ನಿರಂತರ ಅಧ್ಯಯನ ಶೀಲ : ಮರೆಯಾದ ಮೇರು ಮಿಲಿಟರಿ ಸಾಧಕ ರಾವತ್
Team Udayavani, Dec 8, 2021, 7:14 PM IST
ಶೌರ್ಯ, ಧೈರ್ಯ ಮತ್ತು ತ್ಯಾಗ ಎನ್ನುವ ಪದಕ್ಕೆ ಪ್ರತಿ ರೂಪವೇ ಸೈನಿಕ. ಸದಾ ದೇಶಕ್ಕಾಗಿ ಮಿಡಿಯುವ, ದುಡಿಯುವ ಮತ್ತು ಮಡಿಯುವ ಯೋಧರಿಗೆ ವಿಶಿಷ್ಟ ಗೌರವ.ಅನಿರೀಕ್ಷಿತವಾಗಿ ಹೆಲಿಕಾಪ್ಟರ್ ದುರಂತದಲ್ಲಿ ಪತ್ನಿ ಮತ್ತು ಇತರ 11 ಮಂದಿಯೊಂದಿಗೆ ವಿಧಿಯ ಕ್ರೂರ ಲೀಲೆಗೆ ಬಲಿಯಾದ ಜನರಲ್ ಬಿಪಿನ್ ರಾವತ್ ಅವರು ದೇಶಕಂಡ ಅತ್ಯತ್ತಮ ಸಾಧಕರಲ್ಲಿ ಒಬ್ಬರು.
ಭಾರತೀಯ ಸೇನೆಯ ನಾಲ್ಕು ಸ್ಟಾರ್ ಜನರಲ್ ಆಗಿದ್ದ,ಬಿಪಿನ್ ಲಕ್ಷ್ಮಣ್ ಸಿಂಗ್ ರಾವತ್ ಅವರು ಭಾರತದ ಮೊದಲ ರಕ್ಷಣಾ ಪಡೆಗಳ ಸಿಡಿಎಸ್ (ಸಂಯೋಜಿತ ರಕ್ಷಣಾ ಸೇವೆಗಳು) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 30 ಡಿಸೆಂಬರ್ 2019 ರಂದು, ಅವರು ಭಾರತದ ಮೊದಲ ಸಿಡಿಎಸ್ ಆಗಿ ನೇಮಕಗೊಂಡಿದ್ದರು. 1 ಜನವರಿ 2020 ರಂದು ಅಧಿಕಾರ ವಹಿಸಿಕೊಂಡಿದ್ದರು.
ರಾವತ್ ಅವರು ಉತ್ತರಾಖಂಡದ ಪೌರಿಯಲ್ಲಿ ಹಿಂದೂ ಗರ್ವಾಲಿ ಕುಟುಂಬದಲ್ಲಿ ಜನಿಸಿದರು ಅವರ ಕುಟುಂಬವು ಅನೇಕ ತಲೆಮಾರುಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದೆ. ಅವರ ತಂದೆ ಲಕ್ಷ್ಮಣ್ ಸಿಂಗ್ ರಾವತ್ ಪೌರಿ ಗರ್ವಾಲ್ ಜಿಲ್ಲೆಯ ಸೈನ್ಜ್ ಗ್ರಾಮದವರು ಮತ್ತು ಲೆಫ್ಟಿನೆಂಟ್ ಜನರಲ್ ಹುದ್ದೆಗೆ ಏರಿದವರಾಗಿದ್ದರು. ಅವರ ತಾಯಿ ಉತ್ತರಕಾಶಿ ಜಿಲ್ಲೆಯ ಮಾಜಿ ಶಾಸಕರಾಗಿದ್ದ ಕಿಶನ್ ಸಿಂಗ್ ಪರ್ಮಾರ್ ಅವರ ಮಗಳು.
