Temperature: ಜಾಗತಿಕ ಸರಾಸರಿ ತಾಪಮಾನ 1.5 ಡಿ.ಸೆ. ಹೆಚ್ಚಳ!
Team Udayavani, Jun 20, 2023, 6:37 AM IST
ಇದೇ ಮೊದಲ ಬಾರಿಗೆ ಜೂನ್ ತಿಂಗಳ ಮೊದಲಾರ್ಧದಲ್ಲಿ ಜಾಗತಿಕ ಸರಾಸರಿ ತಾಪಮಾನವು 1.5 ಡಿ.ಸೆ. ನ ಗಡುವನ್ನು ಮೀರಿದೆ. ತಿಂಗಳ ಆರಂಭದಲ್ಲಿಯೇ ಜಾಗತಿಕ ಸರಾಸರಿ ತಾಪಮಾನವನ್ನು ಮೀರಿ ದಾಖಲೆ ಪ್ರಮಾಣದ ಉಷ್ಣತೆಯನ್ನು ದಾಖಲಿಸಿದೆ ಎಂದು ಯುರೋಪಿಯನ್ ಯೂನಿಯನ್‌ನ ಹವಾಮಾನ ಮೇಲ್ವಿಚಾರಣ ಘಟಕ ತಿಳಿಸಿದೆ.
ವಿಶ್ವಸಂಸ್ಥೆ ವಿಧಿಸಿದ ಮಿತಿ
ಹವಾಮಾನ ವೈಪರೀತ್ಯವು ಭೂಮಿಯ ಮೇಲೆ ಗಂಭೀರ ಪರಿಣಾಮ ಬೀರುವುದನ್ನು ತಡೆಯುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯು ಜಾಗತಿಕ ತಾಪಮಾನಕ್ಕೆ 1.5 ಡಿ.ಸೆ.ನ ಮಿತಿಯನ್ನು ನಿಗದಿಪಡಿಸಿತ್ತು. ಆದರೆ ಪ್ರಸಕ್ತ ತಿಂಗಳ ಆರಂಭದಲ್ಲಿ ಜಾಗತಿಕ ತಾಪಮಾನವು 1.5 ಡಿ.ಸೆ.ನ ಮಿತಿಯನ್ನು ಮೀರಿದೆ.
ಹೊಸದೇನಲ್ಲ
ವಿಶ್ವಸಂಸ್ಥೆಯು ನಿಗದಿಪಡಿಸಿದ 1.5 ಡಿ.ಸೆ.ನ ಮಿತಿಯನ್ನು ಈ ಹಿಂದೆ ಮೀರಿದ್ದು 2015ರ ಡಿಸೆಂಬರ್‌ನಲ್ಲಿ. ಬಳಿಕ 2016 ಮತ್ತು 2020ರಲ್ಲಿ ಉತ್ತರ ಗೋಳಾರ್ಧದ ಚಳಿಗಾಲ ಮತ್ತು ವಸಂತ ಮಾಸದಲ್ಲಿ ತಾಪಮಾನ ಈ ಮಿತಿಯನ್ನು ದಾಟಿತ್ತು. ಆದರೆ ಈ ಬಾರಿ ಜಾಗತಿಕ ಸರಾಸರಿ ತಾಪಮಾನ ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ.
ಪ್ಯಾರಿಸ್ ಒಪ್ಪಂದ
