Gas price reduction: ಇಂದಿನಿಂದ ಅನಿಲ ಬೆಲೆ ಇಳಿಕೆ
ಗ್ರಾಹಕರಿಗೆ ಹೊರೆಯಾಗುತ್ತಿರುವುದರಿಂದ ಬೆಲೆಗಳನ್ನು ಇಳಿಸಲು ಕೇಂದ್ರ ನಿರ್ಧಾರ
Team Udayavani, Apr 8, 2023, 7:23 AM IST
ವಾಹನಗಳಲ್ಲಿ ಬಳಸುವ ಅನಿಲ (ಸಿಎನ್‌ಜಿ) ಹಾಗೂ ಅಡುಗೆ ಅನಿಲ (ಪೈಪ್ಡ್ ಗ್ಯಾಸ್ -ಪಿಎನ್‌ಜಿ) ಬೆಲೆ ಏರಿಕೆಯಿಂದ ಬಸವಳಿದಿದ್ದ ಜನರಿಗೆ ಶೀಘ್ರವೇ ರಿಲೀಫ್ ಸಿಗಲಿದೆ. ಅಂದರೆ ಗ್ಯಾಸ್ ಬೆಲೆ ಇಳಿಕೆಯಾಗಲಿದೆ. ದೆಹಲಿಯಲ್ಲಿ ಕೆಜಿಗೆ 79.56 ರೂ.ಗಳಿರುವ ಅಡುಗೆ ಅನಿಲದ ಬೆಲೆ 73.59 ರೂ.ಗಳಿಗೆ ಇಳಿಕೆಯಾದರೆ, ಪಿಎನ್‌ಜಿ ಬೆಲೆ ಪ್ರತಿ ಸಾವಿರ ಕ್ಯೂಬಿಕ್‌ಗೆ 53.59 ರೂ.ಗಳಿಂದ 47.59 ರೂ.ಗಳಿಗೆ ಇಳಿಕೆಯಾಗಲಿದೆ. ರಾಷ್ಟ್ರ ರಾಜಧಾನಿ ಮಾತ್ರವಲ್ಲ ಮುಂಬೈ, ಬೆಂಗಳೂರು ಸೇರಿದಂತೆ ದೇಶಾದ್ಯಂತ ಬೆಲೆ ಏರಿಕೆ ಕಡಿಮೆಯಾಗಲಿದೆ. ಇದಕ್ಕೆ ಕಾರಣವೇನು ? ದಿಢೀರ್ ಇಂಥ ಬದಲಾವಣೆ ಏಕೆ ಎಂಬುದರ ವಿವರ ಇಂತಿದೆ.
ಕಿರಿತ್ ಪಾರಿಕ್ ಸಮಿತಿ ಶಿಫಾರಸು
ಜಾಗತಿಕ ಅನಿಲ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಅನಿಲ ಬೆಲೆ ಲೆಕ್ಕಾಚಾರ ವಿಧಾನ ಬದಲಾವಣೆಗಾಗಿ ಸರ್ಕಾರ ಕಿರೀಟ್ ಪಾರಿಕ್ ಸಮಿತಿಯನ್ನು ಸರ್ಕಾರ ರಚಿಸಿತ್ತು. ಇತ್ತೀಚಿನ ಬೆಲೆ ಏರಿಕೆಯನ್ನು ಪರಿಗಣಿಸಿರುವ ಸಮಿತಿ, ಅದರಿಂದ ಗ್ರಾಹಕರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ 2014ರ ಅನಿಲ ಬೆಲೆ ಮಾರ್ಗಸೂಚಿಯನ್ನು ಪರಿಷ್ಕರಿಸಲು ಶಿಫಾರಸು ನೀಡಿದೆ. ಸಮಿತಿ ಶಿಫಾರಸಿಗೆ ಏ.6ರಂದು ಸರ್ಕಾರ ಅನುಮೋದನೆ ನೀಡಿರುವ ಹಿನ್ನೆಲೆ ಇನ್ನುಮುಂದೆ ಅನಿಲ ಬೆಲೆಗಳಲ್ಲಿ ಇಳಿಕೆಯಾಗಲಿದೆ.
ಯಾವ ಬದಲಾವಣೆಯಾಗಲಿದೆ ?
ಸಮಿತಿಯ ಶಿಫಾರಸಿನ ಪ್ರಕಾರ ಏ.8ರಿಂದ ಭಾರತವು ಹಳೆಯ ಬ್ಲಾಕ್‌ಗಳಿಂದ ಉತ್ಪಾದಿಸುವ ಅನಿಲ ಬೆಲೆಯನ್ನು ಪ್ರತಿ ಬ್ರಿಟಿಷ್ ಥರ್ಮಲ್ ಯೂನಿಟ್‌ಗೆ (ಎಂಎಂಬಿಟಿಯು) 6.50 ಡಾಲರ್‌ಗಳಿಗೆ ಇಳಿಕೆ ಮಾಡಲಿದೆ. ಇದರಿಂದ ಗೊಬ್ಬರ ಮತ್ತು ನಗರ ಅನಿಲ ವಿತರಣಾ ವಲಯಗಳಲ್ಲಿನ ಕೈಗಾರಿಕಾ ಖರೀದಿದಾರರು ಮತ್ತು ಕಂಪನಿಗಳಿಗೆ ಲಾಭವಾಗಲಿದೆ. ವರದಿಗಳ ಪ್ರಕಾರ, ಸಮಿತಿಯ ಶಿಫಾರಸಿನ ಆಧಾರದ ಮೇಲೆ ಅನಿಲ ಬೆಲೆಯಲ್ಲಿ ಶೇ.9ರಿಂದ 11ರಷ್ಟು ಇಳಿಕೆಯಾಗುವ ಸಾಧ್ಯತೆಗಳಿದೆ.
ಸಿಎನ್‌ಜಿ ಬೆಲೆ ಇಳಿಕೆ ಎಷ್ಟಾಗಬಹುದು (ಕೆಜಿಗೆ ರೂ.ಗಳಲ್ಲಿ)?
ನಗರ ಪ್ರಸಕ್ತ ಬೆಲೆ ಪರಿಷ್ಕೃತವಾದರೆ ಬೆಲೆ
ಬೆಂಗಳೂರು 89.5 83.5
ಮುಂಬೈ 87 79
ಮೀರತ್ 93 81
ಪಿಎನ್‌ಜಿ ಬೆಲೆ ಇಳಿಕೆ ಎಷ್ಟಾಗಬಹುದು (ಸಾವಿರ ಕ್ಯೂಬಿಕ್ ಮೀಟರ್‌ಗೆ)?
ನಗರ ಪ್ರಸಕ್ತ ಬೆಲೆ ಪರಿಷ್ಕೃತವಾದರೆ ಬೆಲೆ
ಬೆಂಗಳೂರು 58.5 52
ಮುಂಬೈ 54 49
ಮೀರತ್ 58.5 52
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
MUST WATCH
ಹೊಸ ಸೇರ್ಪಡೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ
Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.