ಇದನ್ನೂ ಓದಿ :ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ನಿಧನ
ರಾವತ್ ಡೆಹ್ರಾಡೂನ್‌ನಲ್ಲಿರುವ ಕ್ಯಾಂಬ್ರಿಯನ್ ಹಾಲ್ ಸ್ಕೂಲ್ ಮತ್ತು ಶಿಮ್ಲಾದ ಸೇಂಟ್ ಎಡ್ವರ್ಡ್ಸ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದರು. ಬಳಿಕ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಖಡಕ್ವಾಸ್ಲಾ ಮತ್ತು ಇಂಡಿಯನ್ ಮಿಲಿಟರಿ ಅಕಾಡೆಮಿ ಡೆಹ್ರಾಡೂನ್‌ಗೆ ಸೇರಿದರು, ಅಲ್ಲಿ ಅವರಿಗೆ ‘ಸ್ವೊರ್ಡ್ ಆಫ್ ಆನರ್’ ಪ್ರಶಸ್ತಿಯನ್ನು ನೀಡಲಾಯಿತು.
ರಾವತ್ ಅವರು ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜ್ (DSSC), ವೆಲ್ಲಿಂಗ್ಟನ್, ಯುನೈಟೆಡ್ ಸ್ಟೇಟ್ಸ್ ಆರ್ಮಿ ಕಮಾಂಡ್ ಮತ್ತು ಕಾನ್ಸಾಸ್‌ನ ಫೋರ್ಟ್ ಲೀವೆನ್‌ವರ್ತ್‌ನಲ್ಲಿರುವ ಜನರಲ್ ಸ್ಟಾಫ್ ಕಾಲೇಜಿನಲ್ಲಿ ಉನ್ನತ ಕಮಾಂಡ್ ಕೋರ್ಸ್‌ನ ಪದವಿಗಳನ್ನು ಪಡೆದಿದ್ದರು.
ನಿರಂತರ ಕಲಿಕೆಯಲ್ಲಿ ಆಸಕ್ತಿ ಉಳ್ಳವರಾಗಿದ್ದ ರಾವತ್ ಡಿಎಸ್‌ಎಸ್‌ಸಿಯಲ್ಲಿ ಅವರ ಅಧಿಕಾರಾವಧಿಯಲ್ಲಿ, ಡಿಫೆನ್ಸ್ ಸ್ಟಡೀಸ್‌ನಲ್ಲಿ ಎಂ ಫಿಲ್ ಪದವಿ, ಮದ್ರಾಸ್ ವಿಶ್ವವಿದ್ಯಾಲಯದಿಂದ ಮ್ಯಾನೇಜ್‌ಮೆಂಟ್ ಮತ್ತು ಕಂಪ್ಯೂಟರ್ ಅಧ್ಯಯನದಲ್ಲಿ ಡಿಪ್ಲೊಮಾಗಳನ್ನು ಪಡೆದಿದ್ದರು. 2011 ರಲ್ಲಿ, ಮೀರತ್‌ನ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾನಿಲಯವು ಮಿಲಿಟರಿ-ಮಾಧ್ಯಮ ಕಾರ್ಯತಂತ್ರದ ಅಧ್ಯಯನಗಳ ಕುರಿತು ಅವರ ಸಂಶೋಧನೆಗಾಗಿ ಡಾಕ್ಟರೇಟ್ ಆಫ್ ಫಿಲಾಸಫಿಯನ್ನು ನೀಡಿತು.
ರಾವತ್ ಅವರನ್ನು 16 ಡಿಸೆಂಬರ್ 1978 ರಂದು 11ನೇ ಗೂರ್ಖಾ ರೈಫಲ್ಸ್‌ನ 5 ನೇ ಬೆಟಾಲಿಯನ್‌ಗೆ ನಿಯೋಜಿಸಲಾಗಿತ್ತು, ಅವರ ತಂದೆಯೂ ಅದೇ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು ಎತ್ತರದ ಪ್ರದೇಶಗಳಲ್ಲಿ ಯುದ್ಧದಲ್ಲಿ ಹೆಚ್ಚಿನ ಕೌಶಲ್ಯವನ್ನು ಹೊಂದಿದ್ದರು. ಬಂಡಾಯ ವಿರೋಧಿ ಕಾರ್ಯಾಚರಣೆಗಳನ್ನು ನಡೆಸುತ್ತಾ ಹತ್ತು ವರ್ಷಗಳ ಅನುಭವ ಪಡೆದರು.
