ಪೊಲೀಸರ ಮೇಲೆಯೇ ದಾಳಿಗೆ ಸಂಚು ರೂಪಿಸಿದ್ದ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಪುತ್ರ !
Team Udayavani, Apr 15, 2023, 8:10 AM IST
ಲಕ್ನೋ/ಝಾನ್ಸಿ: ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಪುತ್ರ ಮೊಹಮ್ಮದ್ ಅಸದ್ ಅಹ್ಮದ್, ಆತನ ನಿಕಟವರ್ತಿ ಗುಂಜನ್‌ರನ್ನು ಜೀವಂತವಾಗಿ ಸೆರೆ ಹಿಡಿ ಯಲು ಪ್ರಯತ್ನಿಸಲಾಗಿತ್ತು. ಆದರೆ ಅವರಿಬ್ಬರು ಅತೀಕ್ ಅಹ್ಮದ್‌ನನ್ನು ಕೋರ್ಟ್‌ಗೆ ಹಾಜರುಪಡಿಸುವುದಕ್ಕಾಗಿ ಪೊಲೀಸರು ಕರೆದುಕೊಂಡು ಹೋಗುತ್ತಿದ್ದ ವೇಳೆ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ಉತ್ತರ ಪ್ರದೇಶ ಪೊಲೀಸರು ಎಫ್ಐಆರ್‌ನಲ್ಲಿ ಆರೋಪಿಸಿದ್ದಾರೆ. ಝಾನ್ಸಿ ಜಿಲ್ಲೆಯ ಬದಗಾಂವ್ ಠಾಣೆಯಲ್ಲಿ ಗುರುವಾರ ಎನ್‌ಕೌಂಟರ್‌ನಲ್ಲಿ ಅಸದ್‌ನನ್ನು ಹತ್ಯೆಗೈದ ಬಳಿಕ ದಾಖಲಿಸಲಾದ ಎಫ್ಐಆರ್‌ನಲ್ಲಿ ಈ ಅಂಶಗಳಿವೆ.
ಗುಲಾಂ ಮತ್ತು ಅಸದ್ ಅಹ್ಮದ್ ದಾಳಿಗೆ ಖಚಿತ ಯೋಜನೆ ಹಾಕಿರುವ ಸುಳಿವು ಪೊಲೀಸ್ ತಂಡಕ್ಕೆ ಲಭ್ಯವಾಗಿತ್ತು. ನೋಂದಣಿ ಸಂಖ್ಯೆ ಇಲ್ಲದ ಮೋಟಾರ್ ಸೈಕಲ್‌ನಲ್ಲಿ ಅವರಿಬ್ಬರು ಸಂಚರಿಸುತ್ತಿ ದ್ದರು. ಪರಿಚಾ ಅಣೆಕಟ್ಟಿನ ಬಳಿ ಬಂದ ಅವರಿಬ್ಬರು ಪೊಲೀಸ್ ಸಿಬಂದಿಯನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿ ಸಲು ಆರಂಭಿಸಿದರು. ಜತೆಗೆ ಗುಂಡು ಹಾರಿಸಲು ಆರಂಭಿಸಿದರು. ಈ ಸಂದರ್ಭ ದಲ್ಲಿ ಅವರಿಬ್ಬರನ್ನು ಜೀವಂತ ವಾಗಿ ಸೆರೆ ಹಿಡಿಯಲು ಯತ್ನಿ ಸಿದರೂ ಗುಂಡು ಹಾರಿಸುತ್ತಿ ದ್ದುದರಿಂದ ಪೊಲೀಸರು ಆತ್ಮ ರಕ್ಷಣೆಗಾಗಿ ಪ್ರತಿದಾಳಿ ನಡೆಸ ಬೇಕಾಯಿತು. ಈ ವೇಳೆ ಅವ ರಿಬ್ಬರು ಜೀವ ಕಳೆದು ಕೊಂಡರು ಎಂದು ಉಲ್ಲೇಖೀಸಲಾಗಿದೆ.
ಹತ್ಯೆಗೂ ಮುನ್ನ ಜೈಲಲ್ಲಿ ಸಭೆ: ಫೆ.24ರಂದು ಉಮೇಶ್ ಪಾಲ್‌ರನ್ನು ಗುಂಡು ಹಾರಿಸಿ ಕೊಲ್ಲುವುದಕ್ಕೆ 13 ದಿನಗಳ ಮೊದಲು ಅಸದ್ ಮತ್ತು ಇತರ ಎಂಟು ಮಂದಿ ಬರೇಲಿ ಕಾರಾಗೃಹದಲ್ಲಿ ಅತೀಕ್ ಅಹ್ಮದ್‌ನ ಸಹೋದರ ಖಾಲಿದ್ ಅಜೀಂ ಅಲಿಯಾಸ್ ಅಶ್ರಫ್ ಜತೆಗೆ 2 ಗಂಟೆಗಳ ಕಾಲ ಮಾತುಕತೆ ನಡೆಸಿದ್ದ ಅಂಶ ಬೆಳಕಿಗೆ ಬಂದಿದೆ. ಜೈಲಧಿಕಾರಿಗಳ ನೆರವಿನಿಂದ ಈ ಭೇಟಿ ಆಯೋಜನೆಗೊಂಡಿತ್ತು. ಈ ಅವಧಿ ಯಲ್ಲಿ ಸಿಸಿಟಿವಿ ಕೆಮರಾಗಳನ್ನು ಆಫ್ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
MUST WATCH
ಹೊಸ ಸೇರ್ಪಡೆ
Bengaluru: ಬಿಷಪ್ ಕಾಟನ್ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್: ಆತಂಕ
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ
Bengaluru: ಮನೆಯ ಬಾಲ್ಕನಿಯಲ್ಲಿ ಗಿಡಗಳ ಮಧ್ಯೆ ಗಾಂಜಾ ಬೆಳೆದಿದ್ದ ದಂಪತಿ ಬಂಧನ
Karkala: ಸೆಲ್ಫಿ ಕಾರ್ನರ್ ಮಾಡಿದರೂ ತ್ಯಾಜ್ಯ ಎಸೆತ ನಿಂತಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.