Gold: ಹಟ್ಟಿ ಗಣಿಯಲ್ಲಿ 1411 ಕೆಜಿ ಚಿನ್ನ ಉತ್ಪಾದನೆ
ದೇಶದ ಏಕೈಕ ಚಿನ್ನದ ಗಣಿ- ಹೆಚ್ಚಿದ ಚಿನ್ನದ ದರ, ಕಾರ್ಮಿಕರು, ಆಡಳಿತ ಮಂಡಳಿ ಹರ್ಷ
Team Udayavani, Apr 17, 2023, 7:20 AM IST
ಲಿಂಗಸುಗೂರು: ದೇಶದ ಏಕೈಕ ಚಿನ್ನದ ಗಣಿಯಾದ ತಾಲೂಕಿನ ಹಟ್ಟಿ ಚಿನ್ನದ ಗಣಿಯು 2022-23ನೇ ಆರ್ಥಿಕ ವರ್ಷಕ್ಕೆ 1411 ಕೆಜಿ ಚಿನ್ನ ಉತ್ಪಾದಿಸಿದೆ.
ಹಟ್ಟಿ ಚಿನ್ನದ ಗಣಿಯಲ್ಲಿ 2022-23ನೇ ಸಾಲಿನಲ್ಲಿ 7.53 ಲಕ್ಷ ಮೆಟ್ರಿಕ್ ಟನ್ ಅ ದಿರು ಸಂಸ್ಕರಿಸುವ ಗುರಿ ಹೊಂದಿದ್ದು, 6 ಲಕ್ಷ 5 ಸಾವಿರ 976 ಮೆಟ್ರಿಕ್ ಟನ್ ಅದಿರು ಸಂಸ್ಕರಿಸಲಾಗಿದೆ. ಪ್ರತಿ ಟನ್ ಅದಿರಿನಲ್ಲಿ 2.81 ಗ್ರಾಂ ಚಿನ್ನ ಉತ್ಪಾದನೆ ಗುರಿ ಹೊಂದಿದ್ದು, ಅದರಲ್ಲಿ ಟನ್‌ಗೆ 2.63 ಗ್ರಾಂ ಹಳದಿ ಲೋಹ ಉತ್ಪಾದನೆ ಸಾಧನೆಯಾಗಿದೆ.
ಕಳೆದ ವರ್ಷದ ಏಪ್ರಿಲ್‌ನಲ್ಲಿ 110 ಕೆಜಿ, ಮೇ 95 ಕೆಜಿ, ಜೂನ್ 83 ಕೆಜಿ, ಜುಲೈ 91ಕೆಜಿ, ಅಗಸ್ಟ್ 75 ಕೆಜಿ, ಸೆಪ್ಟೆಂಬರ್ 90 ಕೆಜಿ, ಅಕ್ಟೋಬರ್ 95 ಕೆಜಿ, ನವೆಂಬರ್ 130 ಕೆಜಿ, ಡಿಸೆಂಬರ್ 170 ಕೆಜಿ, ಜನವರಿ 172 ಕೆಜಿ, ಫೆಬ್ರವರಿ 134 ಕೆಜಿ ಹಾಗೂ ಮಾರ್ಚ್ ತಿಂಗಳಲ್ಲಿ 161 ಕೆಜಿ ಚಿನ್ನ ಉತ್ಪಾದಿಸಿ ಒಟ್ಟು 12 ತಿಂಗಳ ಅವ ಧಿಯಲ್ಲಿ 1411 ಕೆಜಿ ಚಿನ್ನ ಉತ್ಪಾದಿಸಿದ ಕಂಪನಿ ಲಾಭದತ್ತ ಹೆಜ್ಜೆ ಹಾಕಿದೆ.
