ಭೂಸೇನೆಗೆ ರಾಜ್ಯದ ಲೆ|ಜ| ಬಿ.ಎಸ್‌. ರಾಜು ಉಪ ಮುಖ್ಯಸ್ಥ; ಸದ್ಯ ಪೂರ್ವ ಲಡಾಖ್‌ನಲ್ಲಿ ಡಿಜಿಎಂಒ


Team Udayavani, Apr 30, 2022, 7:05 AM IST

ಭೂಸೇನೆಗೆ ರಾಜ್ಯದ ಲೆ|ಜ| ಬಿ.ಎಸ್‌. ರಾಜು ಉಪ ಮುಖ್ಯಸ್ಥ; ಸದ್ಯ ಪೂರ್ವ ಲಡಾಖ್‌ನಲ್ಲಿ ಡಿಜಿಎಂಒ

ಹೊಸದಿಲ್ಲಿ: ಭೂ ಸೇನೆಯ ಉಪ ಮುಖ್ಯಸ್ಥ ಹುದ್ದೆಗೆ ಕರ್ನಾಟಕ ಮೂಲದ ಲೆ|ಜ| ಬಗ್ಗವಳ್ಳಿ ಸೋಮ ಶೇಖರ ರಾಜು ಅವರು ನೇಮಕಗೊಂಡಿದ್ದಾರೆ.

ಮೇ 1ರಂದು ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಹಾಲಿ ಉಪ ಮುಖ್ಯಸ್ಥ ಲೆ|ಜ| ಮನೋಜ್‌ ಪಾಂಡೆ ಅವರು ಭೂಸೇನೆಯ ಮುಖಸ್ಥರಾಗಿ ನೇಮಕಗೊಂಡಿದ್ದು, ಈ ಸ್ಥಾನಕ್ಕೆ ಲೆ|ಜ| ರಾಜು ಅವರನ್ನು ನೇಮಿಸಲಾಗಿದೆ.
ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಕ (ಡಿಜಿಎಂಒ)ರಾಗಿರುವ ಅವರು, ಪೂರ್ವ ಲಡಾಖ್‌ನಲ್ಲಿ ಚೀನ ತಂಟೆಯ ಬಳಿಕ ನಿಯೋಜನೆಗೊಂಡ ಸೇನೆಯ ಸಂಪೂರ್ಣ ಉಸ್ತುವಾರಿ ವಹಿಸಿದ್ದಾರೆ. ಒಟ್ಟು 38 ವರ್ಷ ಗಳ ಸೇವಾನುಭವವನ್ನು ಸೇನೆಯಲ್ಲಿ ಹೊಂದಿ ದ್ದಾರೆ. ಉಗ್ರ ನಿಗ್ರಹ ಕ್ಷೇತ್ರದಲ್ಲಿ ಕೂಡ ಅಪಾರ ಅನುಭವವನ್ನೂ ಅವರು ಹೊಂದಿದ್ದಾರೆ.

ಹೀಗಾಗಿಯೇ ಅವರು, ಶ್ರೀನಗರ ದಲ್ಲಿ ಪ್ರಧಾನ ಕಚೇರಿ ಹೊಂದಿರುವ ಚಿನಾರ್‌ ಕಾಪ್ಸ್‌ì ಸೇನಾ ಪಡೆಯ ನೇತೃತ್ವವನ್ನೂ ವಹಿಸಿ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಯಲ್ಲಿ ಉರಿ ಬ್ರಿಗೇಡ್‌ನ‌ ನೇತೃತ್ವ ವಹಿಸಿ ಉಗ್ರ ನಿಗ್ರಹ ಕಾರ್ಯಾಚರಣೆಯ ಹೆಗ್ಗಳಿಕೆಯೂ ಅವರದ್ದಾಗಿದೆ. ರಾಜು ನಿವೃತ್ತಿಗೆ ಇನ್ನೂ 19 ತಿಂಗಳು ಉಳಿದಿವೆ.

ಭೂತಾನ್‌ನಲ್ಲಿ
ಭಾರತೀಯ ಸೇನಾ ಪಡೆಗೆ ಭೂತಾನ್‌ನಲ್ಲಿ ನಡೆಸಲಾಗಿದ್ದ ತರಬೇತಿ ಶಿಬಿರದ ನೇತೃತ್ವವನ್ನೂ ಲೆ| ಜ| ಬಗ್ಗವಳ್ಳಿ ಸೋಮಶೇಖರ ರಾಜು ವಹಿಸಿಕೊಂಡಿದ್ದರು. ಭೂ ಸೇನೆಯ ಪ್ರಧಾನ ಕಚೇರಿಯಲ್ಲಿ ಮತ್ತು ವಿವಿಧ ರೆಜಿಮೆಂಟ್‌ಗಳಲ್ಲಿ ಹಲವು ಗುರುತರ ಹೊಣೆಗಳನ್ನೂ ನಿರ್ವಹಿಸಿದ್ದರು. ರಕ್ಷಣ ಸಚಿವಾಲಯ ದಿಲ್ಲಿಯಲ್ಲಿ ಅವರ ನೇಮಕದ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ “ಲೆ.ಜ.ರಾಜು ಅವರು, ಸೋಮಾಲಿಯಾದಲ್ಲಿ ವಿಶ್ವ ಸಂಸ್ಥೆ ನಡೆಸಿದ್ದ ಶಾಂತಿ ಪಾಲನೆ ಮತ್ತು ಮಾನವೀಯ ಕಾರ್ಯಾ ಚರಣೆಯಲ್ಲೂ ಭಾಗವಹಿಸಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಯುನೈಟೆಡ್‌ ಕಿಂಗ್‌ಡಮ್‌ನ ರಾಯಲ್‌ ಕಾಲೇಜ್‌ ಆಫ್ ಡಿಫೆನ್ಸ್‌ ಸ್ಟಡೀಸ್‌ನ ವಿವಿಧ ತರಬೇತಿ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ದ್ದಾರೆ’ ಎಂದು ಉಲ್ಲೇಖಿಸಿದೆ.

