ಗೋವಾ ಚುನಾವಣೆ : 301 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ
ಪರ್ರಿಕರ್ ಗೆ ಶಿವಸೇನೆ ಬೆಂಬಲ
Team Udayavani, Feb 1, 2022, 6:13 PM IST
ಪಣಜಿ: ಫೆಬ್ರುವರಿ 14 ರಂದು ನಡೆಯಲಿರುವ ಗೋವಾ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 40 ಕ್ಷೇತ್ರಗಳಲ್ಲಿ ಒಟ್ಟೂ 301 ಅಭ್ಯರ್ಥಿಗಳು ತಮ್ಮ ಅದೃಷ್ಠ ಪರೀಕ್ಷೆ ನಡೆಸಲಿದ್ದಾರೆ. ನಾಮಪತ್ರ ಹಿಂಪಡೆಯಲು ಕೊನೇಯ ದಿನವಾದ ಇಂದು ರಾಜ್ಯದಲ್ಲಿ ಒಟ್ಟು 31 ಜನ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ.
ಮಡಗಾಂವ, ಬಾಣಾವಲಿ, ಪರ್ವರಿ, ಬಿಚೋಲಿ, ಸಾಂತಕ್ರೂಜ್ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಸಂಖ್ಯೆ 5 ಕ್ಕಿಂತ ಕಡಿಮೆಯಿದೆ. ಶಿವೋಲಿಂನಲ್ಲಿ ಅತಿ ಹೆಚ್ಚು ಅಂದರೆ 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮುಖ್ಯಮಂತ್ರಿ ಪ್ರಮೋದ ಸಾವಂತ್ ಸ್ಫರ್ಧಿಸಿರುವ ಸಾಖಳಿ ಕ್ಷೇತ್ರದಲ್ಲಿ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮಾಂದ್ರೆ ಕ್ಷೇತ್ರದಲ್ಲಿ-9, ಪರ್ಯೆ 9, ಬಿಚೋಲಿ 5, ಥಿವಿಮ್ 7, ಮಾಪ್ಸಾ 8, ಶಿವೋಲಿ 13, ಸಾಲಿಗಾಂವ 6, ಪರ್ವರಿ 5,. ಅಲ್ದೋಣ 6, ಪಣಜಿ 7, ತಾಲಿಗಾಂವ 8, ಸಾಂತಕ್ರೂಜ್ 5, ಸಾಂತಾಂದ್ರೆ 7, ಕುಂಭಾರಜುವೆ 7, ಮಯೆಮ್ 9, ಸಾಖಳಿ 12, ವಾಳಪೈ 8, ಪ್ರಿಯೋಳ 8, ಪೊಂಡಾ 7, ಶಿರೋಡಾ 8, ಮಡಕಯಿ 8, ಮಡಗಾಂವ 8, ವಾಸ್ಕೊ 9, ದಾಬೋಲಿಂ 7, ಕುಠ್ಠಾಳಿ 9, ನುವೆ 9, ವೆಳ್ಳಿ 6, ಕೆಫೆ 7, ಕುಡಚಡೆ 6, ಸಾವರ್ಡೆ 7, ಸಾಂಗೆ 8, ಕಾಣಕೋಣ 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಪರ್ರಿಕರ್ ಗೆ ಶಿವಸೇನೆ ಬೆಂಬಲ
ಪಣಜಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಉತ್ಪಲ್ ಪರ್ರಿಕರ್ ಗೆ ಬೆಂಬಲ ನೀಡಿ ಶಿವಸೇನೆ ತನ್ನ ಅಭ್ಯರ್ಥಿಯನ್ನು ಚುನಾವಣಾ ಕಣದಿಂದ ಹಿಂಪಡೆದಿದೆ.