ಚಿನ್ನದ ಬೆಲೆ ಹೆಚ್ಚಳ:
ಹಟ್ಟಿಚಿನ್ನದಗಣಿ ಕಂಪನಿ ಉತ್ಪಾದಿಸುವ 24 ಕ್ಯಾರೇಟ್ ಚಿನ್ನದ ದರ ಇಂದಿನ ಮಾರುಕಟ್ಟೆಯಲ್ಲಿ 60 ಸಾವಿರ ರೂ.ಗೂ ಅಧಿ ಕ ಬೆಲೆ ಇದೆ. ಇಂದಿನ ದರಕ್ಕೆ ಹೋಲಿಸಿದರೆ ತಿಂಗಳಿಗೆ ಸರಾಸರಿ 75ರಿಂದ 80 ಕೆಜಿ ಚಿನ್ನ ಉತ್ಪಾದಿಸಿದರೆ ಗಣಿಯ ಕಾರ್ಯ ಕ್ಷಮತೆ ಉಳಿಸಿಕೊಂಡು ಅಧಿ ಕ ಲಾಭ ಗಳಿಸುವ ದಿಸೆಯಲ್ಲಿ ಆಡಳಿತ ವರ್ಗ ಮಹತ್ವದ ಹೆಜ್ಜೆ ಇಟ್ಟಿದೆ. ಕಂಪನಿ 2021-22ನೇ ಆರ್ಥಿಕ ಸಾಲಿಗೆ 180 ಕೋಟಿ ಲಾಭ ಗಳಿಸಿದ್ದು, ವೆಚ್ಚವೆಲ್ಲವನ್ನೂ ತೆಗೆದರೆ 130 ಕೋಟಿ ರೂ. ನಿವ್ವಳ ಲಾಭಗಳಿಸಿತ್ತು. ಇಂದಿನ ಚಿನ್ನದ ದರ ಹೀಗೆ ಮುಂದುವರಿದರೆ ಕಳೆದ ಬಾರಿ ಲಾಭಕ್ಕಿಂತ ಹೆಚ್ಚಿನ ಲಾಭ ಗಳಿಕೆಯ ನಿರೀಕ್ಷೆ ಕಂಪನಿಗಿದೆ.
ಈಗಿರುವ ಚಿನ್ನದ ಉತ್ಪಾದನೆಯಿಂದ ಕಳೆದ ವರ್ಷ 130 ಕೋಟಿ ನಿವ್ವಳ ಲಾಭ ಗಳಿಸಿದೆ. ಈ ಬಾರಿಯು ಲಾಭಾಂಶ ತರುವಲ್ಲಿ ಯಾವುದೇ ಅನುಮಾನವಿಲ್ಲ. ಉತ್ಪಾದನೆಗೆ ಚುರುಕು ಮೂಡಿಸಲು ಮೇಲಿಂದ ಮೇಲೆ ಅಧಿ ಕಾರಿಗಳ ಸಭೆ ನಡೆಸಿ ತಿಳಿಸಲಾಗಿದೆ.
– ಸಂಜಯ್ ಶೆಟ್ಟಣ್ಣನವರ್, ವ್ಯವಸ್ಥಾಪಕ ನಿರ್ದೇಶಕ, ಹಟ್ಟಿ ಚಿನ್ನದ ಗಣಿ ಕಂಪನಿ
ಚಿನ್ನದ ಉತ್ಪಾದನೆಯಲ್ಲಿ ಕಳೆದ ವರ್ಷ ಆರಂಭದಲ್ಲಿ ಕೊಂಚ ಹಿನ್ನಡೆ ಕಂಡಿತ್ತು. ನಂತರದ ಐದು ತಿಂಗಳಲ್ಲಿ ಉತ್ಪಾದನೆಯಲ್ಲಿ ಗಣನೀಯ ಪ್ರಮಾಣ ಹೆಚ್ಚಾಗಿದ್ದು, ಇದಕ್ಕೆ ಕಾರ್ಮಿಕರ ಹಾಗೂ ಅ ಧಿಕಾರಿಗಳ ಪರಿಶ್ರಮವೇ ಕಾರಣವಾಗಿದೆ.
– ಪ್ರಕಾಶ್ ಬಹದ್ದೂರು, ಇಡಿ, ಹಟ್ಟಿ ಚಿನ್ನದ ಗಣಿ
~ ಶಿವರಾಜ ಕೆಂಭಾವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.