2015ರ ಅಂತ್ಯದಲ್ಲಿ ಪ್ಯಾರಿಸ್‌ನಲ್ಲಿ ನಡೆದ ಹವಾಮಾನ ಸಮ್ಮೇಳನದಲ್ಲಿ ರಾಷ್ಟ್ರಗಳು ಪ್ಯಾರಿಸ್ ಒಪ್ಪಂದಕ್ಕೆ ಅಂಕಿತ ಹಾಕಿದವು. ಅನಿಲ ಹೊರಸೂಸುವಿಕೆ ತಗ್ಗಿಸುವ ಮತ್ತು ಈ ಶತಮಾನದಲ್ಲಿ ಜಾಗತಿಕ ತಾಪಮಾನ ಏರಿಕೆಯನ್ನು 2 ಡಿ.ಸೆ.ಗೆ ಮಿತಿಗೊಳಿಸುವ ನಿಟ್ಟಿನಲ್ಲಿ ದೀರ್ಘಾವಧಿ ಧ್ಯೇಯವನ್ನು ಹಾಕಿಕೊಳ್ಳಲಾಗಿತ್ತು. ಆದರೆ ದೀರ್ಘಾವಧಿ ಎಚ್ಚರಿಕೆಯ ರೂಪದಲ್ಲಿ ಈ ಮಿತಿಯನ್ನು ವಿಧಿಸಲಾಗಿತ್ತು. 2016ರಲ್ಲಿ ಪ್ಯಾರಿಸ್ ಒಪ್ಪಂದ ಜಾರಿಗೆ ಬಂದಿತು. ಆದರೆ ಒಪ್ಪಂದ ಕೇವಲ ಘೋಷಣೆಗಷ್ಟೇ ಸೀಮಿತವಾಯಿತೇ ವಿನಾ ಅದು ಇಂದಿಗೂ ಪರಿಪೂರ್ಣವಾಗಿ ಕಾರ್ಯಗತಗೊಂಡಿಲ್ಲ. ವಿಶ್ವದ ಬಲಾಡ್ಯ ರಾಷ್ಟ್ರಗಳೇ ನಿಗದಿತ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ. ಇಂಗಾಲಾಮ್ಲ ಹೊರಸೂಸುವಿಕೆ ಮತ್ತು ತಾಪವರ್ಧಕ ಅನಿಲಗಳ ಉತ್ಸರ್ಜನೆಯನ್ನು ಕಡಿಮೆ ಮಾಡಲು ವಿಶ್ವ ರಾಷ್ಟ್ರಗಳು ವಿಫಲವಾಗಿದ್ದರೆ ಇನ್ನು ಬಡ ರಾಷ್ಟ್ರಗಳ ಪಾಲಿಗೆ ಪ್ಯಾರಿಸ್ ಒಪ್ಪಂದ ಕೈಗೆಟುಕದ ದ್ರಾಕ್ಷಿಯಂತಾಗಿದೆ.
ತಜ್ಞರ ಆತಂಕ
ಕೈಗಾರಿಕ ಕ್ರಾಂತಿಗೆ ಮೊದಲು ಭೂಮಿಯ ಸರಾಸರಿ ತಾಪಮಾನ ಎಷ್ಟಿತ್ತೋ ಅದಕ್ಕಿಂತ 2 ಡಿ.ಸೆ.ನಷ್ಟು (+2ಡಿ.ಸೆ.) ಏರಿಕೆಯಾದರೆ ಮನುಷ್ಯನ ಸಹಿತ ಬಹುತೇಕ ಜೀವ ಸಂಕುಲಗಳು ನಾಶವಾಗುತ್ತವೆ ಎಂದು ವಿಜ್ಞಾನಿಗಳು ಎಚ್ಚರಿಸುತ್ತಲೇ ಬಂದಿದ್ದಾರೆ. +1.5 ಡಿಗ್ರಿ ಏರುವ ಹೊತ್ತಿಗೆ ಸಾಗರಗಳು ಉಕ್ಕೇರಿ ಬಹುಪಾಲು ಸಣ್ಣ ದ್ವೀಪ ರಾಷ್ಟ್ರಗಳು ಮುಳುಗಿ ಹೋಗುವ ಭೀತಿ ಯನ್ನೂ ವ್ಯಕ್ತಪಡಿಸಿದ್ದಾರೆ. ಜಗತ್ತಿನಾದ್ಯಂತ ಇದೇ ಪ್ರಮಾಣದಲ್ಲಿ ವಾತಾವರಣಕ್ಕೆ ಇಂಗಾಲಾಮ್ಲವನ್ನು ತುಂಬುತ್ತಾ ಹೋದರೆ 2100ರ ಹೊತ್ತಿಗೆ ಭೂ ತಾಪಮಾನ +2ಡಿಗ್ರಿ ಸೆಲ್ಸಿಯಸ್ ದಾಟಿ ಹೋಗಲಿದೆ ಎಂಬ ಆತಂಕ ಹವಾಮಾನ ತಜ್ಞರದ್ದಾಗಿದೆ.