ಈ ಕುರಿತು ಶಿವಸೇನೆ ಸಂಸದ ಸಂಜಯ ರಾವುತ್ ತಮ್ಮ ಟ್ವೀಟ್ ಖಾತೆಯಲ್ಲಿ ಟ್ವೀಟ್ ಮಾಡಿ, ನಾವು ನಮ್ಮ ಮಾತನ್ನು ಉಳಿಸಿಕೊಳ್ಳುತ್ತೇವೆ. ಪಣಜಿ ಕ್ಷೇತ್ರದಿಂದ ಶಿವಸೇನೆಯಿಂದ ಸ್ಪರ್ಧಿಸಿದ್ದ ಶೈಲೇಂದ್ರ ವೇಲಿಂಗ್‍ಕರ್ ರವರನ್ನು ಕಣದಿಂದ ಹಿಂಪಡೆದಿದ್ದೇವೆ. ನಮ್ಮ ಕಾರ್ಯಕರ್ತರು ಉತ್ಪಲ್ ಪರೀಕರ್ ರವರನ್ನು ಸಂಪೂರ್ಣವಾಗಿ ಬೆಂಬಲಿಸಲಿದ್ದಾರೆ ಎಂದು ಬರೆದಿದ್ದಾರೆ.
ಸ್ಥಳೀಯ ಕಾಂಗ್ರೆಸ್ ನಾಯಕರಾದ ಉದಯ್ ಮಡಕೈಕರ್, ಸುರೇಂದ್ರ ಫುರ್ತಾದೊ ರವರು ಉತ್ಪಲ್ ರವರಿಗೆ ಬೆಂಬಲ ನೀಡಿದ ಕೆಲ ದಿನಗಳ ನತರ ಶಿವಸೇನೆ ಕೂಡ ತನ್ನ ಸಂಪೂರ್ಣ ಬೆಂಬಲ ಘೋಷಿಸಿದೆ.
ಮಾಧ್ಯಮಗಳಿಗೆ ಉತ್ಪಲ್ ಪರೀಕರ್ ಪ್ರತಿಕ್ರಿಯೆ ನೀಡಿ, ಅಭಿವೃದ್ಧಿ ಕೆಲಸ ಮಾಡಲು ಆಡಳಿತದಲ್ಲಿಯೇ ಇರಬೇಕೆಂದಿಲ್ಲ. ವಿರೋಧ ಪಕ್ಷದಲ್ಲಿದ್ದರೂ ಅದನ್ನು ಮಾಡಬಹುದು. ನನ್ನ ತಂದೆ ಮನೋಹರ್ ಪರ್ರಿಕರ್ ರವರು ಅದನ್ನು ಸಾಬೀತು ಮಾಡಿದ್ದಾರೆ ಎಂದರು.
ಉತ್ಪಲ್ ಪಣಜಿ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಹೆಚ್ಚಿನ ನಿಗಾ ವಹಿಸಿದೆ. ರಾಜ್ಯದಲ್ಲಿ ನೀತಿಸಂಹಿತೆ ಕಟ್ಟು ನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು ಆಯೋಗವು ತಂಡವನ್ನು ನೇಮಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ
Maharashtra polls; ಫಲಿತಾಂಶದ ಬಳಿಕವೇ ಸಿಎಂ ಯಾರೆಂದು ನಿರ್ಧಾರ: ಕಾಂಗ್ರೆಸ್
Andhra; ಮಿತ್ರ ಪಕ್ಷ ಟಿಡಿಪಿಯ ಗೃಹ ಸಚಿವೆಗೇ ವಾರ್ನಿಂಗ್ ನೀಡಿದ ಡಿಸಿಎಂ ಪವನ್ ಕಲ್ಯಾಣ್!
Agra: ಭಾರತೀಯ ವಾಯುಪಡೆ ಮಿಗ್ 29 ಯುದ್ಧ ವಿಮಾನ ಪತನ, ಪೈಲಟ್ ಪಾರು
Jammu Kashmir: ಕಲಂ-370- ವಿಧಾನಸಭೆ ಮೊದಲ ಕಲಾಪದಲ್ಲೇ ಪಿಡಿಪಿ-ಬಿಜೆಪಿ ಕೋಲಾಹಲ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.