Mobile Industry: ಮೊಬೈಲ್ ಫೋನ್ ಗಳ ಬಿಡಿ ಭಾಗಗಳ ಆಮದು ಸುಂಕ ಶೇ.10ರಷ್ಟು ಇಳಿಕೆ
ಬಿಡಿ ಭಾಗಗಳ ಬೆಲೆಯನ್ನು ಇಳಿಕೆ ಮಾಡುವ ಬಗ್ಗೆ ಭಾರತ ಈ ಮೊದಲು ಮುನ್ಸೂಚನೆ ನೀಡಿತ್ತು.
Team Udayavani, Jan 31, 2024, 12:03 PM IST
ನವದೆಹಲಿ: ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಉಪಯೋಗಿಸಲಾಗುವ ಬಿಡಿ ಭಾಗಗಳ ಆಮದು ಸುಂಕವನ್ನು ಕಡಿತಗೊಳಿಸಲು ಭಾರತ ನಿರ್ಧರಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Toshakhana case: ಇಮ್ರಾನ್ ಖಾನ್, ಪತ್ನಿ ಬುಶ್ರಾ ಬೀಬಿಗೆ 14 ವರ್ಷಗಳ ಜೈಲು ಶಿಕ್ಷೆ
ವಿತ್ತ ಸಚಿವಾಲಯ ಮಂಗಳವಾರ ಹೊರಡಿಸಿದ್ದ ಪ್ರಕಟನೆಯಲ್ಲಿ ಮೊಬೈಲ್ ಫೋನ್ ಗಳ ಬಿಡಿ ಭಾಗದ ಆಮದು ಸುಂಕವನ್ನು ಶೇ.15ರಿಂದ 10ಕ್ಕೆ ಇಳಿಕೆ ಮಾಡಿರುವುದಾಗಿ ಘೋಷಿಸಿತ್ತು. ಏಷ್ಯಾದ ಮೂರನೇ ಅತೀ ದೊಡ್ಡ ಆರ್ಥಕತೆ ಹೊಂದಿರುವ ಭಾರತದ ರಫ್ತು ವ್ಯವಹಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವರದಿ ವಿವರಿಸಿದೆ.
ಪರಿಷ್ಕೃತ ಆಮದು ಸುಂಕದ ಬೆಲೆ ಎಲ್ಲಾ ಮೊಬೈಲ್ ಫೋನ್ ಗಳ ಬಿಡಿ ಭಾಗಗಳಿಗೆ ಅನ್ವಯಿಸಲಿದೆ. ಇದರಲ್ಲಿ ಮೊಬೈಲ್ ಫೋನ್ ಗಳ ಬ್ಯಾಟರಿ ಕವರ್ಸ್ಸ್, ಮೈನ್ ಲೆನ್ಸಸ್, ಬ್ಯಾಕ್ ಕವರ್ಸ್ಸ್ ಮತ್ತು ಇತರ ಪ್ಯಾಸ್ಟಿಕ್ ಮತ್ತು ಮೆಟಲ್ ಭಾಗಗಳು ಸೇರಿವೆ.
ದುಬಾರಿ ಮೊಬೈಲ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವಹಿಸುವ ಬಿಡಿ ಭಾಗಗಳ ಬೆಲೆಯನ್ನು ಇಳಿಕೆ ಮಾಡುವ ಬಗ್ಗೆ ಭಾರತ ಈ ಮೊದಲು ಮುನ್ಸೂಚನೆ ನೀಡಿತ್ತು.
ಆಮದು ಸುಂಕ ಇಳಿಕೆಯಿಂದಾಗಿ ಮೊಬೈಲ್ ಫೋನ್ ತಯಾರಿಕಾ ಕಂಪನಿಗಳಿಗೆ ಹೆಚ್ಚಿನ ಲಾಭವಾಗಲಿದ್ದು, ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ವಹಿವಾಟಿಗೆ ನೆರವಾಗಲಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.