ಅವರು ಮೇಜರ್ ಆಗಿ ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಕಮಾಂಡ್ ಆಗಿದ್ದರು. ಕರ್ನಲ್ ಆದ ಅವರು 5 ನೇ ಬೆಟಾಲಿಯನ್ 11 ಗೂರ್ಖಾ ರೈಫಲ್ಸ್, ನಿಯಂತ್ರಣ ರೇಖೆಯ ಉದ್ದಕ್ಕೂ ಕಾರ್ಯ ನಿರ್ವಹಿಸಿ ಬ್ರಿಗೇಡಿಯರ್ ಹುದ್ದೆಗೆ ಬಡ್ತಿ ಪಡೆದ ಅವರು ಸೋಪೋರ್‌ನಲ್ಲಿ ರಾಷ್ಟ್ರೀಯ ರೈಫಲ್ಸ್‌ನ 5ನೇ ಸೆಕ್ಟರ್‌ಗೆ ಕಮಾಂಡರ್ ಆಗಿದ್ದರು.
ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ಕಾರ್ಯಾಚರಣೆಯಲ್ಲಿ ಬಹುರಾಷ್ಟ್ರೀಯ ಬ್ರಿಗೇಡ್‌ಗೆ ನೇಮಕವಾಗಿ ಸೇವೆ ಸಲ್ಲಿಸಿ, ಎರಡು ಬಾರಿ ಫೋರ್ಸ್ ಕಮಾಂಡರ್‌ನ ಪ್ರಶಂಸೆಯನ್ನು ಪಡೆದಿದ್ದರು.
ಮೇಜರ್ ಜನರಲ್ ಆಗಿ ಬಡ್ತಿ ಪಡೆದ ನಂತರ, ರಾವತ್ 19 ನೇ ಪದಾತಿ ದಳದ ಉರಿ ಕಮಾಂಡಿಂಗ್ ಜನರಲ್ ಆಫೀಸರ್ ಆಗಿ ಅಧಿಕಾರ ವಹಿಸಿಕೊಂಡರು. ಲೆಫ್ಟಿನೆಂಟ್ ಜನರಲ್ ಆಗಿ, ಅವರು ಪುಣೆಯಲ್ಲಿ ದಕ್ಷಿಣ ಭಾರತದ ಸೈನ್ಯದ ಮುಖ್ಯಸ್ಥರಾಗಿದ್ದರು.
1 ಸೆಪ್ಟೆಂಬರ್ 2016 ರಂದು ಸೇನೆಯ ಉಪಾಧ್ಯಕ್ಷ ಹುದ್ದೆಯನ್ನು ವಹಿಸಿಕೊಂಡರು.
17 ಡಿಸೆಂಬರ್ 2016 ರಂದು, ಭಾರತ ಸರಕಾರ ಅವರನ್ನು27 ನೇ ಸೇನಾ ಮುಖ್ಯಸ್ಥರನ್ನಾಗಿ ನೇಮಿಸಿತು, ಇಬ್ಬರು ಹಿರಿಯ ಲೆಫ್ಟಿನೆಂಟ್ ಜನರಲ್‌ಗಳಾದ ಪ್ರವೀಣ್ ಬಕ್ಷಿ ಮತ್ತು ಪಿ.ಎಂ.ಹರಿಜ್ ಅವರನ್ನು ಹಿಂದಿಕ್ಕಿ, ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಅವರ ನಿವೃತ್ತಿಯ ನಂತರ ಅವರು 31 ಡಿಸೆಂಬರ್ 2016 ರಂದು ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು.
