Kerala ಶಾಲಾ ಪಠ್ಯದಲ್ಲಿ ಲಿಂಗ ಸಮಾನತೆಯ ಪಾಠ
ಅಡುಗೆ ಮನೆ ಕೆಲಸಗಳಲ್ಲಿ ಅಪ್ಪ-ಅಮ್ಮ ಸಮಭಾಗಿ
Team Udayavani, Jun 6, 2024, 7:10 AM IST
ತಿರುವನಂತಪುರ: ಅಪ್ಪ ಎಂದರೆ ಹೊರಗೆ ದುಡಿಯುವ ಮನುಷ್ಯ, ಅಮ್ಮ ಎಂದರೆ ಅಡುಗೆ ಮನೆಗೆ ಸೀಮಿ ತವಾದವಳು ಎನ್ನುವಂಥ ಮನೋ ಭಾವವನ್ನು ತೊಡೆದುಹಾಕಿ, ಮಕ್ಕಳ ಮನಸ್ಸಿನಲ್ಲಿ ಲಿಂಗ ಸಮಾನತೆಯ ಪರಿ ಕಲ್ಪನೆ ಮೂಡಿಸುವ ವಿಶಿಷ್ಟ ಪ್ರಯತ್ನ ವನ್ನು ಕೇರಳ ಸರಕಾರ ಮಾಡಿದೆ. ಇದಕ್ಕಾಗಿ ಅಡುಗೆ ಮನೆಯೊಂದರ ವಿಶಿಷ್ಟ ಚಿತ್ರಣವನ್ನು ಮಕ್ಕಳ ಪಠ್ಯ ಪುಸ್ತಕದಲ್ಲಿ ಸೇರ್ಪಡೆಗೊಳಿಸಿದೆ.
ಅಡುಗೆ ಮನೆಯೊಂದರಲ್ಲಿ ತಂದೆ ನೆಲದ ಮೇಲೆ ಕುಳಿತು ಕಾಯಿ ತುರಿಯುತ್ತಿರುವಂತೆ, ತಾಯಿ ಅಡುಗೆ ಮಾಡುತ್ತಿರುವಂತೆ, ಮಗಳೊಬ್ಬಳು ಪಾತ್ರೆಗಳನ್ನು ಎತ್ತಿಡುವ ಹಾಗೂ ಮಗನೂ ಕೆಲಸಗಳಿಗೆ ಸಹಾಯ ಮಾಡುತ್ತಿರುವಂತೆ ಚಿತ್ರ ಬಿಡಿಸಲಾಗಿದೆ. ಕೇರಳದ 3ನೇ ತರಗತಿಯ ಪಠ್ಯ ಪುಸ್ತಕದಲ್ಲಿರುವ ಈ ಲಿಂಗ ಸಮಾನತೆ ಸಾರುವ ಚಿತ್ರ ಈಗ ಜಾಲತಾಣದಲ್ಲೂ ವೈರಲ್ ಆಗುತ್ತಿದೆ. ಖುದ್ದು ಕೇರಳದ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಜಾಲತಾಣದಲ್ಲಿ ಈ ಚಿತ್ರ ಹಂಚಿಕೊಂಡಿದ್ದಾರೆ.
ನೆಟ್ಟಿಗರು, ಶಿಕ್ಷಕರೂ ಕೂಡ ಈ ಬದಲಾ ವಣೆ ಸ್ವಾಗತಿಸಿದ್ದು, ಮನೆ ಕೆಲಸದ ಹೊರೆ ತಾಯಿಗೆ ಮಾತ್ರ ಸೀಮಿತವಲ್ಲ, ಇದು ಎಲ್ಲರ ಜವಾಬ್ದಾರಿ ಎಂಬ ಸಂದೇಶ ಉತ್ತಮ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.