ ಅತೀ ದೊಡ್ಡದು ಮತ್ತು ಲಿಖೀತ ರೂಪದ್ದು. ಇದನ್ನು 1950ರ ಜ. 26ರಂದು ಅಂಗೀ ಕರಿಸಲಾಯಿತು.
ಇದಾದ ಬಳಿಕ ಮದ್ರಾಸ್ ವಿ.ವಿ.ಯಲ್ಲಿ ಐವರ್ ಜೆನ್ನಿಂಗ್ಸ್ ಅವರು ನೀಡಿದ ಭಾಷಣದಲ್ಲಿ ತನಗೆ ಸಿಕ್ಕಿದ ಅವ ಕಾಶ ಕೈತಪ್ಪಿ ಹೋದುದಕ್ಕೋ ಎಂಬಂತೆ ಭಾರತದ ಒಕ್ಕೂ ಟ ವ್ಯವಸ್ಥೆಯ ಬಗೆಗೆ ವ್ಯಂಗ್ಯವಾಡಿದ್ದರು. ಈ ಸಂವಿಧಾನವು ತುಂಬಾ ಸಂಕೀರ್ಣವಾಗಿದ್ದು ಪಾಶ್ಚಾತ್ಯ ಸಾಧನಗಳ ಓರಿಯಂಟಲೈಸೇಶನ್. ಈ ಸಂವಿಧಾನ ಪರಿಣಾಮಕಾರಿಯಲ್ಲ ಎಂದೂ ಹೇಳಿದ್ದರು. ಜೆನ್ನಿಂಗ್ಸ್ ಅನೇಕ ದೇಶಗಳ ಸಂವಿಧಾನ ರಚನೆಯಲ್ಲಿ ಪಾಲ್ಗೊಂಡಿದ್ದರು. ಶ್ರೀಲಂಕಾದ ಸಂವಿ ಧಾನವನ್ನು ಜೆನ್ನಿಂಗ್ಸ್ 1955ರಲ್ಲಿ ಸಿದ್ಧ ಪಡಿಸಿದ್ದರು. ಅದು ಕೇವಲ ಅಸ್ತಿತ್ವ ದಲ್ಲಿದ್ದದ್ದು ಆರೇ ವರ್ಷ. 1956- 57ರಲ್ಲಿ ಮಲೇಶ್ಯಾದ ಸಂವಿಧಾನ ಸಮಿತಿ ಸಲಹೆಗಾರರಾಗಿದ್ದರು, 1959ರಲ್ಲಿ ನೇಪಾಲದ ಸಮಿತಿ ಸಲಹೆ ಗಾರರಾದರು. ಅವರು ಪಾಕಿಸ್ಥಾನ ಸರಕಾರಕ್ಕೂ ಸಾಂವಿಧಾನಿಕ ಸಲಹೆಗಾ ರರಾಗಿದ್ದರು. ಇಲ್ಲೆಲ್ಲ ಸಂವಿಧಾನ ವಿಫಲವಾದದ್ದೇ ಹೆಚ್ಚು.
ಭಾರತದ ಸಂವಿಧಾನ ಅವಿಚ್ಛಿ ನ್ನವಾಗಿ ಮುಂದುವರಿಯುತ್ತಿದೆ. ಮುತ್ಸದ್ದಿಗಳು ಎಲ್ಲೆಲ್ಲಿ ಮುಂಚೂಣಿಯಲ್ಲಿ ನಿಂತು ತಮ್ಮ ನಿರ್ಣಯಗಳನ್ನು ಮಂಡಿಸುತ್ತಾರೋ ಅದು ದೀರ್ಘಕಾಲೀನ ಬಾಳಿಕೆಗೆ ಬರುತ್ತದೆ ಎಂಬುದನ್ನು ದೀರ್ಘ ಸಿಂಹಾಲೋಕನದ ಬಳಿಕವಷ್ಟೇ ಅರಿಯ ಬಹುದು. ಇದೇಕೆಂದರೆ ಅವರ ನಿರ್ಣಯಗಳು ಸಂಕುಚಿತ ಭಾವನೆಗಳಿಂದ ಪ್ರೇರಿತವಾಗದೆ ವಿಶಾಲ ಭಾವನೆಗಳಿಂದ ಪ್ರೇರಿತವಾಗಿರುತ್ತವೆ.
ಮಟಪಾಡಿ ಕುಮಾರಸ್ವಾಮಿ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.