ವಿಶ್ವಸಂಸ್ಥೆ ಎಚ್ಚರಿಕೆ
ಜಗತ್ತು ಹವಾಮಾನ ವೈಪರೀತ್ಯದತ್ತ ದಾಪುಗಾಲಿಡುತ್ತಿದೆ. ಜಾಗತಿಕ ತಾಪಮಾನ ಏರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಾಗತಿಕ ಸಮುದಾಯ ಕೈಗೊಂಡಿರುವ ಕ್ರಮಗಳು ಅಸಮರ್ಪಕ ಮತ್ತು ಪರ್ಯಾಪ್ತವಾಗಿಲ್ಲ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟನಿಯೋ ಗುಟೆರಸ್ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವ ಸಮುದಾಯದ ಸದ್ಯದ ಹವಾಮಾನ ನೀತಿಗಳು ಈ ಶತಮಾನದ ಅಂತ್ಯಕ್ಕೆ ಜಾಗತಿಕ ಸರಾಸರಿ ತಾಪಮಾನವನ್ನು 2.8 ಡಿ.ಸೆ.ಗಳಿಗೆ ಕೊಂಡೊಯ್ಯಲಿದೆ. ಇದು ಕೈಗಾರಿಕಾ ಕ್ರಾಂತಿಗೆ ಮೊದಲು ಇದ್ದ ಜಾಗತಿಕ ಸರಾಸರಿ ತಾಪಮಾನಕ್ಕಿಂತ ಅಧಿಕವಾಗಿದೆ. ಅಷ್ಟು ಮಾತ್ರವಲ್ಲದೆ ವಿಶ್ವಸಂಸ್ಥೆ ನಿಗದಿಪಡಿಸಿದ 1.5 ಡಿ.ಸೆ. ಮಿತಿಗಿಂತ ದುಪ್ಪಟ್ಟಿನಷ್ಟಾಗಿದೆ. ಇದು ನಿಜಕ್ಕೂ ಕಳವಳಕಾರಿಯಾಗಿದ್ದು ವಿನಾಶದತ್ತ ನಮ್ಮನ್ನು ಕೊಂಡೊಯ್ಯುತ್ತಿದೆ. ತಾಪಮಾನ ನಿಯಂತ್ರಣದ ದಿಸೆಯಲ್ಲಿ ಜಾಗತಿಕ ಸಮುದಾಯದ ಪ್ರಯತ್ನ ತೀರಾ ನಿರಾಶಾದಾಯಕವಾಗಿದೆ. ಹವಾಮಾನ ಬದಲಾವಣೆ ಸಮಸ್ಯೆಯನ್ನು ರಾಷ್ಟ್ರಗಳು ಕೀಳಂದಾಜಿಸಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಾಗತಿಕ ಸಮುದಾಯದಲ್ಲಿ ಮಹತ್ವಾಕಾಂಕ್ಷೆ, ನಂಬಿಕೆ, ಬೆಂಬಲ, ಸಹಕಾರ, ಸ್ಪಷ್ಟತೆ ಮತ್ತು ವಿಶ್ವಾಸಾರ್ಹತೆಗಳ ಕೊರತೆ ಎದ್ದು ಕಾಣುತ್ತಿದೆ. ಇನ್ನಾದರೂ ವಿಶ್ವ ಸಮುದಾಯ ಎಚ್ಚೆತ್ತುಕೊಂಡು ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ ನಿಯಂತ್ರಿಸಲು ಪ್ರಬಲ ಇಚ್ಛಾಶಕ್ತಿ ಮತ್ತು ಬದ್ಧತೆ ತೋರಬೇಕಿದೆ ಎಂದವರು ಕಿವಿಮಾತು ಹೇಳಿದ್ದಾರೆ.
ಜೂ.9ರಂದು ಗರಿಷ್ಠ ತಾಪಮಾನ ದಾಖಲು
ಜೂ.7-11ರ ವರೆಗಿನ ಅವಧಿಯಲ್ಲಿ ಜಾಗತಿಕ ಸರಾಸರಿ ತಾಪಮಾನವು ನಿಗದಿತ ಮಿತಿಯಾದ 1.5 ಡಿ.ಸೆ. ಅಥವಾ ಅದಕ್ಕಿಂತ ಕೊಂಚ ಅಧಿಕವಾಗಿತ್ತು ಆದರೆ ಜೂನ್ 9ರಂದು ಗರಿಷ್ಠ 1.69 ಡಿ.ಸೆ. ಗಳಷ್ಟು ದಾಖಲಾಗುವ ಮೂಲಕ ಅಪಾಯದ ಕರೆಗಂಟೆಯನ್ನು ಬಾರಿಸಿದೆ. ಇದೇ ವೇಳೆ ಜೂ.8 ಮತ್ತು ಜೂ. 9ರಂದು ಜಾಗತಿಕ ಸರಾಸರಿ ದೈನಂದಿನ ಈ ದಿನಗಳಲ್ಲಿ ಈ ಹಿಂದೆ ದಾಖಲಾಗಿದ್ದ ಗರಿಷ್ಠ ತಾಪಮಾನಕ್ಕಿಂತ 0.4ಡಿ.ಸೆ.ನಷ್ಟು ಹೆಚ್ಚಿನದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್ ಬಿಹಾರಿ ವಾಜಪೇಯಿ ಭದ್ರ ಬುನಾದಿ
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belthangady: ಬೈಕ್ ಸವಾರ ಸಾವು ಪ್ರಕರಣ; ಸರಕಾರಿ ಬಸ್ ಚಾಲಕನಿಗೆ ಶಿಕ್ಷೆ;ದಂಡ
Egg Thrown: ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ: ಬಿಜೆಪಿ ನಾಯಕರು ಗರಂ
New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.