ರೇಷ್ಮಾ ನಾಣಯ್ಯ ಗ್ಲಾಮರಸ್ ಫೋಟೋಶೂಟ್
Team Udayavani, Jan 7, 2021, 12:45 PM IST
“ಏಕ್‌ಲವ್ಯ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿರುವ ರೇಷ್ಮಾ ನಾಣಯ್ಯ ಈಗ ಹೊಸ ಸಿನಿಮಾದಲ್ಲಿ ಬಿಝಿಯಾಗಿದ್ದಾರೆ. ಆ ದಿನಗಳು ಚೇತನ್ ನಾಯಕರಾಗಿರುವ “ಮಾರ್ಗ’ ಚಿತ್ರದಲ್ಲೂ ರೀಷಾ ನಾಯಕಿ. ಈಗ ರೇಷ್ಮಾ ಕಲರ್‌ಫುಲ್ ಆಗಿ ಫೋಟೋಶೂಟ್ ವೊಂದನ್ನು ಮಾಡಿಸಿದ್ದಾರೆ. ಈ ಮೂಲಕ ಸ್ಟೈಲಿಶ್ ಆಗಿ ಮಿಂಚಿದ್ದಾರೆ. ಸದ್ಯ “ಏಕ್ ಲವ್ಯ’ ಚಿತ್ರೀಕರಣ ಮುಗಿಸಿರುವ ರೀಷಾ, “ಮಾರ್ಗ’ ಚಿತ್ರೀಕರಣಕ್ಕೆ ಅಣಿಯಾಗುತ್ತಿದ್ದಾರೆ.
ಇವತ್ತು ಬೇರೆ ಬೇರೆ ಭಾಷೆಯ ಚಿತ್ರರಂಗದಲ್ಲಿ ಬಿಝಿಯಾಗಿರುವ ಅದೆಷ್ಟೋ ನಾಯಕಿ ನಟಿಯರಿಗೆ ಮೊದಲ ಅವಕಾಶ ಕಲ್ಪಿಸಿರೋದು ಮಾಡೆಲಿಂಗ್ ಹಾಗೂ ಕಾಲೇಜಿನಲ್ಲಿ ನಡೆಸುವ ಬ್ಯೂಟಿ ಕಾಂಪಿಟೇಶನ್. ರೀಷಾಗೂ “ಏಕಲವ್ಯ’ ಚಿತ್ರದಲ್ಲಿ ಅವಕಾಶ ನೀಡಿದ್ದು ಬ್ಯೂಟಿ ಕಾಂಪಿಟೇಶನ್. ರೀಷಾ ಭಾಗವಹಿಸಿದ್ದ ಬ್ಯೂಟಿ ಕಾಂಪಿಟೇಶನ್‌ವೊಂದನ್ನು ನೋಡಿದ ಪ್ರೇಮ್, ಆಡಿಷನ್ ಮಾಡಿ ಚಿತ್ರಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡಿದರಂತೆ. ಚಿತ್ರಕ್ಕೆ ಆಯ್ಕೆಯಾದ ನಂತರ ರೀಷಾ ನಾಗತಿಹಳ್ಳಿ ಟೆಂಟ್ ಸ್ಕೂಲ್ ಗೆ ಸೇರಿ ನಟನೆಯ ತರಬೇತಿ ಕಲಿತರಂತೆ.
ಜೊತೆಗೆ ಪ್ರೇಮ್ ಕೂಡಾ ತಮ್ಮ ಚಿತ್ರಕ್ಕೆ ಬೇಕಾದ ದೃಶ್ಯಗಳ ರಿಹರ್ಸಲ್ ನಡೆಸಿ ರೆಡಿ ಮಾಡಿಸಿದರಂತೆ. ಎಲ್ಲಾ ಓಕೆ, ಈ ಚಿತ್ರದಲ್ಲಿ
ರೇಷ್ಮಾ ಪಾತ್ರವೇನು ಎಂದು ನೀವು ಕೇಳಬಹುದು. ಅದಕ್ಕೆ ಈಗಲೇ ಉತ್ತರವಿಲ್ಲ. ಏಕೆಂದರೆ ಪ್ರೇಮ್ ಯಾರಿಗೂ ಕಥೆ ಹೇಳುವುದಿಲ್ಲ. ರೇಷ್ಮಾ ಗೂ ಪಾತ್ರದ ಬಗ್ಗೆ ಸ್ವಲ್ಪ ಹೇಳಿದ್ದು ಬಿಟ್ಟರೆ ಮಿಕ್ಕಂತೆ ಯಾವ ಅಂಶವೂ ಗೊತ್ತಿಲ್ಲ. “ಸದ್ಯಕ್ಕೆ ಸಿನಿಮಾ ಬಗ್ಗೆ ಏನೂ ಹೇಳುವುದಿಲ್ಲ. ಕ್ಯಾಮರಾ ಮುಂದೆ ಆತ್ಮವಿಶ್ವಾಸದಿಂದ ನಿಲ್ಲುವುದನ್ನಷ್ಟೇ ಕಲಿತಿದ್ದೇನೆ’ ಎನ್ನುವುದು ರೇಷ್ಮಾ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!
MUST WATCH
ಹೊಸ ಸೇರ್ಪಡೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.