ತೃಣಮೂಲ ಕಾಂಗ್ರೆಸ್ ಜೊತೆ ಮೈತ್ರಿಗೆ ಮುಂದಾದ ಗೋವಾ ಫಾರ್ವರ್ಡ್ ಪಾರ್ಟಿ
Team Udayavani, Oct 17, 2021, 5:34 PM IST
ಪಣಜಿ:’2022 ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಜನವಿರೋಧಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ದೂರವಿಡುವ ನಿರ್ಣಯ ತೆಗೆದುಕೊಳ್ಳಲಾಗಿದೆ. ನಮ್ಮ ಪಕ್ಷವು ತೃಣಮೂಲ ಕಾಂಗ್ರೇಸ್ ಪಕ್ಷದೊಂದಿಗೆ ಮೈತ್ರಿ ಮಾತುಕತೆ ನಡೆಸುತ್ತಿದೆ’ಎಂದು ಗೋವಾ ಫಾರ್ವರ್ಡ್ ಪಕ್ಷದ ಅಧ್ಯಕ್ಷ ವಿಜಯ್ ಸರ್ದೇಸಾಯಿ ಭಾನುವಾರ ಹೇಳಿಕೆ ನೀಡಿದ್ದಾರೆ.
ಮಡಗಾಂವ್ ನಲ್ಲಿ ಪಕ್ಷದ ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ವಿಜಯ್ ಸರ್ದೇಸಾಯಿ, ಗೋವಾ ಬಿಜೆಪಿ ಸರಕಾರವು ಜನವಿರೋಧಿ ಸರಕಾರವಾಗಿದ್ದು, ಈ ಪಕ್ಷವು ದೆಹಲಿಯ ಆದೇಶದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು.
‘ಕೆಟ್ಟದ್ದನ್ನು ಹೊಡೆದೋಡಿಸಿ ಒಳ್ಳೆಯದನ್ನು ಶುಭಾರಂಭಗೊಳಿಸುವುದು ದಸರಾ ಹಬ್ಬದ ಸಂದೇಶವಾಗಿದೆ. ಗೋವಾದಲ್ಲಿ ಬಿಜೆಪಿ ರೂಪಿ ರಾವಣನ ವಧೆಗೆ ನಾವು ಸಜ್ಜಾಗಿದ್ದೇವೆ. ಇದಕ್ಕಾಗಿ ಪರ್ಯಾಯವನ್ನು ನಾವು ಜನರ ಮುಂದಿಡುತ್ತಿದ್ದೇವೆ. ಮುಂಬರುವ ರಾಜ್ಯ ಸರಕಾರ ನಮ್ಮ ಸರಕಾರವೇ ಆಗಿರಲಿದೆ’ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.