ಅಮೆರಿಕದ ಕ್ಯಾಲಿಫೋರ್ನಿಯಾದ ಮೊಂಟೆರೆಯಲ್ಲಿರುವ ನೇವಲ್‌ ಪೋಸ್ಟ್‌ ಗ್ರಾಜ್ಯುವೇಟ್‌ ಸ್ಕೂಲ್‌ನಿಂದ ಉಗ್ರ ನಿಗ್ರಹ ವಿಷಯದಲ್ಲಿ ಸ್ನಾತಕೋ ತ್ತರ ಪದವಿಯನ್ನೂ ಪಡೆದಿದ್ದಾರೆ.

ಹಲವು ಗೌರವ
ಸೇನೆಯಲ್ಲಿ ಅನುಪಮ ಸೇವೆ ಸಲ್ಲಿಸಿದ್ದಕ್ಕಾಗಿ ಅವರಿಗೆ ಉತ್ತಮ್‌ ಯುದ್ಧ ಸೇವಾ ಮೆಡಲ್‌ (ಯುಎಸ್‌ಎಂ), ಅತಿ ವಿಶಿಷ್ಟ ಸೇವಾ ಮೆಡಲ್‌ (ಎವಿಎಸ್‌ಎಂ), ಯುದ್ಧ ಸೇವಾ ಮೆಡಲ್‌ (ಯುಎಸ್‌ಎಂ) ಪ್ರದಾನ ಮಾಡಲಾಗಿದೆ.

ಸೈನಿಕ ಸ್ಕೂಲ್‌ ಬಿಜಾಪುರದ ವಿದ್ಯಾರ್ಥಿ
ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕು ಬಗ್ಗವಳ್ಳಿ ಗ್ರಾಮದ ಬಿ.ಎಸ್‌. ಸೋಮಶೇಖರಪ್ಪ ಮತ್ತು ವಿಮಲಾ ದಂಪತಿಯ ಮೂರನೇ ಮಗನಾಗಿ ಜನಿಸಿದ್ದರು. ಅವರ ತಂದೆ ಸೋಮ ಶೇಖರ್‌ ಎಂಜಿನಿಯರಿಂಗ್‌ ಶಿಕ್ಷಣ ಪಡೆದು ಪಾಲಿಟೆಕ್ನಿಕ್‌ ಪಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದು, ತಾಯಿ ಗೃಹಿಣಿಯಾಗಿದ್ದರು. ಬಗ್ಗವಳ್ಳಿ ಸೋಮಶೇಖರ್‌ ರಾಜು 1ರಿಂದ 6ನೇ ತರಗತಿವರೆಗೆ ಮೈಸೂರಿನಲ್ಲಿ, ಅನಂತರ 6ನೇ ತರಗತಿಯಿಂದ ವಿಜಯಪುರ ಜಿಲ್ಲೆಯ ಸೈನಿಕ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ.

ಬಗ್ಗವಳ್ಳಿಯಲ್ಲಿ ಇವರ ಸಹೋದರ ಸಂಬಂಧಿಗಳು ವಾಸವಾಗಿದ್ದು, ಅವರ ದೊಡ್ಡಪ್ಪನ ಮಗ ಲೋಕೇಶಪ್ಪ, ಪರಶಿವಪ್ಪ ಸಹ ವಾಸವಾಗಿದ್ದಾರೆ.

Koo App

ಕನ್ನಡಿಗರಾದ ಲೆಫ್ಟಿನೆಂಟ್‌ ಜನರಲ್‌ ಬಗ್ಗವಳ್ಳಿ ಸೋಮಶೇಖರ ರಾಜು ಅವರು ಭಾರತೀಯ ಸೇನಾಪಡೆಯ ಉಪ ಮುಖ್ಯಸ್ಥರಾಗಿ ನೇಮಕ ಆಗಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಕ್ಷಣ & ಸಂಭ್ರಮದ ಸಂದರ್ಭ. ರಾಷ್ಟ್ರ ರಕ್ಷಣೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಕರ್ನಾಟಕದ ಪರಂಪರೆಯ ಇನ್ನೊಂದು ಗರಿ ಜನರಲ್‌ ಬಿ.ಎಸ್.ರಾಜು ಅವರು. ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದವರಾದ ಅವರು ಕಾಶ್ಮೀರದಲ್ಲಿ ನಡೆದ ʼಆಪರೇಷನ್‌ ಪರಾಕ್ರಮʼ ಸೇರಿ ಹಲವಾರು ಮಹತ್ವದ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದರು. ಕನ್ನಡಾಂಬೆಯ ಹೆಮ್ಮೆಯ ಪುತ್ರ ಜನರಲ್‌ ರಾಜು ಅವರಿಗೆ ಶುಭವಾಗಲಿ, ಅವರ ಮುಂದಿನ ಎಲ್ಲ ಕಾರ್ಯಗಳಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ.

H D Kumaraswamy (@h_d_kumaraswamy) 30 Apr 2022

ಟಾಪ್ ನ್ಯೂಸ್

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

1-huliraya

Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ

DKShi

Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.