ರಾವತ್ ನೇಪಾಳ ಸೇನೆಯ ಗೌರವ ಜನರಲ್ ಆಗಿದ್ದರು. ಭಾರತೀಯ ಮತ್ತು ನೇಪಾಳಿ ಸೇನೆ ತಮ್ಮ ನಿಕಟ ಮತ್ತು ವಿಶೇಷ ಮಿಲಿಟರಿ ಸಂಬಂಧಗಳಿಗಾಗಿ ಪರಸ್ಪರರ ಮುಖ್ಯಸ್ಥರಿಗೆ ಗೌರವಾನ್ವಿತ ಶ್ರೇಣಿಯನ್ನು ನೀಡುವುದು ಸಂಪ್ರದಾಯವಾಗಿದೆ.
1987 ರ ಸುಮ್‌ಡೊರಾಂಗ್ ಚು ಕಣಿವೆಯಲ್ಲಿ ಚೀನಾ ಮುಖಾಮುಖಿಯಾದಾಗ, ರಾವತ್ ಅವರ ಬೆಟಾಲಿಯನನ್ನು ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿ ವಿರುದ್ಧ ನಿಯೋಜಿಸಲಾಗಿತ್ತು.1962 ರ ಯುದ್ಧದ ನಂತರ ವಿವಾದಿತ ಮ್ಯಾಕ್ ಮಹೊನ್ ರೇಖೆಯ ಉದ್ದಕ್ಕೂ ನಡೆದ ಮೊದಲ ಮಿಲಿಟರಿ ಸಂಘರ್ಷ ಅದಾಗಿತ್ತು.
ಜೂನ್ 2015 ರಲ್ಲಿ, ಮಣಿಪುರದಲ್ಲಿ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ವೆಸ್ಟರ್ನ್ ಸೌತ್ ಈಸ್ಟ್ ಏಷ್ಯಾಗೆ ಸೇರಿದ ಉಗ್ರಗಾಮಿಗಳು ಹೊಂಚುದಾಳಿ ನಡೆಸಿ ಹದಿನೆಂಟು ಭಾರತೀಯ ಸೈನಿಕರ ಹತ್ಯೆಗೈದಿದ್ದರು. ಭಾರತೀಯ ಸೇನೆಯು ಗಡಿಯಾಚೆಗಿನ ದಾಳಿಗಳೊಂದಿಗೆ ಪ್ರತಿಕ್ರಿಯಿಸಿ, ಪ್ಯಾರಾಚೂಟ್ ರೆಜಿಮೆಂಟ್‌ನ 21 ನೇ ಬೆಟಾಲಿಯನ್‌ನ ಘಟಕಗಳು ಮ್ಯಾನ್ಮಾರ್ ಗಡಿ ನುಸುಳಿ NSCN-K ಉಗ್ರರ ನೆಲೆಯನ್ನು ನಿರ್ನಾಮ ಮಾಡಿದ್ದವು. ಕಾರ್ಯಾಚರಣೆಯ ನೇತೃತ್ವವನ್ನು ರಾವತ್ ವಹಿಸಿದ್ದರು.
ಅವರ 40 ವರ್ಷಗಳ ವೃತ್ತಿಜೀವನದ ಅವಧಿಯಲ್ಲಿ, ಅವರು ಪರಮ ವಿಶಿಷ್ಟ ಸೇವಾ ಪದಕ, ಉತ್ತಮ ಯುದ್ಧ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಯುದ್ಧ ಸೇವಾ ಪದಕ, ಸೇನಾ ಪದಕಗಳೊಂದಿಗೆ ಶೌರ್ಯ ಮತ್ತು ವಿಶಿಷ್ಟ ಸೇವೆಗಾಗಿ ಪ್ರಶಸ್ತಿಗಳನ್ನು ಪಡೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಕರಾವಳಿ ಉತ್ಸವ; ಮತ್ಸ್ಯ ಲೋಕದೊಳಗೆ ನಾವು!
Kundapura: ಮೆಟ್ಟಿಲು ಹತ್ತುವಾಗಲೇ ಶುಚಿಯಾಗುವ ಶೌಚಾಲಯ!
ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್ ನಕಾರ
ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.